ಕಾಲೇಜ್ ಕ್ಯಾಂಪಸ್‌ನಲ್ಲಿ ಪ್ರಪೋಸ್; ವಿದ್ಯಾರ್ಥಿಗಳಿಬ್ಬರು ಸಸ್ಪೆಂಡ್ !
ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಯ ಸ್ವರೂಪ ಪಡೆದುಕೊಂಡಿದೆ. ಕೊನೆಗೂ ಧೈರ್ಯ ಮಾಡಿದ ಹುಡುಗಿ ತನ್ನ ಇನಿಯನಿಗೆ ಗುಲಾಬಿ ಹೂ ಹಿಡಿದು ಮೊಣಕಾಲೂರಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾಳೆ. ಆಕೆ ಪ್ರೀತಿಗೆ ಹುಡುಗ ಕೂಡ ಒಪ್ಪಿ ಬಿಗಿದಪ್ಪಿದ್ದಾನೆ. ಇಷ್ಟೆ ನೋಡಿ, ಇಬ್ಬರು ಕಾಲೇಜ್‌ನಿಂದ ಸಸ್ಪೆಂಡ್ ಆಗಿದ್ದಾರೆ.
ಲಾಹೋರ್(ಮಾ.14): ಹೆಚ್ಚಿನ ಸಂದರ್ಭದಲ್ಲಿ ಹುಡುಗ ಮೊಣಕಾಲೂರಿ ಹುಡುಗಿಗೆ ಪ್ರಪೋಸ್ ಮಾಡಿರುವ ವಿಡಿಯೋಗಳು ವೈರಲ್ ಆಗಿವೆ. ಇಲ್ಲಿ ಹುಡುಗಿ ಮೊಣಕಾಲೂರಿ ಗುಲಾಬಿ ಹೂಗುಚ್ಚ ನೀಡಿ ತನ್ನ ಪ್ರೀತಿ ನಿವೇದನೆ ಮಾಡಿಕೊಂಡಿದ್ದಾಳೆ. ಆಕೆ ಪ್ರೀತಿಗೆ ಮನಸೋತ ಹುಡುಗ ಹೂಗುಚ್ಚ ಸ್ವೀಕರಿಸಿ ಆಕೆಯ ಬಿಗಿದಪ್ಪಿ ಸಮ್ಮತಿಸಿ ಸೂಚಿಸಿದ್ದಾನೆ. ಇವೆಲ್ಲವೂ ನಡೆದಿದ್ದು ಕಾಲೇಜ್ ಕ್ಯಾಂಪಸ್‌ನಲ್ಲಿ. ಕಾಲೇಜು ನಿಯಮ ಉಲ್ಲಂಘಿಸಿದ ಕಾರಣಕ್ಕೆ ಇಬ್ಬರೂ ವಿದ್ಯಾರ್ಥಿಗಳು ಸಸ್ಪೆಂಡ್ ಆಗಿದ್ದಾರೆ.
ಪ್ರಪೋಸ್ ಮಾಡುವಾಗ ಮೊಣಕಾಲಿನ ಮೇಲೆ ಕೂರುವುದೇಕೆ?.
ಇದು ಭಾರತದಲ್ಲಿ ನಡೆದ ಘಟನೆಯಲ್ಲ. ಪಾಕಿಸ್ತಾನದ ಲಾಹೋರ್‌ನಲ್ಲಿ ಪ್ರಖ್ಯಾತ ವಿಶ್ವವಿದ್ಯಾಲಯದಲ್ಲಿ ನಡೆದ ಘಟನೆ. ಪ್ರಪೋಸ್ ವಿಡಿಯೋವನ್ನು ಸುತ್ತಲೂ ನರೆದಿದ್ದ ವಿದ್ಯಾರ್ಥಿಗಳು ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಲಾಹೋರ್‌ನ ವಿಶ್ವವಿದ್ಯಾಲಯ ಇಬ್ಬರು ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಅಪ್ಪಿಕೊಂಡಿದ್ದಾರೆ. ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಇದು ಕಾಲೇಜು ನಿಯಮಕ್ಕೆ ವಿರುದ್ಧವಾಗಿದೆ. ಹೀಗಾಗಿ ಅಮಾನತು ಮಾಡುವುದಾಗಿ ಹೇಳಿದೆ.
ಭಾರತ ಪಂದ್ಯ ಸೋತ್ರೂ ಪ್ರೀತಿಯಲ್ಲಿ ಗೆದ್ದ ಅಭಿಮಾನಿ... ಲೈವ್ ಪ್ರಪೋಸ್!
ಕಾಲೇಜಿನ ಶಿಸ್ತು ಸಮಿತಿ ಸಭೆ ಕರೆದು ಈ ನಿರ್ಧಾರ ತೆಗೆದುಕೊಂಡಿದೆ. ಇಬ್ಬರು ವಿದ್ಯಾರ್ಥಿಗಳಿಗೆ ಘಟನೆ ಕುರಿತು ಉತ್ತರಿಸಲು ಸೂಚಿಸಲಾಗಿತ್ತು. ಆದರೆ ವಿದ್ಯಾರ್ಥಿಗಳು ಶಿಸ್ತು ಸಮಿತಿ ಮುಂದೆ ಹಾಜರಾಗಿಲ್ಲ. ಹೀಗಾಗಿ ಕಾಲೇಜು ಶಿಸ್ತು ಸಮಿತಿ ವಿಡಿಯೋ ಆಧರಿಸಿ ಇಬ್ಬರು ವಿದ್ಯಾರ್ಥಿಗಳನ್ನು ಅಮಾನತು ಮಾಡಿದೆ.
ಆದರೆ ಕಾಲೇಜು ನಿರ್ಧಾರದ ವಿರುದ್ಧ ಬಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಪಾಕಿಸ್ತಾನ ಮಾಜಿ ಪ್ರಧಾನಿ ಬೆನಜೀರ್ ಬುಟ್ಟೋ ಪುತ್ರಿ ಬಖ್ತವರ್ ಬುಟ್ಟೋ ಜರ್ದಾರಿ ಕಾಲೇಜು ನಿರ್ಧಾರವನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ. ಇಷ್ಟೇ ಅಲ್ಲ ಸಮಾಜಿಕ ಜಾಲತಾಣದಲ್ಲಿ ಕಾಲೇಜು ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಆದರೆ ಕೆಲವರು ಕಾಲೇಜು ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಇಸ್ಲಾಂ ಧರ್ಮದಲ್ಲಿ ಇದಕ್ಕೆಲ್ಲ ಅವಕಾಶವಿಲ್ಲ. ವಿದ್ಯೆ ಕಲಿಯುವ ಕ್ಯಾಂಪಸ್‌ನಲ್ಲಿ ಪ್ರೇಮ ನಿವೇದನೆ ತಪ್ಪು ಎಂದು ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.