ವಾಷಿಂಗ್ಟನ್‌(ಫೆ.17): ಅಮೆರಿಕ, ಬ್ರಿಟನ್‌ ಸೇರಿದಂತೆ ಜಗತ್ತಿನ ಸುಮಾರು 15 ದೇಶಗಳಲ್ಲಿ 200ಕ್ಕೂ ಹೆಚ್ಚು ಭಾರತೀಯ ಸಂಜಾತರು ಪ್ರಮುಖ ನಾಯಕತ್ವದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ. ಇವರ ಪೈಕಿ 60 ಜನರು ಕ್ಯಾಬಿನೆಟ್‌ ದರ್ಜೆಯ ಹುದ್ದೆಗಳಲ್ಲಿದ್ದಾರೆ.

ಪ್ರಚಾರಕ್ಕಾಗಿ ಕಮಲಾ ಹ್ಯಾರಿಸ್ ಹೆಸರು ಬಳಸಬೇಡಿ; ಮೀನಾ ಹ್ಯಾರಿಸ್‌ಗೆ ಖಡಕ್ ಸೂಚನೆ!

ಅಮೆರಿಕದ ಸಿಲಿಕಾನ್‌ ವ್ಯಾಲಿಯ ಉದ್ಯಮಿ ಎಂ.ಆರ್‌.ರಂಗಸ್ವಾಮಿ ಎಂಬುವರು ಇಂಡಿಯಾಸ್ಪೋರಾ ಎಂಬ ಸಂಸ್ಥೆ ಸ್ಥಾಪಿಸಿದ್ದು, ಅದರ ಮೂಲಕ ‘2021ನೇ ಇಂಡಿಯಾಸ್ಪೋರಾ ಗವರ್ನಮೆಂಟ್‌ ಲೀಡರ್ಸ್‌ ಲಿಸ್ಟ್‌’ ಎಂಬ ಈ ಮಾದರಿಯ ಮೊದಲ ಪಟ್ಟಿಬಿಡುಗಡೆ ಮಾಡಿದ್ದಾರೆ. ವಿದೇಶಗಳಲ್ಲಿ ನಾನಾ ಕ್ಷೇತ್ರಗಳಲ್ಲಿ ನಾಯಕತ್ವದ ಹುದ್ದೆಗಳಲ್ಲಿರುವ ಭಾರತೀಯರನ್ನು ಇದರಲ್ಲಿ ಸೇರಿಸಿದ್ದು, ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಈ ಪಟ್ಟಿಯಲ್ಲಿ ಮೊದಲಿಗರು. ಇನ್ನುಳಿದಂತೆ ನಾನಾ ದೇಶಗಳಲ್ಲಿ ಶಾಸಕರು, ಸಂಸದರು, ನಾಗರಿಕ ಸೇವೆಯ ಹಿರಿಯ ಅಧಿಕಾರಿಗಳು, ಆ ದೇಶದಿಂದ ಬೇರೆ ದೇಶಕ್ಕೆ ರಾಯಭಾರಿಗಳಾಗಿರುವ ಭಾರತೀಯ ಮೂಲದವರು ಇದರಲ್ಲಿದ್ದಾರೆ. ಆಸ್ಪ್ರೇಲಿಯಾ, ಕೆನಡಾ, ಸಿಂಗಾಪುರ, ದಕ್ಷಿಣ ಆಫ್ರಿಕಾ, ಯುಎಇ, ಬ್ರಿಟನ್‌ ಹಾಗೂ ಅಮೆರಿಕದಲ್ಲಿ ಇಂತಹ ಸಾಧಕ ಭಾರತೀಯರು ಹೆಚ್ಚಿದ್ದಾರೆ.

ಮಂಡ್ಯದಲ್ಲಿ ಬಿಗ್ ಆಪರೇಷನ್ ಕಮಲ : ಬಿಜೆಪಿಯತ್ತ ಶಾಸಕರು?

ಭಾರತೀಯ ಮೂಲದ ಸುಮಾರು 3.2 ಕೋಟಿ ಜನರು ವಿವಿಧ ದೇಶಗಳಲ್ಲಿ ನೆಲೆಸಿದ್ದು, ಇವರಲ್ಲಿ ಅನೇಕರು ಆಯಾ ದೇಶಗಳ ಪೌರತ್ವ ಪಡೆದು ಅಲ್ಲಿನ ಸರ್ಕಾರದಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಸತ್ಯ ನಾದೆಳ್ಲ, ಸುಂದರ್‌ ಪಿಚೈ ಮುಂತಾದವರು ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳ ಮುಖ್ಯಸ್ಥರಾಗಿದ್ದಾರೆ.