ವಾಷಿಂಗ್ಟನ್‌(ನ.12): ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್‌ ಅವರು ಸರ್ಕಾರದ ಹಲವು ಇಲಾಖೆಗಳು ಕೈಗೊಳ್ಳುವ ಕ್ರಮಗಳ ಪರಿಶೀಲನೆಗಾಗಿ ರಚಿಸಿರುವ ‘ಇಲಾಖೆಗಳ ಪರಿಶೀಲನಾ ತಂಡ’ಗಳ ಸದಸ್ಯರನ್ನಾಗಿ 20 ಭಾರತೀಯ ಅಮೆರಿಕನ್ನರನ್ನು ನೇಮಕ ಮಾಡಿದ್ದಾರೆ.

ಇದರಲ್ಲಿ ತಂಡದ ಮುಖ್ಯಸ್ಥನ್ನಾಗಿ ಮೂವರನ್ನು ನೇಮಿಸಲಾಗಿದೆ. ಸರ್ಕಾರದ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಪಾರದರ್ಶಕವಾಗಿ ಹಾಗೂ ಸುಗಮವಾಗಿರಲು ಈ ತಂಡವನ್ನು ರಚಿಸಿರುವುದಾಗಿ ಬೈಡೆನ್‌ ಅವರ ತಂಡ ತಿಳಿಸಿದೆ. ನೂರಕ್ಕೂ ಹೆಚ್ಚು ಸದಸ್ಯರಿರುವ ಪರಿಶೀಲನಾ ತಂಡದಲ್ಲಿ ಅರ್ಧದಷ್ಟು ಮಹಿಳಾ ಸದಸ್ಯರಿದ್ದಾರೆ.

ಎಲ್‌ಜಿಬಿಟಿ ಸಮುದಾಯ, ಅಂಗವಿಕಲರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳನ್ನು ಪ್ರತಿನಿಧಿಸುವ ಅಂದಾಜು ಶೇ.40ರಷ್ಟುಸದಸ್ಯರಿದ್ದಾರೆ. ಅರ್ಜುನ್‌ ಮುಜುಂದಾರ್‌, ರಾಹುಲ್‌ ಗುಪ್ತಾ ಮತ್ತು ಕಿರಣ್‌ ಅಹುಜಾ ತಂಡಗಳ ಭಾರತೀಯ ಮುಖ್ಯಸ್ಥರು.