ಉಕ್ರೇನ್‌ನಿಂದ ರೋಮಾನಿಯ ತಲುಪಿದ ಭಾರತೀಯರ ಏರ್‌ಲಿಫ್ಟ್ ರೋಮಾನಿಯಾದ ಬುಚರೆಸ್ಟ್ ವಿಮಾನ ನಿಲ್ದಾಣದಲ್ಲಿ ಸಚಿವ ಸಿಂಧಿಯಾ ಭಾರತೀಯ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಸಿಂಧಿಯಾ
ರೋಮಾನಿಯಾ(ಫೆ.02): ಉಕ್ರೇನ್ ಮೇಲೆ ರಷ್ಯಾ(Russia Ukraine war) ತನ್ನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಖಾರ್ಕೀವ್ ನಗರದಲ್ಲಿ ಕರ್ನಾಟಕದ(Karnataka) ಮೂಲದ ವಿದ್ಯಾರ್ಥಿ ನವೀನ ಶೇಕರಪ್ಪ(Naveen Shekarappa) ದಾಳಿಗೆ ಬಲಿಯಾದ ಬಳಿಕ ಭಾರತೀಯರ ಆತಂಕ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಆಪರೇಶನ್ ಗಂಗಾ ಮಿಶನ್(Operation Ganga) ರಕ್ಷಣಾ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಗೊಳಿಸಿದೆ. ರಕ್ಷಣಾ ಕಾರ್ಯದ ಜವಾಬ್ದಾರಿ ಹೊತ್ತು ರೋಮಾನಿಯಾಗೆ ತೆರಳಿದ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ(Jyotiraditya Scindia), ಬುಚರೆಸ್ಟ್ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಯುದ್ಧ ಭೂಮಿ ಉಕ್ರೇನ್‌ನಿಂದ ಸುರಕ್ಷಿತವಾಗಿ ರೋಮಾನಿಯಾ ತಲುಪಿದ ಭಾರತೀಯ ವಿದ್ಯಾರ್ಥಿಗಳನ್ನು(Indian Students) ಸುರಕ್ಷಿತವಾಗಿ ಭಾರತಕ್ಕೆ ಏರ್‌ಲಿಫ್ಟ್ ಮಾಡಲಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ. ನಿಮ್ಮ ಎಲ್ಲಾ ಸ್ನೇಹಿತರಿಗೆ ಸಂದೇಶ ರವಾನಿಸಿ. ಪ್ರತಿಯೊಬ್ಬರ ಸುರಕ್ಷತೆಗೆ ಪ್ರಧಾನಿ ನರೇಂದ್ರ ಮೋದಿ ಆದ್ಯತೆ ನೀಡಿದ್ದಾರೆ. ಮೋದಿ ಪರವಾಗಿ ನಾನಿಲ್ಲಿಗೆ ಬಂದಿದ್ದೇನೆ. ನಿಮ್ಮೆಲ್ಲರನ್ನು ತಾಯ್ನಾಡಿಗೆ ಮರಳಿಸುವ ಜವಾಬ್ದಾರಿ ನನ್ನದು ಎಂದು ಬುಚರೆಸ್ಟ್ ವಿಮಾನ ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಗೆ ಸಿಂದಿಯಾ ಹೇಳಿದ್ದಾರೆ.
Ukraine Crisis ಉಕ್ರೇನ್‌ನಿಂದ ನಾಗರೀಕರ ರಕ್ಷಣೆಗೆ ಹಣವಿಲ್ಲ, ಪಾಕಿಸ್ತಾನ ರಾಯಭಾರ ಕಚೇರಿ ಟ್ವೀಟ್ ಸತ್ಯಾಸತ್ಯತೆ ಏನು?
ಮಾತುಕತೆಯಲ್ಲಿ ವಿದ್ಯಾರ್ಥಿ ತನ್ನ ರಾಜ್ಯ ಮಹಾರಾಷ್ಟ್ರ ಎಂದಾಗ, ಮರಾಠಿಯಲ್ಲೇ ಮಾತನಾಡು ಎಂದಿದ್ದಾರೆ. ಬಳಿಕ ಮರಾಠಿಯಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ ವಿದ್ಯಾರ್ಥಿ ಜೊತೆ ಮಾತನಾಡಿದ್ದಾರೆ. ಇನ್ನು ಮತ್ತೊರ್ವ ವಿದ್ಯಾರ್ಥಿ ಕೇರಳದ ಕಣ್ಣೂರು ಜಿಲ್ಲೆ ಎಂದಾಗ, ಕಣ್ಣೂರಿನ ಕುರಿತು ಹಲವು ವಿಚಾರವನ್ನು ಸಿಂಧಿಯಾ ಹೇಳಿದ್ದಾರೆ. ಕಣ್ಣೂರಿನಲ್ಲಿ ಹೆಚ್ಚು ಕಾಳು ಮೆಣಸು ಬೆಳೆಯುತ್ತಾರೆ. ನಾನು ವಾಣಿಜ್ಯ ಸಚಿವನಾಗಿದ್ದ ವೇಳೆ ಕಣ್ಣೂರಿಗೆ ಬೇಟಿ ನೀಡಿದ್ದೇನೆ ಎಂದು ವಿದ್ಯಾರ್ಥಿಗೆ ಹೇಳಿದ್ದಾರೆ.
