*ಚುಂಬನ ಆಲಿಂಗನ ದೃಶ್ಯ ಬಂದ್‌ *ಮಾಧ್ಯಮ ನಿಯಂಣತ್ರಣ ಪ್ರಾಧಿಕಾರದಿಂದ ಸೂಚನೆ*ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆ 

ಪಾಕಿಸ್ತಾನ (ಅ. 24) : ಆಲಿಂಗನ ಹಾಗೂ ಚುಂಬನದ ದೃಶ್ಯಗಳನ್ನು ಪ್ರಸಾರ ಮಾಡದಂತೆ ಸ್ಥಳೀಯ ದೂರದರ್ಶನ ಚಾನಲ್‌ಗಳಿಗೆ ಇಲೆಕ್ಟ್ರಾನಿಕ್‌ ಮಾಧ್ಯಮ ನಿಯಂಣತ್ರಣ ಪ್ರಾಧಿಕಾರ (Pakistan Electronic Media Regulatory Authority) ಸೂಚನೆ ನೀಡಿದೆ. ಇಂತಹ ದೃಶ್ಯಗಳು ಸಂಸ್ಕೃತಿಯನ್ನು (Culture) ಹಾಳು ಮಾಡುತ್ತಿವೆ ಎನ್ನುವ ದೂರುಗಳು ಬಂದ ಹಿನ್ನಲೆಯಲ್ಲಿ ಈ ಸೂಚನೆ ನೀಡಲಾಗಿದೆ. ಅನುಚಿತ ಬಟ್ಟೆಗಳನ್ನು ಧರಿಸಿರುವ, ಚುಂಬನ ಹಾಗೂ ಆಲಿಂಗನದ ದೃಶ್ಯಗಳು ಹೆಚ್ಚು ಹೆಚ್ಚು ಪ್ರಸಾರವಾಗುತ್ತಿವೆ. ಇದು ಇಸ್ಲಾಮಿಕ್‌ ಸಂಸ್ಕೃತಿಯನ್ನು ನಾಶಮಾಡುತ್ತದೆ. ಇಂತಹ ದೃಶ್ಯಗಳನ್ನು ವಿಸ್ತಾರವಾಗಿ ತೋರಿಸುವುದರಿಂದ ಜನರ ಮನಸ್ಸು ಚಂಚಲಗೊಂಡು ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂದು ಹಲವು ದೂರುಗಳು ಬಂದುದರಿಂದ ಇಂತಹ ದೃಶ್ಯಗಳನ್ನು ನಿಷೇಧಿಸುವಂತೆ ಆದೇಶ ನೀಡಲಾಗಿದೆ.

ಬ್ಲೂಫಿಲಂ ನೋಡೋದು ಕಲಿಯಲು RSS ಶಾಖೆಗೆ ಹೋಗ್ಬೇಕಾ?: HDK

ಈ ಕ್ರಮದ ಹಿಂದಿನ ಕಾರಣವನ್ನು ವಿವರಿಸಿದ ಅಧಿಕಾರಿಗಳು 'ಸಾರ್ವಜನಿಕರಿಂದ ಈ ಬಗ್ಗೆ ದೂರುಗಳನ್ನು ಬರುತ್ತಿದ್ದು, ವಾಟ್ಸಾಪ್ ಮೂಲಕ ಗ್ರೂಪ್‌ಗಳಲ್ಲಿಯೂ ಕೂಡ ನಿಂದನೆಗಳು ಕೇಳಿ ಬರುತ್ತಿವೆ ಎಂದು ಹೇಳಿದರು. "ಪಾಕಿಸ್ತಾನದ ಸಮಾಜದ ನೈಜ ಚಿತ್ರಣವನ್ನು ಕಾರ್ಯಕ್ರಮಗಳು ಬಿಂಬಿಸುತ್ತಿಲ್ಲ. ಇಸ್ಲಾಮಿಕ್ ಬೋಧನೆಗಳನ್ನು ಮತ್ತು ಪಾಕಿಸ್ತಾನಿ ಸಮಾಜದ ಸಂಸ್ಕೃತಿಯನ್ನು ಸಂಪೂರ್ಣವಾಗಿ ಕಡೆಗಣಿಸಿ, ಆಲಿಂಗನದ ದೃಶ್ಯಗಳು, ವಿವಾಹೇತರ ಸಂಬಂಧಗಳು, ಅಸಭ್ಯ ಉಡುಪುಗಳು, ಹಾಸಿಗೆಯ ದೃಶ್ಯಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಎಲ್ಲಾ ಉಪಗ್ರಹ ಟಿವಿ ಪರವಾನಗಿದಾರರು ಇಂತಹ ವಿಷಯವನ್ನು ಪ್ರಸಾರ ಮಾಡುವುದನ್ನು ನಿಲ್ಲಿಸಬೇಕು ಮತ್ತು PEMRA ಕಾನೂನುಗಳನ್ನು ಅನುಸರಿಸಬೇಕು " ಎಂದು ಪ್ರಾಧಿಕಾರ ಹೇಳಿದೆ.

