ಕರಾಚಿ(ಆ.22): 1993ರ ಮುಂಬೈ ಸ್ಫೋಟದ ಪ್ರಮುಖ ಆರೋಪಿ, ಭಾರತದ ಮೋಸ್ಟ್ ವಾಂಟೆಡ್ ಪಾತಕಿ ದಾವುದ್ ಇಬ್ರಾಹಿಂನನ್ನು ಪಾಕಿಸ್ತಾನ ಪೋಷಿಸುತ್ತಿದೆ ಎಂದು ಭಾರತ ದಶಕಗಳಿಂದ ಹೇಳುತ್ತಾ ಬಂದಿದೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ಭಾರತದ ಈ ಕುರಿತು ಪಾಕಿಸ್ತಾನ ವಿರುದ್ಧ ಗರಂ ಆಗಿದೆ. ಆದರೆ ಇಬ್ರಾಹಿಂ ಪಾಕಿಸ್ತಾನದಲ್ಲಿಲ್ಲ ಎಂದು ಸುಳ್ಳು ಹೇಳುತ್ತಲೇ ಬಂದಿದ್ದ ಪಾಕಿಸ್ತಾನದ ಅಸಲಿ ಮುಖ ಮತ್ತೊಮ್ಮೆ ಬಯಲಾಗಿದೆ. ಇದೀಗ ಪಾತಕಿ ದಾವುದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ಇರುವುದನನ್ನು ಇಮ್ರಾನ್ ಖಾನ್ ಸರ್ಕಾರ ಬಹಿರಂಗ ಪಡಿಸಿದೆ.

ಸುಶಾಂತ್ ಸಾವು ದಾವೂದ್ ಗ್ಯಾಂಗ್‌ ಮಾಡಿದ ಕೊಲೆ; ಮಾಜಿ ರಾ ಅಧಿಕಾರಿ.

ಪಾಕಿಸ್ತಾನ ಸರ್ಕಾರ 88 ಉಗ್ರ ಸಂಘಟನೆಗಳನ್ನು ಬ್ಯಾನ್ ಮಾಡಿ ಹಿಟ್ ಲಿಸ್ಟ್‌ನಲ್ಲಿ ಸೇರಿಸಿದೆ. ಈ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ದಾವುದ್ ಇಬ್ರಾಹಿಂ ಹೆಸರು ಕೂಡ ಇದೆ. ಭಯೋತ್ಪಾದಕ ಸಂಘಟನೆಗಳು ಹಾಗೂ ಭಯೋತ್ವಾದಕ ನಾಯಕರಾದ ಹಫೀಜ್ ಸಯೀದ್, ಮಸೂದ್ ಅಜರ್ ಮತ್ತು ದಾವೂದ್ ಇಬ್ರಾಹಿಂ ಸೇರಿದಂತೆ ಒಟ್ಟು 88 ಸಂಘಟನೆಗಳು ಹಾಗೂ ಹಲವು ಭಯೋತ್ವಾದಕರ ಆಸ್ತಿ ವಶಪಡಿಸಿಕೊಳ್ಳಲು ಪಾಕ್ ಸರ್ಕಾರ ಆದೇಶಿಸಿದೆ.ಇಷ್ಟೇ ಅಲ್ಲ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡುವ ಮೂಲಕ ಆರ್ಥಿಕ ನಿರ್ಬಂಧ ಹೇರಲು ಪಾಕಿಸ್ತಾನ ಸರ್ಕಾರ ಆದೇಶಿಸಿದೆ.

ದಾವೂದ್‌ ಜೊತೆಗೂಡಿ ಭಾರತದಲ್ಲಿ ದಾಳಿಗೆ ಲಷ್ಕರ್‌ ಉಗ್ರ ಸಂಚು!

