Asianet Suvarna News Asianet Suvarna News

ಉಗ್ರರು, ಕತ್ತೆ ಬಳಿಕ ಭಿಕ್ಷುಕರ ರಫ್ತು ಮಾಡುತ್ತಿದೆ ಪಾಕಿಸ್ತಾನ, ಸ್ಫೋಟಕ ವರದಿ ಬಹಿರಂಗ!

ಪಾಕಿಸ್ತಾನ ಭಯೋತ್ಪಾದಕರನ್ನು ಭಾರತದೊಳಗೆ ನುಗ್ಗಿಸುವ ಪ್ರಯತ್ನ ಮಾಡುತ್ತಲೇ ಇದೆ. ಪಾಕ್ ಭಯೋತ್ಪಾದಕರನ್ನು ಭಾರತ ಹಾಗೂ ಇತರ ಕೆಲ ದೇಶಗಳಿಗೆ ರಫ್ತು ಮಾಡುತ್ತಿದೆ. ಇನ್ನು ಚೀನಾಗೆ ಕತ್ತೆಗಳನ್ನು ರಫ್ತು ಮಾಡುತ್ತಿದೆ. ಇದೀಗ ಪಾಕಿಸ್ತಾನ ಭಿಕ್ಷುಕರನ್ನು ರಫ್ತು ಮಾಡುತ್ತಿದೆ. ಅರೇ ಇದು ಹೇಗೆ ಸಾಧ್ಯ ಅಂತೀರಾ? ಈ ಮಾತು ಹೇಳಿರುವುದು ಸಾಗರೋತ್ತರ ಪಾಕಿಸ್ತಾನಿಗಳ ಸ್ಥಾಯಿ ಸಮಿತಿ ಕಾರ್ಯದರ್ಶಿ.

Pakistan Exporting beggars to west Asian country Overseas standing committee reveals report ckm
Author
First Published Sep 28, 2023, 6:47 PM IST

ಇಸ್ಲಾಮಾಬಾದ್(ಸೆ.28) ಪಾಕಿಸ್ತಾನದಲ್ಲಿನ ಆರ್ಥಿಕ ಪರಿಸ್ಥಿತಿ ಹದಗಟ್ಟಿರುವುದು ಹೊಸ ವಿಚಾರವಲ್ಲ. ಇನ್ನು ಸಾಮಾಜಿಕ, ಶಿಕ್ಷಣಿಕ, ಸಮಾನತೆ, ಮಾನವ ಹಕ್ಕುಗಳು, ಅಲ್ಪಸಂಖ್ಯಾತರ ಹಕ್ಕು ಸೇರಿದಂತೆ ಹಲವು ವಿಚಾರಗಳು ಪಾತಾಳಕ್ಕೆ ಕುಸಿದಿರುವುದು ಹೊಸದೇನಲ್ಲ. ಪಾಕಿಸ್ತಾನ ಪ್ರಮುಖವಾಗಿ ಭಯೋತ್ಪಾದಕರನ್ನು ಭಾರತ ಸೇರಿದಂತೆ ಇತರ ಕೆಲ ದೇಶಗಳಿಗೆ ರಫ್ತು ಮಾಡುತ್ತಿದೆ. ಇನ್ನು ಚೀನಾ ದೇಶಕ್ಕೆ ಕತ್ತೆಗಳನ್ನು ರಫ್ತು ಮಾಡಿ ಆದಾಯಗಳಿಸುತ್ತಿದೆ. ಇದೀಗ ಪಾಕಿಸ್ತಾನ ಪಶ್ಚಿಮ ಏಷ್ಯಾ ರಾಷ್ಟ್ರಗಳಿಗೆ ಭಿಕ್ಷುಕರನ್ನು ರಫ್ತು ಮಾಡುತ್ತಿದೆ. ಈ ಕುರಿತು ಸಾಗರೋತ್ತರ ಪಾಕಿಸ್ತಾನಿಗಳ ಸ್ಥಾಮಿತಿ ಸಮಿತಿ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನ ಆರ್ಥಿಕವಾಗಿ ಪಾತಾಳಕ್ಕೆ ಕುಸಿದಿದೆ. ಪಾಕಿಸ್ತಾನ ರಫ್ತು ಮಾಡುತ್ತಿರುವ ಉತ್ಪನ್ನಗಳ ಸಂಖ್ಯೆ ಬೆರಳೆಣಿಕೆ. ರಫ್ತು ವಿಚಾರಕ್ಕೆ ಬಂದರೆ ಇಲ್ಲೀವರೆಗೆ ಪಾಕಿಸ್ತಾನ ಅತೀ ಹೆಚ್ಚು ರಫ್ತು ಮಾಡುತ್ತಿರುವುದು ಭಯೋತ್ಪಾದಕರು ಹಾಗೂ ಕತ್ತೆಗಳನ್ನು. ಆದರೆ ಇದೀಗ ಇವೆಲ್ಲವನ್ನು ಮೀರಿಸುವ ಸಂಖ್ಯೆಯಲ್ಲಿ ಭಿಕ್ಷುಕರನ್ನು ರಫ್ತು ಮಾಡುತ್ತಿದೆ ಅನ್ನೋ ಮಾಹಿತಿ ಬಹಿರಂಗವಾಗಿದೆ.

