ಅಲ್-ಖಾದಿರ್ ಟ್ರಸ್ಟ್ ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್ ಖಾನ್‌ಗೆ 14 ವರ್ಷ ಜೈಲು ಶಿಕ್ಷೆ, ₹10 ಲಕ್ಷ ದಂಡ ವಿಧಿಸಲಾಗಿದೆ. ಪತ್ನಿ ಬುಶ್ರಾ ಬೀಬಿಗೂ 7 ವರ್ಷ ಜೈಲು, ₹5 ಲಕ್ಷ ದಂಡ. ಭೂ ವರ್ಗಾವಣೆ ಹಗರಣದಲ್ಲಿ ₹1645 ಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪವಿದೆ. ಮೇ ತಿಂಗಳಲ್ಲಿ ಬಂಧನ ಅಕ್ರಮ ಎಂದಿದ್ದರೂ, ಇತರೆ ಪ್ರಕರಣಗಳಿಂದಾಗಿ ಜೈಲಿನಲ್ಲಿದ್ದಾರೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಂಕಷ್ಟದಲ್ಲಿದ್ದಾರೆ. ಅಲ್-ಖಾದಿರ್ ಟ್ರಸ್ಟ್ ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್‌ಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಎರಡು ವರ್ಷಗಳ ಹಿಂದೆ ಈ ಪ್ರಕರಣದಲ್ಲಿ ಜಾಮೀನು ಕೋರಿ ನ್ಯಾಯಾಲಯಕ್ಕೆ ಹೋಗಿದ್ದ ಇಮ್ರಾನ್ ಖಾನ್ ಅವರನ್ನು ನ್ಯಾಯಾಲಯದಿಂದಲೇ ಬಂಧಿಸಲಾಗಿತ್ತು. ಈಗ ಅದೇ ಪ್ರಕರಣದಲ್ಲಿ ಅವರಿಗೆ ಶಿಕ್ಷೆ ವಿಧಿಸಲಾಗಿದೆ.
ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಬೀಬಿ ಅವರನ್ನೂ ಈ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಲಾಗಿದೆ. ಅವರಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಇಮ್ರಾನ್ ಖಾನ್‌ಗೆ 10 ಲಕ್ಷ ರೂ. ಮತ್ತು ಬುಶ್ರಾ ಬೀಬಿಗೆ 5 ಲಕ್ಷ ಪಾಕಿಸ್ತಾನಿ ರೂ. ದಂಡ ವಿಧಿಸಲಾಗಿದೆ.
ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಇಮ್ರಾನ್ ಖಾನ್ ಬಿಡುಗಡೆಗೆ ಒತ್ತಾಯಿಸುತ್ತಾರೆಂದು ಪಾಕ್‌ನಲ್ಲಿ ಭಯ!
ಇಮ್ರಾನ್ ಖಾನ್ ಪ್ರಸ್ತುತ ಅಡಿಯಾಲಾ ಜೈಲಿನಲ್ಲಿದ್ದಾರೆ. ಅವರ ಪತ್ನಿ ನ್ಯಾಯಾಲಯದಲ್ಲಿದ್ದರು. ತೀರ್ಪು ಪ್ರಕಟವಾದ ನಂತರ ಬುಶ್ರಾ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಆದರೆ, ಪಾಕಿಸ್ತಾನದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಉಮರ್ ಅಟಾ ಬಂದಿಯಾಲ್ 2023ರ ಮೇ ತಿಂಗಳಲ್ಲಿ ಇಮ್ರಾನ್ ಖಾನ್ ಅವರ ಬಂಧನವನ್ನು ಅಕ್ರಮ ಎಂದು ಹೇಳಿದ್ದರು. ಲಾಹೋರ್ ಹೈಕೋರ್ಟ್ ಈ ಪ್ರಕರಣದಲ್ಲಿ ಇಮ್ರಾನ್ ಅವರ ಜಾಮೀನು ಅರ್ಜಿಯನ್ನು ಮಂಜೂರು ಮಾಡಿತ್ತು.
