ಬ್ಲೂಫಿಲಂ ನೋಡೋದು ಕಲಿಯಲು RSS ಶಾಖೆಗೆ ಹೋಗ್ಬೇಕಾ?: HDK
* ಸಿದ್ದು ಹೇಳಿಕೆಗೆ ಎಚ್.ಡಿ.ಕುಮಾರಸ್ವಾಮಿ ತಿರುಗೇಟು
* ಜಮೀರ್ ಹೇಳಿಕೆಗಳ ಕುರಿತು ನಾನು ಯಾವುದೇ ಚರ್ಚೆ ಮಾಡೋದಿಲ್ಲ
* ಸಿಂದಗಿಯಲ್ಲಿ ಜೆಡಿಎಸ್-ಬಿಜೆಪಿ ಮಧ್ಯೆ ಹೋರಾಟ
ಆಲಮೇಲ(ಅ.20): ಆರೆಸ್ಸೆಸ್(RSS) ಶಾಖೆಗೆ ಹೋಗಿ ಕಲಿತಿದ್ದು ನೋಡಿಲ್ವಾ? ವಿಧಾನಸೌಧದಲ್ಲಿ(Vidhanasoudha) ಕಲಾಪ(Session) ಸಮಯದಲ್ಲಿ ನೀಲಿ ಚಿತ್ರ(Blue Film) ನೋಡುತ್ತಾ ಕೂಡೋದು ತಾನೆ ಅವರ ಶಾಖೆಯಲ್ಲಿ ಕಲಿಸಿದ್ದು. ಇಂಥದ್ದು ಕಲಿಯೋದಕ್ಕೆ ಆರೆಸ್ಸೆಸ್ ಶಾಖೆಗೆ ಹೋಗಬೇಕಾ? ನನಗೆ ಅವರ ಶಾಖೆ ಸಹವಾಸವೇ ಬೇಡ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಹೇಳಿದ್ದಾರೆ.
ಸಿಂದಗಿ(Sindagi) ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಆರೆಸ್ಸೆಸ್ ಕುರಿತು ಮಾತನಾಡುವ ಕುಮಾರಸ್ವಾಮಿ ಬೇಕಾದರೆ ಆರೆಸ್ಸೆಸ್ ಶಾಖೆಗೆ ಬಂದು ನೋಡಲಿ ಎನ್ನುವ ಬಿಜೆಪಿ(BJP) ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್(Nalin Kumar Katel) ಆಹ್ವಾನಕ್ಕೆ ಈ ರೀತಿ ತಿರುಗೇಟು ನೀಡಿದರು. ಈ ಊರಲ್ಲಿ ಬಡವರ ಶಾಖೆ ಇದೆ. ಇಲ್ಲಿ ಕಲಿತಿರುವುದೇ ಸಾಕು ನನಗೆ. ಆ ಶಾಖೆಯಲ್ಲಿ ಕಲಿಯೋದು ಏನೂ ಬೇಡ ಎಂದು ಹೇಳಿದರು.
ಎಚ್‌ಡಿಕೆ ರಹಸ್ಯವೆಲ್ಲ ಗೊತ್ತಿದೆ, ಬಾಯ್ಬಿಟ್ರೆ ಬೇರೆಯದೇ ಆಗುತ್ತೆ: ಯತ್ನಾಳ್ ಬಾಂಬ್
ಕಾಲು ಕೆರೆದು ಜಗಳ ಮಾಡಲು ನನಗೆ ಬೇರೆ ಕೆಲ್ಸಾ ಇಲ್ವಾ: ಎಚ್‌ಡಿಕೆ
ಕಾಲು ಕೆರೆದುಕೊಂಡು ಜಗಳ ಮಾಡಲು ನನಗೆ ಬೇರೆ ಕೆಲಸ ಇಲ್ವಾ? ನನ್ನ ತಂಟೆಗೆ ಬರದಿದ್ರೆ ನಾನ್ಯಾಕೆ ಅವರ ತಂಟೆಗೆ ಹೋಗ್ತೇನೆ! ’ಕುಮಾರಸ್ವಾಮಿ ಕಾಲು ಕೆರೆದುಕೊಂಡು ಜಗಳಕ್ಕೆ ಬರ್ತಾರೆ’ ಅನ್ನೋ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಹೇಳಿಕೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈ ರೀತಿ ತಿರುಗೇಟು ನೀಡಿದರು. ಯಾರಾದರೂ ನನ್ನ ಸುದ್ದಿಗೆ ಬರದೇ ಇದ್ರೆ ನಾನ್ಯಾಕೆ ಅವರ ತಂಟೆಗೆ ಹೋಗುತ್ತೇನೆ ಎಂದು ಪ್ರಶ್ನಿಸುತ್ತ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.
ಕಾಂಗ್ರೆಸ್(Congress)-ಬಿಜೆಪಿ(BJP) ಎರಡೂ ಪಕ್ಷಗಳು ಪರ್ಸೆಂಟೇಜ್ ತೆಗೆದುಕೊಳ್ಳುವುದರಲ್ಲಿ ಮುಂದಿದ್ದಾರೆ. ರಾಜ್ಯದಲ್ಲಿ ಎರಡೂ ಪಕ್ಷಗಳನ್ನು ಮೂಲೆಗುಂಪು ಮಾಡಲು ಜನತೆ ಮನಸ್ಸು ಮಾಡಬೇಕಿದೆ. ಈ ಎರಡೂ ಪಕ್ಷಗಳು ಜನರ ದುಡ್ಡು ಲೂಟಿ ಹೊಡೆಯುತ್ತಿವೆ ಎಂದರು. ಸಿಂದಗಿಯಲ್ಲಿ ಜೆಡಿಎಸ್(JDS)-ಬಿಜೆಪಿ ಮಧ್ಯೆ ಹೋರಾಟ ಇದೆ. ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ ಎಂದರು.
ಇದೇ ವೇಳೆ, ಶಾಸಕ ಜಮೀರ್(Zameer Ahmed Khan) ಹೇಳಿಕೆಗಳ ಕುರಿತು ನಾನು ಯಾವುದೇ ಚರ್ಚೆ ಮಾಡುವುದಿಲ್ಲ, ದೇವರಿದ್ದಾನೆ(God), ಅವನೇ ಎಲ್ಲ ನೊಡಿಕೊಳ್ಳುತ್ತಾನೆಂದರು.