ಹವಾಮಾನ ವರದಿ ಓದುತ್ತಿದ್ದ ಆಂಕರ್, ಪ್ಲೇ ಆಗಿದ್ದು ಮಾತ್ರ ಪೋರ್ನ್ ವಿಡಿಯೋ!
* ನ್ಯೂಸ್ ಲೈವ್‌ನಲ್ಲಿ ಪ್ಲೇ ಆಯ್ತು ಪೋರ್ನ್ ವಿಡಿಯೋ
* ಹವಾಮಾನ ವರದಿ ಕೊಡುತ್ತಿದ್ದ ಆಂಕರ್
* ಪೊಲೀಸ್ ಠಾಣೆ ಮೆಟ್ಟಿಲೇರಿದೆ ಪ್ರಕರಣ
ವಾಷಿಂಗ್ಟನ್(ಅ.21): ಅಮೆರಿಕದ ವಾಷಿಂಗ್ಟನ್‌ನಲ್ಲಿ(Washington) ಹವಾಮಾನ ಮುನ್ಸೂಚನೆಯನ್ನು(weather forecast) ವೀಕ್ಷಿಸುತ್ತಿದ್ದ ಗ್ರಾಹಕರಿಗೆ ತಮ್ಮ ಟಿವಿ ಸ್ಕ್ರೀನ್ ಮೇಲೆ ಏಕಾಏಕಿ ಪೋರ್ನ್ ವಿಡಿಯೋ ನೋಡಿ ಭಾರೀ ಶಾಕ್ ಆಗಿದೆ. ಹೌದು ಭಾನುವಾರ ಸಂಜೆ ಸ್ಥಳೀಯ ಸುದ್ದಿ ಚಾನೆಲ್ ಎಡವಟ್ಟೊಂದನ್ನು ಮಾಡಿ, ಅಶ್ಲೀಲ ಕ್ಲಿಪ್ ಪ್ರಸಾರ ಮಾಡಿದೆ. ವಾಷಿಂಗ್ಟನ್‌ನ ಸ್ಪೋಕೇನ್‌ನಲ್ಲಿರುವ ಸ್ಥಳೀಯ ಸಿಬಿಎಸ್-ಅಂಗಸಂಸ್ಥೆ ಸುದ್ದಿ ಸಂಸ್ಥೆ ಕೆಆರ್‌ಇಎಂ, ಸಂಜೆ 6 ಗಂಟೆಗೆ ಸುದ್ದಿ ಪ್ರಸಾರದ ಸಮಯದಲ್ಲಿ 13 ಸೆಕೆಂಡುಗಳ ಪೋರ್ನ್ ವೀಡಿಯೋ(Porn Video) ಟೆಲಿಕಾಸ್ಟ್ ಮಾಡಿದೆ.
ಹವಾಮಾನ ತಜ್ಞೆ(Meteorologist) ಮಿಶೆಲ್ ಬಾಸ್ ಹವಾಮಾನದ ಅಪ್‌ಡೇಟ್‌ಗಳನ್ನು ನೀಡುತ್ತಿದ್ದಾಗ ಸ್ಕ್ರೀನ್ ಮೇಲೆ, ಆಕೆಯ ಹಿಂಬದಿಯಲ್ಲಿ ಒಂದು ಪೋರ್ನ್ ಕ್ಲಿಪ್ ಪ್ಲೇಯಾಗಿದೆ. ಇನ್ಉ ಈ ವಿಡಿಯೋ ಬಗ್ಗೆ ಆಕೆಗಾಗಲಿ, ಆಕೆಯ ಸಹ-ಆಂಕರ್ ಕೋಡಿ ಪ್ರೊಕ್ಟರ್‌ಗಾಗಲಿ ಯಾವುದೇ ಕಲ್ಪನೆಯೂ ಇರಲಿಲ್ಲ. ಹೀಗಾಗಿ ಅವರಿಬ್ಬರೂ ವರದಿ ನಿಡುವುದನ್ನು ಮುಂದುವರೆಸಿದ್ದಾರೆ.
ಆಡ್ವೀಕ್ ವರದಿಯನ್ವಯ, KREM ಸುದ್ದಿ ಪ್ರಸಾರದ ಸಮಯದಲ್ಲಿ "ಸೂಕ್ತವಲ್ಲದ" ವೀಡಿಯೋ ಪ್ಲೇ ಮಾಡಿರುವುದಕ್ಕೆ ಕ್ಷಮೆಯಾಚಿಸಿದೆ. "KREM 2 ನಲ್ಲಿ ಇಂದು ಸಂಜೆ ಆರು ಗಂಟೆಗೆ, ಸುದ್ದಿ ಪ್ರಸಾರದಲ್ಲಿ ಏನು ಸಂಭವಿಸಿದೆಯೋ, ಅದಕ್ಕಾಗಿ ನಾವೆಲ್ಲರೂ ಕ್ಷಮೆಯಾಚಿಸಲು ಬಯಸುತ್ತೇವೆ" ಎಂದು ಹೇಳಿದೆ. "ಕಾರ್ಯಕ್ರಮದ ಮೊದಲಾರ್ಧದಲ್ಲಿ ಸೂಕ್ತವಲ್ಲದ ವೀಡಿಯೋ ಪ್ರಸಾರವಾಯಿತು. ಇದು ಮರುಕಳಿಸದಂತೆ ನಾವು ಶ್ರದ್ಧೆಯಿಂದ ಕೆಲಸ ಮಾಡುತ್ತೇವೆ ಎಂದು ತಿಳಿಸಿದೆ.
KREM ನ ಮಾತೃ ಕಂಪನಿಯ ಕಾರ್ಯನಿರ್ವಾಹಕರು ಆಕಸ್ಮಿಕವಾಗಿ ಎಕ್ಸ್-ರೇಟೆಡ್ ತುಣುಕನ್ನು ಪ್ರಸಾರ ಮಾಡಿದ್ದಕ್ಕಾಗಿ ಚಾನೆಲ್ ಕ್ಷಮೆಯಾಚಿಸಿದೆ ಎಂದು ದೃಢಪಡಿಸಿದೆ. ವೀಕ್ಷಕರಿಂದ ಹಲವಾರು ಮಂದಿ ಈ ಬಗ್ಗೆ ಕರೆ ಮಾಡಿ ದೂರು ನಿಡಿದ್ದರಿಂದ ಸ್ಪೋಕೇನ್ ಪೊಲೀಸ್ ಇಲಾಖೆ ಈ ಬಗ್ಗೆ ತನಿಖೆ ಆರಂಭಿಸಿದೆ.
2017 ರಲ್ಲಿ ಇದೇ ರೀತಿಯ ಘಟನೆ ಬೆಳಕಿಗೆ ಬಂದಿತ್ತು. ಬಿಬಿಸಿ ವೀಕ್ಷಕನೊಬ್ಬ ಎಕ್ಸ್-ರೇಟೆಡ್ ಕ್ಲಿಪ್ ಅನ್ನು ನೋಡುತ್ತಿರುವ ಉದ್ಯೋಗಿಯನ್ನು ಗಮನಿಸಿದ್ದ. ನೇರ ಪ್ರಸಾರದ ಸಮಯದಲ್ಲಿ ಸುದ್ದಿ ನಿರೂಪಕರ ಹಿಂದೆ ಬಿಬಿಸಿ ಉದ್ಯೋಗಿಯೊಬ್ಬ ಪೋರ್ನ್ ವಿಡಿಯೋ ವೀಕ್ಷಿಸುತ್ತಿದ್ದ ದೃಶ್ಯ ಇದಾಗಿತ್ತು.