ಕೆನ್ನೆಗೆ ಬಾರಿಸುವ ಚಾಂಪಿಯನ್ ಶಿಪ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕಿವಿ ಗುಯ್ಯೆನಿಸುವ ಸ್ಪರ್ಧೆ ಇದು
ಪ್ರಪಂಚದಲ್ಲಿ ಎಂಥೆಂತಹಾ ಸ್ಪರ್ಧೆಗಳಿರುತ್ತವೆ ನೋಡಿ ಕೇಳಿದರೆ ಕೆಲವೊಮ್ಮೆ ಮೈ ಝುಂ ಅನ್ನುತ್ತಿರುತ್ತೆ. ಆದರೆ ಇಲ್ಲೊಂದು ಸ್ಪರ್ಧೆ ಇದೆ ಇದರಲ್ಲಿ ಭಾಗವಹಿಸಿದರೆ ಮೈ ಝುಂ ಆಗುವುದೋ ಇಲ್ಲವೋ ತಿಳಿಯದು ಆದರೆ ಕಿವಿ ಗುಯ್ಯೆನೆಸದೆ ಇರದು. ಹೌದು ಇಲ್ಲೊಂದು ಕಡೆ ಕೆನ್ನೆಗೆ ಬಾರಿಸುವ ಚಾಂಪಿಯನ್‌ಶಿಪ್ ನಡೆಯುತ್ತಿದೆ. ಅಮೆರಿಕಾದ ( United States) ಕೊಲಂಬಸ್‌ನಲ್ಲಿರುವ (Columbus) ಒಹಿಯೋದಲ್ಲಿ (Ohio) ಈ ವಿಚಿತ್ರ ಚಾಂಪಿಯನ್‌ಶಿಪ್ ನಡೆಯುತ್ತಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಅರ್ನಾಲ್ಡ್ ಶ್ವಾರ್ಜಿನೆಗ್ಗರ್ (Arnold Schwarzenegger) ಮತ್ತು ಲೋಗನ್ ಪಾಲ್ (Logan Paul) ಈ ಕೆನ್ನೆಗೆ ಬಾರಿಸುವ ಸ್ಲ್ಯಾಪ್ ಫೈಟಿಂಗ್ ಚಾಂಪಿಯನ್‌ಶಿಪ್ ಅನ್ನು ಪ್ರಾರಂಭಿಸಿದವರು. ಈ ಸ್ಪರ್ಧೆಯಲ್ಲಿ ಸ್ಪರ್ಧಿಗಳು ಪರಸ್ಪರ ಮುಖಾಮುಖಿಯಾಗಿ ನಿಂತು 30 ಸೆಕೆಂಡುಗಳ ಕಾಲ ಪ್ರತಿಸ್ಪರ್ಧಿಯ ಕೆನ್ನೆಗೆ ಬಾರಿಸಬೇಕು.ಈ ವಿಚಿತ್ರ ಸ್ಪರ್ಧೆ ಮೂರು ಸುತ್ತುಗಳನ್ನು ಒಳಗೊಂಡಿತ್ತು.
ಜನಪ್ರಿಯವಾಗಿರುವ ಅರ್ನಾಲ್ಡ್ ಕ್ರೀಡಾ ಉತ್ಸವ ( Arnold Sports Festival) ಹಾಗೂ ವೃತ್ತಿಪರ ಬಾಕ್ಸರ್ ಲೋಗನ್ ಪಾಲ್ (Logan Paul) ಅವರು ಜಂಟಿಯಾಗಿ ಆಯೋಜಿಸಿದ್ದಾರೆ. ಅರ್ನಾಲ್ಡ್ ಕ್ರೀಡಾ ಉತ್ಸವವನ್ನು ನಟ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಸ್ಥಾಪಿಸಿದ್ದರು.ಇನ್ನು ಈ ವಿಲಕ್ಷಣ ಚಾಂಪಿಯನ್‌ಶಿಪ್ ಅನ್ನು ಮಾರ್ಚ್ 5 ರಂದು ಫೆನ್ಮಿಯೊ( Fanmio) ಮತ್ತು ಪಾಲ್ ಅವರ ಯೂಟ್ಯೂಬ್ (YouTube) ಚಾನೆಲ್ ಮತ್ತು ಫೇಸ್‌ಬುಕ್ (Facebook) ಪುಟದಲ್ಲಿ ಲೈವ್-ಸ್ಟ್ರೀಮ್ ಮಾಡಲಾಗಿತ್ತು. ಚಾಂಪಿಯನ್‌ಶಿಪ್‌ನ ಕಿರು ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅಚ್ಚರಿಯ ಜೊತೆ ತಮಾಷೆಯ ಕಾಮೆಂಟ್ ಮಾಡಿದ್ದಾರೆ.
