ತೈಲ ಬಿಕ್ಕಟ್ಟಿನಿಂದ ಮಲೇಷಿಯಾದಲ್ಲಿ ವರ್ಕ್ ಫ್ರಮ್ ಹೋಮ್ ಜಾರಿ, ದೇಸಿ ವಿಮಾನ ಕಡಿತಗೊಳಿಸಿದ ಚೀನಾ, ಭಾರತದಲ್ಲಿ ಗ್ಯಾಸ್ ಪೂರೈಕೆ ಸಮಸ್ಯೆಗಳಿಂದ ಏಪ್ರಿಲ್ 15 ರಿಂದ ಹೊಸ ನಿಯಮ ಜಾರಿಯಾಗುತ್ತಾ? 

ನವದೆಹಲಿ (ಏ.02) ಮಧ್ಯಪ್ರಾಚ್ಯಗಳ ಯುದ್ಧಬಿಕ್ಕಟ್ಟಿನಿಂದ ತೈಲ ಹಾಗೂ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಏಷ್ಯಾದ ಹಲವು ರಾಷ್ಟ್ರಗಳು ಕಂಗಾಲಾಗಿದೆ. ಭಾರತ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸುತ್ತಿದ್ದರೂ ಗ್ಯಾಸ್ ಸಮಸ್ಯೆಯಿಂದ ಹೊಟೆಲ್ ಸೇರಿದಂತೆ ಹಲವು ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿದೆ. ಏಷ್ಯಾ ರಾಷ್ಟ್ರಗಳ ಪೈಕಿ ಮಲೇಷಿಯಾ, ಚೀನಾ ಸೇರಿದಂತೆ ಹಲವು ರಾಷ್ಟ್ರಗಳು ಇದೀಗ ಕಠಿಣ ನಿಯಮ ಜಾರಿಗೊಳಿಸುತ್ತಿದೆ. ಮಲೇಷಿಯಾದಲ್ಲಿ ಮನೆಯಿಂದ ಕೆಲಸ( ವರ್ಕ್ ಫ್ರಮ್ ಹೋಮ್ ನಿಯಮ ಜಾರಿಗೊಳಿಸಿದೆ. ಇತ್ತ ಚೀನಾದಲ್ಲಿ ದೇಸಿ ವಿಮಾನಗಳನ್ನು ಕಡಿತಗೊಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಪ್ರಿಲ್ 15 ರಿಂದ ಮನೆಯಿಂದ ಕೆಲಸ ನಿಯಮ ಕಡ್ಡಾಯ

ಮಲೇಷಿಯಾದಲ್ಲಿ ತೈಲ ಸಮಸ್ಯೆ ತೀವ್ರಗೊಂಡಿದೆ. ಇಷ್ಟು ದಿನ ಸಂಗ್ರಹಣೆಯಲ್ಲಿದ್ದ ತೈಲ ಬಳಸಲಾಗಿತ್ತು. ಇದರ ನಡುವೆ ಕೆಲ ತೈಲ ಹಡಗುಗಳು ಹೊರ್ಮುಜ್ ಜಲಸಂಧಿ ಮೂಲಕ ಸಾಗಿ ಬಂದರೂ ಮಲೇಷಿಯಾಗೆ ಹೆಚ್ಚಿನ ಪ್ರಯೋಜನವಾಗಲಿಲ್ಲ. ತೈಲ ಸಮಸ್ಯೆ ತೀವ್ರಗೊಳ್ಳುತ್ತಿದ್ದಂತೆ ಇದೀಗ ಬಳಕೆ ಕಡಿಮೆ ಮಾಡಲು ಎಪ್ರಿಲ್ 15 ರಿಂದ ವರ್ಕ್ ಫ್ರಮ್ ಹೋಮ್ ಜಾರಿ ಮಾಡಲಾಗಿದೆ. ಯಾರಿಗೆಲ್ಲಾ ವರ್ಕ್ ಫ್ರಮ್ ಹೋಮ್ ಸಾಧ್ಯವೋ ಅವರೆಲ್ಲರಿಗೂ ಮನೆಯಿಂದ ಕೆಲಸ ಮಾಡಲು ಕಂಪನಿಗಳು ಅನುವು ಮಾಡಿಕೊಡಬೇಕು ಎಂದು ಸೂಚಿಸಿದೆ. ಸರ್ಕಾರಿ ಉದ್ಯೋಗಿಗಳು ಸೇರಿದಂತೆ ಅವಕಾಶ ಇರುವವರಿಗೆ ಮನೆಯಿಂದ ಕೆಲಸ ಮಾಡಲು ಅನುಮತಿ ನೀಡಲು ಸೂಚಿಸಿದೆ.

ಮಲೇಷಿಯಾ ಪ್ರಧಾನಿ ಅನ್ವರ್ ಇಬ್ರಾಹಿಂ ವರ್ಕ್ ಫ್ರಮ್ ಹೋಮ್ ಸೇರಿದಂತೆ ಕೆಲ ಮಹತ್ವದ ಘೋಷಣೆ ಮಾಡಿದ್ದಾರೆ. ಮಲೇಷಿಯಾದಲ್ಲಿ ತೈಲ ಬಳಕೆ ಕಡಿಮೆ ಮಾಡಿ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಈ ಘೋಷಣೆ ಮಾಡಲಾಗಿದೆ. ಮಲೇಷಿಯಾದ ಕ್ಯಾಬಿನೆಟ್ ಸಚಿವರಿಗೂ ಮನೆಯಿಂದ ಕೆಲಸ ಮಾಡುವಂತೆ ಸೂಚಿಸಲಾಗಿದೆ.

ಚೀನಾದಲ್ಲಿ ವಿಮಾನ ಬೆಲೆ ದುಬಾರಿ

ಚೀನಾದಲ್ಲಿ ತೈಲ ಸಮಸ್ಯೆ ತೀವ್ರಗೊಳ್ಳುತ್ತಿದೆ. ಪ್ರಮುಖವಾಗಿ ದೇಸಿ ವಿಮಾನಗಳಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಹಲವು ವಿಮಾನ ಸೇವೆಗಳನ್ನು ಕಡಿತಗೊಳಿಸಲಾಗಿದೆ. ಇತ್ತ ವಿಮಾನ ಟಿಕೆಟ್ ದರ ದುಬಾರಿಯಾಗಿದೆ. ಸರ್ಚಾಜ್ ಹೆಚ್ಚು ಮಾಡಲಾಗಿದ್ದು ಪ್ರಯಾಣಿಕರು ಕಂಗಾಲಾಗಿದ್ದಾರೆ.