ಸಿಡ್ನಿ(ನ.  29)   ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲು ಕಂಡಿದೆ.. ಆದರೆ ಈ ಭಾರತದ ಯುವಕ ಪ್ರೀತಿಯಲ್ಲಿ ಗೆದ್ದಿದ್ದಾನೆ. . ಭಾರತ ಕ್ರಿಕೆಟ್ ತಂಡದ ಅಭಿಮಾನಿಯೊಬ್ಬ ಆಸ್ಟ್ರೇಲಿಯಾ ಯುವತಿಗೆ ಪ್ರಪೋಸ್ ಮಾಡಿ ಪ್ರೀತಿ ಸಕ್ಸಸ್ ಆಗಿದೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಪಂದ್ಯ ನಡೆಯುತ್ತಿರುವಾಗಲೇ ಪ್ರಪೋಸ್ ಮಾಡಿದ್ದಾನೆ. ಹಲವು ಜನರ ಮಧ್ಯೆ ಭಾರತ ಕ್ರಿಕೆಟ್ ತಂಡದ ಅಭಿಮಾನಿ ಆಸ್ಟ್ರೇಲಿಯಾ ಯುವತಿಗೆ ಪ್ರೇಮ ನಿವೇದನೆ ಮಾಡಿದ್ದಾನೆ. ಕ್ಯಾಮರಾದಲ್ಲಿ ಎಲ್ಲವೂ ಸೆರೆಯಾಗಿದೆ.

ಭಾರತಕ್ಕೆ ಮತ್ತೊಂದು ಸೋಲು.. ಸರಣಿ ಆಸಿಸ್ ಪಾಲು

ಭಾರತ ಚೇಸಿಂಗ್  ಮಾಡುತ್ತಿದ್ದ ವೇಳೆ ಪ್ರಪೋಸ್ ಮಾಡಿದ್ದಾನೆ.  ಆಸ್ಪ್ರೇಲಿಯಾದ ಆಟಗಾರ ಮ್ಯಾಕ್ಸ್ ವೆಲ್ ಸಹ ಜೋಡಿಗೆ ಶುಭಕೋರಿದ್ದಾರೆ. ಒಟ್ಟಿನಲ್ಲಿ ಭಾರತ ಪಂದ್ಯ ಸೋತರೂ ಈ ವ್ಯಕ್ತಿಗೆ ಮ್ಯಾನ್ ಆಫ್ ದಿ ಮ್ಯಾಚ್ ಪುರಸ್ಕಾರ ನೀಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಗಳು ಬಂದಿವೆ.