ಒಂದೂವರೆ ತಿಂಗಳ ಮಗುವಿನ ಮೇಲೆ ಮುದ್ದಿನ ಸಾಕು ನಾಯಿ ದಾಳಿ, ಮುಂದೇನಾಯ್ತು?
ಮನೆಯಲ್ಲಿ ಮುದ್ದಿನಿಂದ ಸಾಕಿದ ನಾಯಿ 6 ವಾರದ ಮಗುವಿನ ಮೇಲೆ ದಾಳಿ ನಡೆಸಿದೆ. ಪೋಷಕರು, ಕುಟುಂಬಸ್ಥರು ಎದುರೇ ಏಕಾಏಕಿ ನಾಯಿ ದಾಳಿ ನಡೆಸಿ ಮಗುವನ್ನು ಗಂಭೀರವಾಗಿ ಗಾಯಗೊಳಿಸಿದೆ. ಆಸ್ಪತ್ರೆ ದಾಖಲಿಸಿದ ಪೋಷಕರಿಗೆ ಆಕಾಶವೇ ಕಳಚಿ ಬಿದ್ದಿದೆ.
ನಾಕ್ಸ್‌ವಿಲೆ(ಜೂನ್ 01) ಸಾಕು ನಾಯಿಗಳ ಮೇಲೆ ಪ್ರೀತಿ ಹೆಚ್ಚು. ಹೀಗಾಗಿ ನಾಯಿಯನ್ನು ಹೆಚ್ಚು ಮುದ್ದಾಡುತ್ತಾರೆ. ಆದರೆ ಇದೇ ಸಾಕು ನಾಯಿ ಕುಟುಂಬದ ಸಂಭ್ರಮವನ್ನೇ ಕಸಿದುಕೊಂಡಿದೆ. ಕಾರಣ 6 ವಾರದ ಮಗುವಿನ ಮೇಲೆ ಸಾಕು ನಾಯಿ ದಾಳಿ ನಡೆಸಿದೆ. ಗಂಭೀರವಾಗಿ ಗಾಯಗೊಂಡ ಮಗು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಅಮೆರಿಕದ ನಾಕ್ಸ್‌ವಿಲೆಯಲ್ಲಿ ನಡೆದಿದೆ.
ನಾಕ್ಸ್‌ವಿಲೆಯ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿತ್ತು. ಕಾರಣ ಮುದ್ದಾಗ ಮಗು ಆಗಮನವಾಗಿತ್ತು. ಮಗುವಿನ ಆರೈಕೆಯಲ್ಲಿ ಇಡೀ ಕುಟುಂಬ ಸಂತಸ ಕಂಡಿತ್ತು. ಇತ್ತ ಮಗು ಕೂಡ ಚುರುಕಿನಿಂದ ಎಲ್ಲರ ಗಮನಸಳೆಯುತ್ತಿತ್ತು. ಆದರೆ ಇದು ಮುದ್ದಿನ ಸಾಕು ನಾಯಿಯ ಆಕ್ರೋಶಕ್ಕೆ ಕಾರಣವಾಗಿತ್ತು. ಕಳೆದ 8 ವರ್ಷದಿಂದ ಕುಟುಂಬ ಮುದ್ದಿ ನಾಯಿಗೆ ಮಗು ಆಗಮನದ ಬಳಿಕ ಪ್ರೀತಿ ಕಡಿಮೆಯಾಗಿತ್ತು.
