Ukraine Crisis ಉಕ್ರೇನ್‌ನಿಂದ ನಾಗರೀಕರ ರಕ್ಷಣೆಗೆ ಹಣವಿಲ್ಲ, ಪಾಕಿಸ್ತಾನ ರಾಯಭಾರ ಕಚೇರಿ ಟ್ವೀಟ್ ಸತ್ಯಾಸತ್ಯತೆ ಏನು?
- ಪಾಕ್ ವಿದ್ಯಾರ್ಥಿಗಳ ರಕ್ಷಣೆ ಅಸಾಧ್ಯ ಎಂದು ಟ್ವೀಟ್
- ಸಿಬ್ಬಂದಿಗಳಿಗೆ ವೇತನ ನೀಡಲು ಹಣವಿಲ್ಲ, ರಕ್ಷಣೆ ಹೇಗೆ ಸಾಧ್ಯ?
- ರಾಯಭಾರಿ ಕಚೇರಿ ಟ್ವಿಟರ್ ಖಾತೆ ಹ್ಯಾಕ್ ಎಂದು ಸ್ಪಷ್ಟಪಡಿಸಿದ ಪಾಕ್
ಇಸ್ಲಾಮಾಬಾದ್(ಮಾ.01): ರಷ್ಯಾ ದಾಳಿಯಿಂದ ಉಕ್ರೇನ್‌ನಲ್ಲಿರುವ(Russia Ukraine War) ಸಿಲುಕಿರು ನಾಗರೀಕರ ರಕ್ಷಣೆ ಎಲ್ಲಾ ದೇಶಗಳಿಗೆ ಅತ್ಯಂತ ಸವಾಲಾಗಿದೆ. ಅಮೆರಿಕ, ಚೀನಾ, ಯುಕೆ, ಪಾಕಿಸ್ತಾನ ತನ್ನ ಕೈಯಿಂದ ಸಾಧ್ಯವಿಲ್ಲ ಎಂದು ಕುಳಿತಿರುವಾಗ ಭಾರತ(India) ಆಪರೇಶನ್ ಗಂಗಾ ಮಿಶನ್(Operation Ganga) ಅಡಿಯಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿ ಭಾರತೀಯರನ್ನು ಏರ್‌ಲಿಫ್ಟ್ ಮಾಡುತ್ತಿದೆ. ರಕ್ಷಣೆ ಸಂಕಷ್ಟದ ನಡುವೆ ಪಾಕಿಸ್ತಾನಕ್ಕೆ ಹೊಸ ತಲೆನೋವು ಶುರುವಾಗಿದೆ. ಅಲ್ಜಿರಿಯಾದ ಪಾಕಿಸ್ತಾನ(Pakistan) ರಾಯಭಾರ ಕಚೇರಿ ಟ್ವಿಟರ್ ಖಾತೆ ಹ್ಯಾಕ್ ಮಾಡಿ ಅಸಂಬದ್ಧ ಪೋಸ್ಟ್ ಹಾಕಲಾಗಿದೆ. ಈ ಕುರಿತು ಸ್ವತ ಪಾಕಿಸ್ತಾನ ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದೆ.
ಅಲ್ಜಿರಿಯಾದಲ್ಲಿರುವ ಪಾಕಿಸ್ತಾನ ರಾಯಭಾರ(Embassy) ಕಚೇರಿ ಟ್ವಿಟರ್ ಖಾತೆಯಲ್ಲಿನ ಟ್ವೀಟ್(Tweet) ಭಾರಿ ಸಂಚಲನ ಸೃಷ್ಟಿಸಿತ್ತು. ಉಕ್ರೇನ್‌ನಲ್ಲಿ ಸಿಲಿಕಿರುವ ಪಾಕ್ ನಾಗರೀಕರ ರಕ್ಷಣೆ ಸಾಧ್ಯವಿಲ್ಲ. ನಮ್ಮ ಸಿಬ್ಬಂದಿಗಳಿಗೆ ವೇತನ ನೀಡಲು ಹಣವಿಲ್ಲ. ನಾವಿನ್ನು ಭಾರತದಿಂದ ಹಣ ಕೇಳಬೇಕಿದೆ. ಈಗಾಗಲೇ ಭಾರತದ ಧ್ವಜ(Indian Flag) ಬಳಸಿ ಪಾಕಿಸ್ತಾನ ನಾಗರೀಕರು ಉಕ್ರೇನ್‌ನಿಂದ ಸುರಕ್ಷಿತವಾಗಿ ಹೊರಬರುತ್ತಿದ್ದಾರೆ ಎಂದು ಅಲ್ಜಿರಿಯಾದ ಪಾಕಿಸ್ತಾನ ರಾಯಭಾರ ಕಚೇರಿ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು.
Russia Ukraine War: ಉಕ್ರೇನ್‌ನಲ್ಲಿ ಹೆಚ್ಚಾಯ್ತು ಟೆನ್ಷನ್, ಸುರಕ್ಷಿತ ಸ್ಥಳದತ್ತ ಕನ್ನಡಿಗರು
ಇನ್ನು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಹಲವು ಸುದ್ದಿಗಳು ಹರಿದಾಡತೊಡಗಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದೆ. ಅಲ್ಜಿರಿಯಾದ ಪಾಕಿಸ್ತಾನ ರಾಯಭಾರಿ( Pakistan’s embassy in Algeria) ಕಚೇರಿಯ ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್ ಮಾಡಲಾಗಿದೆ. ಈ ಖಾತೆಗಳಲ್ಲಿ ಇತ್ತೀಚೆಗೆ ಹಾಕಿರುವ ಪೋಸ್ಟ್‌ಗಳು ಅಧಿಕೃತವಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ಸ್ಪಷ್ಟನೆ ನೀಡಿದೆ.
