ಇಸ್ಲಾಮಾಬಾದ್(ಅ.23): ಪಾಕಿಸ್ತಾನಕ್ಕೆ ಗ್ರೇ ಪಟ್ಟಿಯಿಂದ ಹೊರಬರುವ ಲಕ್ಷಣಗಳು ಗೋಚರಿಸುತ್ತಿಲ್ಲ. ಅಂತಾರಾಷ್ಟ್ರೀಯ ಹಣಕಾಸು ಕ್ರಿಯಾ ಕಾರ್ಯಪಡೆಯ (FATF) 27 ಅಂಶಗಳ ಪೈಕಿ 6 ಅಂಶಗಳನ್ನು ಅನುಸರಿಸಲು ಪಾಕಿಸ್ತಾನ ವಿಫಲವಾಗಿದೆ. ಉಗ್ರರಿಗೆ ಹಣಕಾಸು ನೆರವು ಹಾಗೂ ಅಕ್ರಮ ಹಣ ವರ್ಗಾವಣೆಯಲ್ಲಿ ಪಾಕಿಸ್ತಾನ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೀಗಾಗಿ ಪಾಕಿಸ್ತಾನಕ್ಕೇ ಗ್ರೇ ಪಟ್ಟಿ ಗಟ್ಟಿಯಾಗಿ ಉಳಿದುಕೊಂಡಿದೆ.

ಉಗ್ರರ ಹಣದ ಮಾರ್ಗ ಬಂದ್‌ಗೆ ಪಾಕಿಸ್ತಾನಕ್ಕೆ 4 ತಿಂಗಳ ಗಡುವು!.

ಭಯೋತ್ವಾದಕರಿಗೆ ಹಣಕಾಸು ನೆರವು ಹಾಗೂ ಮನಿ ಲಾಂಡರಿಂಗ್ ತಡೆಯಲು ಪ್ಯಾರಿಸ್ ಮೂಲದ ಗ್ಲೋಬಲ್ ವಾಚ್ ಡಾಗ್ ವರ್ಚುವಲ್ ಪ್ಲೀನರಿ ಅಧಿವೇಶನ ನಡೆಸಲಿದೆ. ಇದಕ್ಕಾಗಿ 27 ಅಂಶಗಳ ಕ್ರಿಯಾ ಯೋಜನೆ ರೂಪಿಸಿದೆ. ಈ ಕ್ರೀಯಾ ಯೋಜನೆಯಲ್ಲಿರುವ ಪ್ರಮುಖ 6 ಅಂಶಗಳನ್ನು ಅನುಸರಿಸಲು ಪಾಕಿಸ್ತಾನ ವಿಫಲವಾಗಿದೆ. ಅಕ್ಟೋಬರ್ 21 ರಿಂದ 23ರ ವರೆಗೆ ವರ್ಚುವಲ್ ಪ್ಲೀನರಿ ಅಧಿವೇಶನ ನಡೆಸಲಿದೆ.

ನೀವಿನ್ನು ಡಾರ್ಕ್ ಗ್ರೆ ಪಟ್ಟಿಗೆ: FATF ಗುದ್ದಿತು ಪಾಕಿಸ್ತಾನದ ಮುಸುಡಿಗೆ!.

ಅಂತಾರಾಷ್ಟ್ರೀಯ ಹಣಕಾಸು ಕ್ರಿಯಾ ಕಾರ್ಯಪಡೆಯ (FATF) 2018ರಲ್ಲಿ ಪಾಕಿಸ್ತಾನವನ್ನು ಗೇ ಪಟ್ಟಿಯಲ್ಲಿ ಸೇರಿಸಿತ್ತು.  2019ರ ವೇಳೆಗೆ ಭಯೋತ್ಪಾದಕರಿಗೆ ಹಣಕಾಸು ನೆರವು, ಅಕ್ರಮ ಹಣ ವರ್ಗಾವಣೆ ನಿಲ್ಲಿಸುವಂತೆ ಸೂಚಿಸಿತ್ತು. ಆದರೆ ಕೊರೋನಾ ವೈರಸ್ ಕಾರಣ ಪಾಕಿಸ್ತಾನಕ್ಕೆ ನೀಡಿದ ಅವಧಿಯನ್ನು ವಿಸ್ತರಿಸಲಾಗಿತ್ತು. 

ಮುಂದಿನ ವರ್ಷ ಪಾಕಿಸ್ತಾನ ಗ್ರೇ ಪಟ್ಟಿಯಿಂದ ಹೊಬರಲಿದೆ ಎಂದು ಪಾಕಿಸ್ತಾನ ಡಿಪ್ಲೋಮ್ಯಾಟಿಕ್ ಮೂಲಗಳು ಪಾಕಿಸ್ತಾನದ ಟ್ರಿಬ್ಯೂನಲ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದೆ. ಇದೇ ವೇಳೆ ಪಾಕಿಸ್ತಾನ ಗ್ರೇ ಪಟ್ಟಿಯಿಂದ ನಿರ್ಗಮಿಸುವ ಸಾಧ್ಯತೆ ಕಡಿಮೆ. ಆದರೆ ಕಪ್ಪು ಪಟ್ಟಿಗೆ ಸೇರುವುದನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದೆ ಎಂದು ವರದಿಯಲ್ಲಿ ಹೇಳಿದೆ. ಪಾಕಿಸ್ತಾನ 21 ಅಂಶಗಳನ್ನು ಅನುಸರಿಸಿದೆ. ಈ ಮೂಲಕ ಕಪ್ಪು ಪಟ್ಟಿಯಿಂದ ದೂರ ಉಳಿದಿದೆ. ಇನ್ನುಳಿದ 6 ಅಂಶಗಳಲ್ಲಿ ಶೇಕಡಾ 20 ರಷ್ಟು ಯಶಸ್ಸು ಸಾಧಿಸಿದೆ ಎಂದು ಟ್ರಿಬ್ಯೂನಲ್ ವರದಿ ಉಲ್ಲೇಖಿಸಿದೆ.

FATF ಗ್ರೇ ಪಟ್ಟಿಯಿಂದ ಹೊರಬರಲು ಪಾಕಿಸ್ತಾನಕ್ಕೆ 88 ಭಯೋತ್ವಾದಕ ಗುಂಪು ಹಾಗೂ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲು ಹಾಗೂ ಆರ್ಥಿಕ ನಿರ್ಬಂಧ ವಿಧಿಸಲು ಸೂಚಿಸಿತ್ತು. ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸೈಯದ್ ವಿರುದ್ಧವೂ ಕ್ರಮಕೈಗೊಳ್ಳುವಂತೆ FATF ಸೂಚಿಸಿತ್ತು. ಆದರೆ ಈ ವಿಚಾರದಲ್ಲಿ ಪಾಕಿಸ್ತಾನ ಯಾವುದೇ ಕ್ರಮಕೈಗೊಳ್ಳಲು ಸಾಧ್ಯವಾಗಿಲ್ಲ.