ತಮ್ಮನನ್ನು ರಕ್ಷಿಸಲು ಹೋಗಿ ತಾನೇ ಬೀದಿನಾಯಿಗಳಿಗೆ ಆಹಾರವಾದ 6 ವರ್ಷದ ಬಾಲಕಿ
ಮಗುವನ್ನು ಮನೆಯಲ್ಲಿ ಮಲಗಿಸಿ ಆಟವಾಡಿಸುತ್ತಿದ್ದ ಪೋಷಕರು, ಕೆಲಸದ ನಿಮಿತ್ತ ಎದ್ದಿದ್ದಾರೆ. ಮಗು ಆಟವಾಡುತ್ತಲೇ ಮಲಗಿದೆ. ಇತ್ತ ಮನೆಯ ಒಳಾಂಗದಲ್ಲೇ ಸಾಕು ನಾಯಿ ಮಲಗಿತ್ತು. ಪೋಷಕರು ಮಗುವಿನ ಬಳಿಯಿಂದ ಒಂದು ಹೆಜ್ಜೆ ಇಟ್ಟ ಬೆನ್ನಲ್ಲೇ ನಾಯಿ ಮಗುವಿನ ಮೇಲೆ ದಾಳಿ ಮಾಡಿದೆ. ತಲೆ ಹಾಗೂ ಕುತ್ತಿಗೆ ಭಾಗದಲ್ಲಿ ತೀವ್ರ ಗಾಯವಾಗಿದೆ.
ಚೀರಾಡುತ್ತಾ ಓಡೋಡಿ ಬಂದ ಮಗುವಿನ ತಾಯಿ, ಮಗುವನ್ನು ಎತ್ತಿಕೊಂಡು ತಕ್ಷಣವೇ ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ತೀವ್ರ ರಕ್ತ ಸ್ರಾವ, ಮೆದುಳಿಗೆ ಗಾಯ ಸೇರಿದಂತೆ ಹಲವು ಗಾಯಗಳಿಂದ ಒಂದು ದಿನ ಚಿಕಿತ್ಸೆ ಪಡೆದರೂ ಮಗು ಬದುಕುಳಿಯಲಿಲ್ಲ. ಇತ್ತ ಕುಟುಂಬದ ಸಂಭ್ರಮ ಇಲ್ಲದಾಗಿದೆ. ಇದೀಗ ಮಗುವಿನ ಪೋಷಕರು ಮಗುವಿನ ಅಂಗಾಗವನ್ನು ದಾನ ಮಾಡಿದ್ದಾರೆ.
ಬಾಲಕನ ಮೇಲೆ ಫಿಟ್ಬುಲ್ ನಾಯಿ ದಾಳಿ: ನೋಡುತ್ತಾ ನಿಂತ ಜನ, ರಕ್ಷಣೆಗೆ ಬಂದ ಬೀದಿನಾಯಿಗಳು .. ವೀಡಿಯೋ
ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕಳೆದ 8 ವರ್ಷದಲ್ಲಿ ಒಂದು ಬಾರಿಯೂ ನಾಯಿ ಆಕ್ರಮಣಕಾರಿ ನಡೆ ಹೊಂದರಲಿಲ್ಲ. ಒಟ್ಟು 2 ನಾಯಿಗಳಿವೆ. ಆದರೆ ಯಾವತ್ತೂ ಜಗಳ ಆಡಿಲ್ಲ. ಮನೆಯವರಿಗೆ ಒಂದು ಬಾರಿಯೂ ಆತಂಕ ತರವು ನಡೆ ನಾಯಿಂದ ಇರಲಿಲ್ಲ. ನಾಯಿಯ ಏಕಾಏಕಿ ದಾಳಿಯಿಂದ ನಮ್ಮ ದಿಕ್ಕೇ ತೋಚದಂತಾಗಿದೆ. ನಮ್ಮ ಮನೆಯ ಬೆಳಕು ಆರಿ ಹೋಗಿದೆ ಎಂದು ಪೋಷಕರು ಕಣ್ಣೀರಿಟ್ಟಿದ್ದಾರೆ. ನೋವಿನಲ್ಲೂ ಮಗುವಿನ ಅಂಗಾಂಗ ದಾನ ಮಾಡಿದ ಪೋಷಕರಿಗೆ ಅಧಿಕಾರಿಗಳ ತಂಡ ಧನ್ಯವಾದ ಹೇಳಿದೆ. ಹಲವರು ಸಾಮಾಜಿಕ ಮಾಧ್ಯಮದಲ್ಲಿ ಪೋಷಕರನ್ನು ಸಂತೈಸಿದ್ದಾರೆ.