ಪಾಕಿಸ್ತಾನ ನಾಗರೀಕರು, ವಿದ್ಯಾರ್ಥಿಗಳ ರಕ್ಷಣೆಗೆ ಹಣವಿಲ್ಲ ಅನ್ನೋದು ಶುದ್ಧ ಸುಳ್ಳು. ಆದರೆ ಉಕ್ರೇನ್ ಪರಿಸ್ಥಿತಿ ಗಂಭೀರವಾಗಿರುವುದರಿಂದ ಪಾಕಿಸ್ತಾನಕ್ಕೆ ತನ್ನ ನಾಗರೀಕರ ರಕ್ಷಣೆ ಸಾಧ್ಯವಾಗುತ್ತಿಲ್ಲ ಅನ್ನೋದು ಸ್ಪಷ್ಟ. ಇಷ್ಟೇ ಅಲ್ಲ, ಉಕ್ರೇನ್‌ನಿಂದ ಪೊಲೆಂಡ್, ಸ್ಲೋವಾಕಿಯಾ ಸೇರಿದಂತೆ ನೆರೆ ರಾಷ್ಟ್ರಗಳಿಗೆ ಸುರಕ್ಷಿತವಾಗಿ ತೆರಳಲು ಪಾಕಿಸ್ತಾನ, ಟರ್ಕಿ ಸೇರಿದಂತೆ ಇತರ ಕೆಲ ದೇಶದ ವಿದ್ಯಾರ್ಥಿಗಳು ಭಾರತದ ರಾಷ್ಟ್ರ ಧ್ವಜ ಬಳಿಸಿರುವುದು ಸ್ಪಷ್ಟವಾಗಿದೆ. ಈಗಾಗಲೇ ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ ಪಾಕಿಸ್ತಾನ ಹಾಗೂ ಟರ್ಕಿ ವಿದ್ಯಾರ್ಥಿಗಳು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
Russia- Ukraine War: ಖಾರ್ಕೀವ್ ನಗರದ ಮೆಡಿಕಲ್ ಸೆಂಟರ್‌ಗಳಿಗೆ ನುಗ್ಗಿದ ರಷ್ಯಾ ಸೇನೆ
ಭಾರತದ ರಾಷ್ಟ್ರ ಧ್ವಜ ಇರುವ ಬಸ್ ಹಾಗೂ ವಾಹನಗಳಿಗೆ ಉಕ್ರೇನ್ ಅಧಿಕಾರಿಗಳು ನೆರವು ನೀಡಿದ್ದರೆ, ಇತ್ತ ರಷ್ಯಾ ಸೇನೆ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದೆ. ಇನ್ನು ಭಾರತದ ರಾಯಭಾರ ಕಚೇರಿ, ಭಾರತೀಯರ ರಕ್ಷಣೆಗೆ ನೆರವು ಕೇಳಿ ಕೇಂದ್ರ ಸರ್ಕಾರ ರಷ್ಯಾ ಹಾಗೂ ಉಕ್ರೇನ್ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದೆ.
ಭಾರತೀಯರ ರಕ್ಷಣೆಗೆ ಮೋದಿ ಚುರುಕು
ಉಕ್ರೇನ್‌ನಲ್ಲಿ ಸಿಕ್ಕಿಬಿದ್ದ ಭಾರತೀಯರ ತೆರವು ಕಾರ್ಯಾಚರಣೆಗೆ ಮುಂದಾಗುವಂತೆ ಭಾರತೀಯ ವಾಯುಪಡೆಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಏಕಕಾಲದಲ್ಲಿ ಭಾರೀ ಪ್ರಮಾಣದ ಜನರನ್ನು ಹೊತ್ತುತರುವ ಸಾಮರ್ಥ್ಯ ಹೊಂದಿರುವ ಹಲವು ಸಿ-17 ಗ್ಲೋಬ್‌ಮಾಸ್ಟರ್ ವಿಮಾನಗಳನ್ನು ‘ಆಪರೇಷನ್ ಗಂಗಾ’ ಕಾರ್ಯಾಚರಣೆಗೆ ನಿಯೋಜಿಸಲು ವಾಯುಪಡೆ ನಿರ್ಧರಿಸಿದೆ.
ಇದೇ ವೇಳೆ ಉಕ್ರೇನ್ ಮೇಲೆ ರಷ್ಯಾ ದಾಳಿ ತೀವ್ರಗೊಂಡಿರುವ ಕಾರಣ ಮತ್ತು ಅಲ್ಲಿ ಕನ್ನಡಿಗ ವಿದ್ಯಾರ್ಥಿ ಸಾವಿನ ಬೆನ್ನಲ್ಲೇ ಮೋದಿ ಮಂಗಳವಾರ ಹಿರಿಯ ಅಧಿಕಾರಿಗಳು ಮತ್ತು ಸಚಿವರ ಜೊತೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಅದರಲ್ಲಿ, ಪ್ರತಿಯೊಬ್ಬ ಭಾರತೀಯನ ರಕ್ಷಣೆಗೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.