ಆದರೆ, ಇಮ್ರಾನ್ ಖಾನ್ ವಿರುದ್ಧ ರಾಷ್ಟ್ರದ್ರೋಹ ಸೇರಿದಂತೆ ಹಲವು ಪ್ರಕರಣಗಳಿವೆ. ಹಾಗಾಗಿ ಒಂದು ಪ್ರಕರಣದಲ್ಲಿ ಜಾಮೀನು ಸಿಕ್ಕಿದರೂ ಜೈಲಿನಿಂದ ಬಿಡುಗಡೆಯಾಗಿಲ್ಲ. ಅಲ್ ಖಾದಿರ್ ವಿಶ್ವವಿದ್ಯಾಲಯದಿಂದ 190 ಮಿಲಿಯನ್ ಡಾಲರ್ ಅಥವಾ 1645 ಕೋಟಿ ರೂ.ಗಳನ್ನು ಅಕ್ರಮವಾಗಿ ವರ್ಗಾಯಿಸಿದ ಆರೋಪ ಇಮ್ರಾನ್ ಮತ್ತು ಅವರ ಪತ್ನಿ ಮೇಲಿದೆ.
ಈ ಘಟನೆಯನ್ನು ಪಾಕಿಸ್ತಾನದ ತನಿಖಾ ಸಂಸ್ಥೆ NAB ತನಿಖೆ ನಡೆಸುತ್ತಿತ್ತು. 2023ರ ಮೇ 1 ರಂದು ಇಮ್ರಾನ್ ಖಾನ್ ವಿರುದ್ಧ ಬಂಧನ ವಾರೆಂಟ್ ಹೊರಡಿಸಲಾಗಿತ್ತು. ಅಲ್ ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಪಾಕಿಸ್ತಾನದ ಅರೆಸೇನಾ ಪಡೆ ರೇಂಜರ್ಸ್ ನ್ಯಾಯಾಲಯದಿಂದಲೇ ಇಮ್ರಾನ್ ಖಾನ್ ಅವರನ್ನು ಬಂಧಿಸಿತು. ಆಗ ಇಮ್ರಾನ್ ಬಂಧನದ ನಂತರ ಪಾಕಿಸ್ತಾನದಾದ್ಯಂತ ಪ್ರತಿಭಟನೆಗಳು ನಡೆದವು. ಇಮ್ರಾನ್ ಅವರ ಬೆಂಬಲಿಗರು ಹಿಂಸಾಚಾರ ನಡೆಸಿದರು.
ಇಮ್ರಾನ್ ಖಾನ್ ಬೆಂಬಲಿಗರ ಪ್ರತಿಭಟನೆ ನಿಯಂತ್ರಿಸಲಾಗದೇ ಹೈರಾಣಾದ ಪಾಕ್ ಸೇನೆ
ಏನಿದು ಅಲ್-ಖಾದಿರ್ ಟ್ರಸ್ಟ್ ಕೇಸ್?
ಇಮ್ರಾನ್ ಖಾನ್ನ್ನು ಅಲ್-ಖಾದಿರ್ ಟ್ರಸ್ಟ್‌ಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಲಾಗಿದೆ. ತಮ್ಮ ಅಧಿಕಾರಾವಧಿಯಲ್ಲಿ ಪಂಜಾಬ್‌ನ ಝೀಲಂನಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದಾಗಿ ಇಮ್ರಾನ್ ಖಾನ್ ಭರವಸೆ ಕೊಟ್ಟಿದ್ದರು. ಇದರ ಭಾಗವಾಗಿ ಖಾನ್ ಅಲ್-ಖಾದಿರ್ ಯೂನಿವರ್ಸಿಟಿ ಪ್ರಾಜೆಕ್ಟ್ ಟ್ರಸ್ಟ್ ಸ್ಥಾಪಿಸಿದ್ದರು. ಅದರಲ್ಲಿ ಬೀಬಿ, ಆಪ್ತ ಸಹಾಯಕರಾಗಿದ್ದ ಬುಖಾರಿ ಮತ್ತು ಬಾಬರ್ ಅವರನ್ನು ಪದಾಧಿಕಾರಿಗಳಾಗಿ ನೇಮಕ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಆಗಿನ ಪಿಟಿಐ ಸರ್ಕಾರ ಮತ್ತು ಆಸ್ತಿ ಉದ್ಯಮಿ ನಡುವೆ ಒಪ್ಪಂದವಾಗಿತ್ತು. ಈ ಒಪ್ಪಂದಿಂದ ದೇಶದ ಖಜಾನೆಗೆ 190 ಮಿಲಿಯನ್ ಪೌಂಡ್‌ಗಳ ನಷ್ಟವಾಗಿದೆ. ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು 458 ಎಕರೆಗೂ ಹೆಚ್ಚು ಭೂಮಿ ಪಡೆದು ಲಾಭವನ್ನು ಪಡೆದ ಆರೋಪ ಇಮ್ರಾನ್ ಖಾನ್ ಮೇಲಿದೆ.