ಸದ್ಯ ಪಾಕಿಸ್ತಾನ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಪ್ರಮುಖವಾಗಿ 2008ರ ಮುಂಬೈ ದಾಳಿ ರೂವಾರಿ ಜಮಾತ್ ಉದ್ ದಾವಾ ಹಫೀಝ್ ಸೈಯದ್, ಜೈಶೈ ಇ ಮೊಹಮ್ಮದ್ ಮುಖ್ಯಸ್ಥ ಅಜರ್ ಮೊಹಮ್ಮದ್ ಹಾಗೂ ದಾವುದ್ ಇಬ್ರಾಹಿಂ ಸೇರಿಸಲಾಗಿದೆ. ವೈಟ್ ಹೌಸ್, ಸೌದಿ ಮಸೀದಿ ಹತ್ತಿರ, ಕ್ಲಿಫ್ಟನ್, ಕರಾಚಿ, ಪಾಕಿಸ್ತಾನ ಎಂದು ದಾವುದ್ ಇಬ್ರಾಹಿಂ ವಿಳಾಸವನ್ನು ಉಲ್ಲೇಖಿಸಿದೆ. ಈ ಮೂಲಕ ದಾವುದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ಇಲ್ಲ ಎಂದು ಡಂಗುರ ಸಾರಿದ್ದ ಪಾರಿಸ್ತಾನದ ಅಸಲಿಯತ್ತು ಮತ್ತೆ ಬಹಿರಂಗವಾಗಿದೆ.

ದಾವುದ್ ಕರಾಚಿಯಲ್ಲಿನ ಮನೆ ಮಾತ್ರವಲ್ಲ ಇತರ ಆಸ್ತಿಗಳ ವಿವರವನ್ನು ಪಾಕಿಸ್ತಾನ ಸರ್ಕಾರ ಬಹಿರಂಗಪಡಿಸಿದೆ. ಹೌಸ್, NU 37, 30ನೇ ರಸ್ತೆ-ಡಿಫೆನ್ಸ್, ಹೌಸಿಂಗ್ ಆಥಾರಿಟಿ, ಕರಾಚಿಯಲ್ಲಿ ದಾವುದ್ ಆಸ್ತಿ ಇದೆ.  ಇನ್ನು ಕರಾಚಿಯ ನೂರಾಬಾದ್ ಪ್ರದೇಶದಲ್ಲಿ ಪಲಾಟಿಯಲ್ ಬಂಗಲೆ ಇದೆ ಎಂದು ಇಮ್ರಾನ್ ಖಾನ್ ಸರ್ಕಾರ ಹೇಳಿದೆ.

2018ರಲ್ಲಿ ಪ್ಯಾರಿಸ್ ಮೂಲದ ಫಿನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್(FATF) ಪಾಕಿಸ್ತಾನದಲ್ಲಿನ ಭಯೋತ್ಪಾದನೆ ಚುಟವಟಿಕೆ ಹಾಗೂ ಉಗ್ರ ಸಂಘಟನೆಗಳ ಕುರಿತು ಸರ್ಕಾರ ವರದಿ ನೀಡುವಂತೆ ಕೋರಿತ್ತು. ಇಷ್ಟೇ ಅಲ್ಲ ಪಾಕಿಸ್ತಾನವನ್ನು ಗ್ರೇ(ಬೂದು ಪಟ್ಟಿಗೆ) ಸೇರಿಸಿತ್ತು. 2019ರ ಅಂತ್ಯಕ್ಕೆ ವರದಿ ನೀಡಲು ಕೋರಿತ್ತು. ಆದರೆ ಕೊರೋನಾ ವೈರಸ್ ಕಾರಣ ಅವಧಿ ಮುಂದೂಡಲಾಗಿತ್ತು. ಹಲವು ಒತ್ತಡಕ್ಕೆ ಮಣಿದ ಪಾಕಿಸ್ತಾನ ಅನಿವಾರ್ಯವಾಗಿ 88 ಉಗ್ರ ಸಂಘಟನೆಗಳನ್ನು ಕಪ್ಪು ಪಟ್ಟಿಗೆ ಸೇರಿಸಿದೆ.