ಉಕ್ರೇನ್‌ನಿಂದ ರೋಮಾನಿಗೆ ಆಗಮಿಸಿ ರಾಯಭಾರ ಕಚೇರಿ, ವಿಮಾನ ನಿಲ್ದಾಣದ ಕೊಠಡಿಗಳಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿಗಳ ಜೊತೆಗೆ ಸಿಂದಿಯಾ ಮಾತುಕತೆ ನಡೆಸಿದ್ದಾರೆ. ಎಲ್ಲರ ಸುರಕ್ಷತೆ ಎಲ್ಲಾ ಕ್ರಮ ಕೈಗೊಂಡಿದ್ದೇವೆ. ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಸಿಂಧಿಯಾ ನಡೆಗೆ ಎಲ್ಲರಿಂದಲೂ ಶಹಬ್ಬಾಸ್ ವ್ಯಕ್ತವಾಗಿದೆ.
ಒಂದು ವಾರದಿಂದ ಮಗನನ್ನು ಕರೆತರಲು ಅಂಗಲಾಚಿದೆ, ಕೊನೆಗೂ ನನ್ನ ಮಗ ಜೀವಂತವಾಗಿ ಬರಲೇ ಇಲ್ಲ'
ಆಪರೇಶನ್ ಗಂಗಾ ಮಿಶನ್, ನಾಲ್ವರು ಸಚಿವರಿಗೆ ಹೊಣೆ
ಯುದ್ಧಪೀಡಿತ ಉಕ್ರೇನ್‌ನಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ನೇಮಿಸಲಾಗಿರುವ ನಾಲ್ವರು ಸಚಿವರು ಉಕ್ರೇನ್ ನೆರೆಯ ರಾಷ್ಟ್ರಗಳತ್ತ ಮಂಗಳವಾರ ಪ್ರಯಾಣ ಆರಂಭಿಸಿದ್ದಾರೆ. ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ರೊಮೇನಿಯಾದ ಬಕಾರೆಸ್ಟ್‌ನತ್ತ ಮತ್ತು ಸಚಿವ ಹರ್ದೀಪ್‌ಪುರಿ ಹಂಗೇರಿಯ ಬುಡಾಪೆಸ್ಟ್‌ನತ್ತ, ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಸ್ಲೋವಾಕಿಯಾಗೆ ಮತ್ತು ಸಚಿವ ವಿ.ಕೆ.ಸಿಂಗ್ ಪೋಲೆಂಡ್ ದೇಶದತ್ತ ಪ್ರಯಾಣ ಆರಂಭಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಜ್ಯೋತಿರಾದಿತ್ಯ ಸಿಂಧಿಯಾ, ‘ಏರ್ ಇಂಡಿಯಾ ಸಿಬ್ಬಂದಿಯೊಂದಿಗೆ ರೊಮೇನಿಯಾ ಮತ್ತು ಮೊಲ್ಡೊವಾದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸಜ್ಜಾಗಿದ್ದೇವೆ. ಪ್ರತಿಯೊಬ್ಬ ಭಾರತೀಯ ನಾಗರಿಕರನ್ನು ಮನೆಗೆ ಮರಳಿ ಸುರಕ್ಷಿತವಾಗಿ ಕರೆತರುವುದು ನಮ್ಮ ಆದ್ಯತೆ’ ಎಂದಿದ್ದಾರೆ.
ಹರ್ದೀಪ್ ಪುರಿ ಸಹ, ‘ನಮ್ಮ ದೇಶದ ಯುವ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬುಡಾಪೆಸ್ಟ್‌ನಿಂದ ಹೊರಡುವ ವಿಮಾನ ಇಂಧನ ತುಂಬಿಕೊಳ್ಳುವುದಕ್ಕಾಗಿ ಇಸ್ತಾಂಬುಲ್‌ನಲ್ಲಿ ನಿಲ್ಲಲಿದೆ’ ಎಂದು ಟ್ವೀಟ್ ಮಾಡಿದ್ದಾರೆ. ಇದರೊಂದಿಗೆ ಇಂಡಿಗೋ ವಿಮಾನ ನಿಲ್ದಾಣದ ಸಿಬ್ಬಂದಿಯೊಂದಿಗಿರುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ನಡೆದ ಸಭೆಯಲ್ಲಿ 4 ಸಚಿವರನ್ನು ಈ ಸ್ಥಳಾಂತರಕ್ಕಾಗಿ ನೇಮಿಸಲಾಗಿತ್ತು. ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಹಂಗೇರಿಗೆ, ಕಿರಣ್ ರಿಜಿಜು ಅವರನ್ನು ಸ್ಲೋವಾಕಿಯಾಗೆ, ವಿ.ಕೆ.ಸಿಂಗ್ ಅವರನ್ನು ಪೋಲಂಡ್‌ಗೆ ನೇಮಿಸಲಾಗಿದೆ.