ಮಹಿಳೆಯರ ಮೇಲೆ ಹಲ್ಲೆ ಆರೋಪ: ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರನ ವಿರುದ್ಧ FIR

PEMRA ಸೂಚನೆಯ ನಂತರ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಗಳು ನಡೆದಿವೆ. ಮಾನವ ಹಕ್ಕುಗಳ ಪ್ರತಿಪಾದಕಿ ರೀಮಾ ಒಮರ್ (Reema Omer) ಅವರು ಈ ಆದೇಶದ ಬಗ್ಗೆ ಪ್ರತಿಕ್ರಿಯಿಸಿ ಟ್ವೀಟ್‌ ಮಾಡಿದ್ದು, ವಿವಾಹಿತ ದಂಪತಿಗಳ ನಡುವಿನ ಅನ್ಯೋನ್ಯತೆ ಮತ್ತು ಪ್ರೀತಿಯು ಪಾಕಿಸ್ತಾನಿ ಸಮಾಜದ ನಿಜವಾದ ಚಿತ್ರಣವಲ್ಲ' ಎಂದು ಹೇಳಿದ್ದಾರೆ.

Scroll to load tweet…

ಹವಾಮಾನ ವರದಿ ಓದುತ್ತಿದ್ದ ಆಂಕರ್, ಪ್ಲೇ ಆಗಿದ್ದು ಮಾತ್ರ ಪೋರ್ನ್‌ ವಿಡಿಯೋ!

ಅಮೆರಿಕದ ವಾಷಿಂಗ್ಟನ್‌ನಲ್ಲಿ(Washington) ಹವಾಮಾನ ಮುನ್ಸೂಚನೆಯನ್ನು(weather forecast) ವೀಕ್ಷಿಸುತ್ತಿದ್ದ ಗ್ರಾಹಕರಿಗೆ ತಮ್ಮ ಟಿವಿ ಸ್ಕ್ರೀನ್ ಮೇಲೆ ಏಕಾಏಕಿ ಪೋರ್ನ್ ವಿಡಿಯೋ ನೋಡಿ ಭಾರೀ ಶಾಕ್ ಆಗಿದೆ. ಹೌದು ಭಾನುವಾರ ಸಂಜೆ ಸ್ಥಳೀಯ ಸುದ್ದಿ ಚಾನೆಲ್ ಎಡವಟ್ಟೊಂದನ್ನು ಮಾಡಿ, ಅಶ್ಲೀಲ ಕ್ಲಿಪ್ ಪ್ರಸಾರ ಮಾಡಿದೆ. ವಾಷಿಂಗ್ಟನ್‌ನ ಸ್ಪೋಕೇನ್‌ನಲ್ಲಿರುವ ಸ್ಥಳೀಯ ಸಿಬಿಎಸ್-ಅಂಗಸಂಸ್ಥೆ ಸುದ್ದಿ ಸಂಸ್ಥೆ ಕೆಆರ್‌ಇಎಂ, ಸಂಜೆ 6 ಗಂಟೆಗೆ ಸುದ್ದಿ ಪ್ರಸಾರದ ಸಮಯದಲ್ಲಿ 13 ಸೆಕೆಂಡುಗಳ ಪೋರ್ನ್ ವೀಡಿಯೋ(Porn Video) ಟೆಲಿಕಾಸ್ಟ್‌ ಮಾಡಿದೆ.

ಹವಾಮಾನ ತಜ್ಞೆ(Meteorologist) ಮಿಶೆಲ್ ಬಾಸ್ ಹವಾಮಾನದ ಅಪ್‌ಡೇಟ್‌ಗಳನ್ನು ನೀಡುತ್ತಿದ್ದಾಗ ಸ್ಕ್ರೀನ್‌ ಮೇಲೆ, ಆಕೆಯ ಹಿಂಬದಿಯಲ್ಲಿ ಒಂದು ಪೋರ್ನ್ ಕ್ಲಿಪ್ ಪ್ಲೇಯಾಗಿದೆ. ಇನ್ಉ ಈ ವಿಡಿಯೋ ಬಗ್ಗೆ ಆಕೆಗಾಗಲಿ, ಆಕೆಯ ಸಹ-ಆಂಕರ್ ಕೋಡಿ ಪ್ರೊಕ್ಟರ್‌ಗಾಗಲಿ ಯಾವುದೇ ಕಲ್ಪನೆಯೂ ಇರಲಿಲ್ಲ. ಹೀಗಾಗಿ ಅವರಿಬ್ಬರೂ ವರದಿ ನಿಡುವುದನ್ನು ಮುಂದುವರೆಸಿದ್ದಾರೆ.