Karnataka Police: ದಾವಣಗೆರೆ ಮಣಿಸಿ ಬೆಂಗಳೂರು ಪೊಲೀಸರು ಕಬಡ್ಡಿ ಚಾಂಪಿಯನ್ಸ್
ಲೋಗನ್ ಪಾಲ್ ಅವರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ ಸಣ್ಣ ವೀಡಿಯೊದಲ್ಲಿ,ಈ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು. ಹೊಡೆತದ ರಭಸಕ್ಕೆ ಆತ ನೆಲದ ಮೇಲೆ ಬಿದ್ದಿದ್ದು, ಹಿಂದೆ ಇದ್ದ ಇಬ್ಬರು ಆತನನ್ನು ಹಿಡಿದುಕೊಂಡಿದ್ದಾರೆ. ಇದನ್ನು ನೋಡಿ ಲೋಗನ್ ಆಘಾತಕ್ಕೊಳಗಾಗಿರುವುದನ್ನು ಕಾಣಬಹುದು ಮತ್ತು ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಕೂಡ ಈ ವಿಡಿಯೋದಲ್ಲಿದ್ದಾರೆ.
ಸ್ಪರ್ಧೆಯಲ್ಲಿ ಸ್ಪರ್ಧಿಗಳು ಪರಸ್ಪರ ಮುಖಾಮುಖಿಯಾಗಿ ನಿಂತು 30 ಸೆಕೆಂಡುಗಳ ಕಾಲ ಕೆನ್ನೆಗೆ ಬಾರಿಸಬೇಕು. ಈ ಸ್ಪರ್ಧೆ ಮೂರು ಸುತ್ತುಗಳನ್ನು ಒಳಗೊಂಡಿತ್ತು. ಪುರುಷ ಮತ್ತು ಮಹಿಳಾ ಎರಡೂ ವಿಭಾಗಗಳಲ್ಲಿಯೂ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕೆನ್ನೆ ಮೇಲೆ ಸರಿಯಾಗಿ ಬಾರಿಸುವ ಈ ಹೊಡೆತದಿಂದ ಮೆದುಳಿಗೆ ಹಾನಿಯಾಗಬಹುದು. ಇದನ್ನು ಹೇಗೆ ಕ್ರೀಡೆ ಎಂದು ಪರಿಗಣಿಸಲಾಗುತ್ತದೆ ಎಂದು ಬಳಕೆದಾರರು ಬರೆದಿದ್ದಾರೆ.
Big Bash League: ಸಿಡ್ನಿ ಸಿಕ್ಸರ್ಸ್ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ಪರ್ತ್ ಸ್ಕ್ರಾಚರ್ಸ್
ಲೋಗನ್ ಪಾಲ್ ಅವರು ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಅವರೊಂದಿಗಿನ ಒಂದು ಸಂದರ್ಶನದಲ್ಲಿ, ಈ ಕೆನ್ನೆಗೆ ಬಾರಿಸುವ ಸ್ಪರ್ಧೆ ರಷ್ಯಾದಲ್ಲಿ ಕ್ರೀಡೆಯಾಗಿ ಹುಟ್ಟಿಕೊಂಡಿದೆ ಎಂದು ಹೇಳಿದ್ದಾರೆ. ಅಮೆರಿಕಾ (US) ಪ್ರವೇಶಿಸುವ ಮೊದಲು ಈ ಕ್ರೀಡೆಯು ಪೂರ್ವ ಯುರೋಪಿನಲ್ಲಿ(Eastern Europe) ಜನಪ್ರಿಯತೆಯನ್ನು ಗಳಿಸಿತ್ತು.