ವಾಶಿಂಗ್ಟನ್(ಫೆ.15): ಅಮೆರಿಕದ ನೂತನ ಉಪಾಧ್ಯಕ್ಷೆ, ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಮೆರಿಕದಲ್ಲಿ ಮಾತ್ರವಲ್ಲ ಭಾರತದಲ್ಲೂ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಇದೀಗ ಕಮಲಾ ಹ್ಯಾರಿಸ್ ಸೋದರ ಸಂಬಂಧಿ ವಕೀಲೆ ಮೀನಾ ಹ್ಯಾರಿಸ್‌ಗೆ ಸಂಕಷ್ಟ ಎದುರಾಗಿದೆ. 

'ಪ್ರಜಾಪ್ರಭುತ್ವ ಗೆದ್ದಿದೆ' ಅಮೆರಿಕ ಅಧ್ಯಕ್ಷ ಬೈಡನ್ ಮೊದಲ ಮಾತು.

ಪ್ರಚಾರಕ್ಕಾಗಿ  ಕಮಲಾ ಹ್ಯಾರಿಸ್ ಹೆಸರು ಬಳಕೆ ಮಾಡಬಾರದು ಎಂದು ಅಮೇರಿಕ ವೈಟ್ ಹೌಸ್ ಮೀನಾ ಹ್ಯಾರಿಸ್‌ಗೆ ಖಡಕ್ ಸೂಚನೆ. ಸಾಮಾಜಿಕ ಜಾಲತಾಣ, ಪುಸ್ತಕ ಸೇರಿದಂತೆ ಇತರ ಮಾಧ್ಯಮಗಳಲ್ಲಿ ಕಮಲಾ ಹ್ಯಾರಿಸ್ ಹೆಸರು ಬಳಕೆ ಮಾಡಿಕೊಂಡು ಮೀನಾ ಹ್ಯಾರಿಸ್ ತಮ್ಮ ಬ್ರ್ಯಾಂಡ್ ವೃದ್ಧಿಸಿಕೊಳ್ಳುವ ಯತ್ನ ಮಾಡಬಾರದು ಎಂದು ಶ್ವೇತಭವನ ಸೂಚನೆ ನೀಡಿದೆ.

ಮೀನಾ ಹ್ಯಾರಿಸ್ ಭಾರತದಲ್ಲಿ ನಡೆಯುತ್ತಿರುವ ರೈತ ಹೋರಾಟ ಬೆಂಬಲಿಸಿ ಟ್ವೀಟ್ ಮಾಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ವೈಟ್ ಹೌಸ್ ಈ ಸೂಚನೆ ನೀಡಿರುವುದು ಮಹತ್ವ ಪಡೆದಿದೆ.  ಕಮಲಾ ಹ್ಯಾರಿಸ್ ಹೆಸರು ಬಿಟ್ಟು, ನಿಮ್ಮ ಸ್ವಂತ ಹೆಸರು ಬಳಸಿ ನಿಮ್ಮ ಕಾರ್ಯಚಟುವಟಿಕೆ ಮುಂದುವರಿಸಿ ಎಂದು ಶ್ವೇತಭವನ ಹೇಳಿದೆ.