ಚಂದ್ರಯಾನದ ಬಳಿಕ ಪಾಕ್ ನಾಯಕರಿಗೆ ಭಾರತದ ಮೇಲೆ ಹೆಚ್ಚುತ್ತಿದೆ ಪ್ರೇಮ,ಇದರ ಹಿಂದಿದೆ ಕೆಲ ಕಾರಣ!

ಪಾಕಿಸ್ತಾನ ಸರ್ಕಾರಕ್ಕೆ ಎಚ್ಚರಿಕೆ ಜೊತೆ ವಿಶೇಷ ಮನವಿ ಮಾಡಿರುವ ಪಾಕಿಸ್ತಾನಿ ಸಾಗರೋತ್ತರ ಸ್ಥಾಯಿ ಸಮಿತ ಕಾರ್ಯದರ್ಶಿ ಝೀಶನ್ ಖಾನ್‌ಜಾದ್, ತಕ್ಷಣವೇ ಭಿಕ್ಷುಕರನ್ನು ಪಶ್ಚಿಮ ಏಷ್ಯಾ ರಾಷ್ಟ್ರಗಳಿಗೆ ರಫ್ತು ಮಾಡುವುದನ್ನು ನಿಲ್ಲಿಸಿ ಎಂದಿದ್ದಾರೆ. ಮೆಕ್ಕಾದಲ್ಲಿರುವ ಭವ್ಯ ಮಸೀದಿ ಸುತ್ತ ಮುತ್ತ ಪಿಕ್‌ಪಾಟ್ ಮಾಡಿ ಅರೆಸ್ಟ್ ಆಗಿರುವ ಮಂದಿಯಲ್ಲಿ ಅತೀ ಹೆಚ್ಚಿನವರು ಪಾಕಿಸ್ತಾನಿಗಳು. ಇರಾಕ್ ಹಾದೂ ಸೌದಿ ಅರೇಬಿಯಾ ಜೈಲಿನಲ್ಲಿ ಅತೀ ಹೆಚ್ಚಿನ ಪಾಕಿಸ್ತಾನಿಗಳು ಇದ್ದಾರೆ. ಇವೆರಲ್ಲಾ ಭಿಕ್ಷುಕರಾಗಿದ್ದುಕೊಂಡು ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಂಡವರಾಗಿದ್ದಾರೆ ಎಂದು ಕಾರ್ಯದರ್ಶಿ ಹೇಳಿದ್ದಾರೆ.

ಮೆಕ್ಕಾ ಮದೀನಾಗೆ ಉಮ್ರ್ ವೀಸಾ, ಹಜ್ ವೀಸಾಗಳಲ್ಲಿ ಪಾಕಿಸ್ತಾನಿ ಪ್ರಜೆಗಳು ಯಾತ್ರೆ ಮಾಡುತ್ತಾರೆ. ಬಳಿಕ ಅಲ್ಲೆ ಭಿಕ್ಷುಕರಾಗಿ ತರೆಮೆರೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೇ ವೇಳೆ ಕಳ್ಳತನ ಪ್ರಕರಣದ ಮೂಲಕ ಸಿಕ್ಕಿಬಿದ್ದಾಗಲೇ ಪ್ರಕರಣ ಬೆಳಕಿಗೆ ಬರುತ್ತಿದೆ. ಪಾಕಿಸ್ತಾನದ 10 ಮಲಿಯನ್ ಮಂದಿ ವಿದೇಶಗಳಲ್ಲಿ ನೆಲೆಸಿದ್ದಾರೆ. ಯಾವುದೋ ವೀಸಾ ಮೇಲೆ ತೆರಳಿ ಬಳಿಕ ಅಲ್ಲಿ ಭಿಕ್ಷುಕರಾಗಿ ಉಳಿದುಬಿಡುತ್ತಾರೆ. ಹಲವರು ಇದೀಗ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಪಾಕಿಸ್ತಾನ ಈ ರೀತಿ ಭಿಕ್ಷುಕರನ್ನು ವಿದೇಶಕ್ಕೆ ಕಳುಹಿಸುವುದನ್ನು ನಿಲ್ಲಿಸಬೇಕು ಎಂದು ಸಾಗರೋತ್ತರ ಸ್ಥಾಯಿ ಸಮಿತಿ ಕಾರ್ಯದರ್ಶಿ ಹೇಳಿದ್ದಾರೆ.

ಐಎಂಎಫ್‌ ಸಾಲದ ಡೀಲ್‌ಗಾಗಿ ಉಕ್ರೇನ್‌ಗೆ ಪಾಕ್‌ ಶಸ್ತ್ರಾಸ್ತ್ರ ಸೇಲ್‌, 24500 ಕೋಟಿ ಸಾಲ ಪಡೆಯಲು ಅಮೆರಿಕ ಒತ್ತಡ

Follow Us:
Download App:
  • android
  • ios