'ಏಳು ತಿಂಗಳ ಯುದ್ಧ..' ಇಸ್ರೇಲ್-ಹಮಾಸ್ ಯುದ್ಧದ ಬಗ್ಗೆ ನಿಜವಾದ ನಾಸ್ಟ್ರಾಡಾಮಸ್ ಭವಿಷ್ಯ!
ಕೇವಲ ಇಸ್ರೇಲ್ ಯುದ್ಧ ಮಾತ್ರವಲ್ಲ, ನಾಸ್ಟ್ರಾಡಾಮಸ್ 450 ವರ್ಷಗಳ ಹಿಂದೆಯೇ ಇಂದಾಗುವ ಕೆಲವು ಘಟನೆಗಳ ಭವಿಷ್ಯ ನುಡಿದಿದ್ದರು. ಆದರೆ, ಇದು ನಿಜವಾಗಬಹುದು ಎನ್ನುವ ಕಲ್ಪನೆ ಯಾರಲ್ಲೂ ಇದ್ದಿರಲಿಲ್ಲ.
ನವದೆಹಲಿ (ಅ.11): ಪ್ರಖ್ಯಾತ ಫ್ರೆಂಚ್ ಕಾಲಜ್ಞಾನಿ ಮೈಕೆಲ್ ಡಿ ನಾಸ್ಟ್ರೆಡೇಮ್ ಸಾಮಾನ್ಯವಾಗಿ ನಾಸ್ಟ್ರಾಡಾಮಸ್ ಎನ್ನುವ ಹೆಸರಿನಿಂದಲೇ ಪರಿಚಿತರು. ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಯುದ್ಧದ ಸಂದರ್ಭದಲ್ಲಿ ನಾಸ್ಟ್ರಾಡಾಮಸ್ ಹೇಳಿದ್ದ 450 ವರ್ಷದ ಹಿಂದಿನ ಭವಿಷ್ಯ ನಿಜವಾಗಿದೆ. ಅಷ್ಟು ವರ್ಷಗಳ ಹಿಂದೆಯೇ ನಾಸ್ಟ್ರಾಡಾಮಸ್, 2023ರಲ್ಲಿ ಏಳು ತಿಂಗಳ ಯುದ್ಧವನ್ನು ಅವರು ಊಹೆ ಮಾಡಿದ್ದರು. ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದ ಉಲ್ಲೇಖ ಎಂದು ಆ ಸಂದರ್ಭದಲ್ಲಿ ಹೇಳಲಾಗಿತ್ತಾದರೂ, ಈಗ ಆ ದೇಶಗಳ ನಡುವಿನ ಯುದ್ಧ ಏಳು ತಿಂಗಳ ಅವಧಿಯನ್ನೂ ಮೀರಿದೆ. ಹಾಗಾಗಿ ನಾಸ್ಟ್ರಾಡಾಮಸ್ ಅವರ 2023ರ ಭವಿಷ್ಯ ಹೊಸ ಚರ್ಚೆ ಹುಟ್ಟುಹಾಕಿದೆ. ಹೆಚ್ಚಿನವರ ಪ್ರಕಾರ, 450 ವರ್ಷಗಳ ಹಿಂದೆ ನಾಸ್ಟ್ರಾಡಾಮಸ್ ಹೇಳಿದ್ದ ಏಳು ತಿಂಗಳ ಯುದ್ಧದ ಭವಿಷ್ಯ ಇಸ್ರೇಲ್ ಹಾಗೂ ಹಮಾಸ್ ಯುದ್ಧಕ್ಕೆ ಹೊಂದಿಕೆಯಾಗಲಿದೆ ಎಂದು ಅಭಿಪ್ರಾಯಪಟ್ಟೊದ್ದಾರೆ. ಪ್ಯಾಲಿಸ್ತೇನ್ ದೇಶದ ಭಯೋತ್ಪಾದಕ ಗುಂಪು ಹಮಾಸ್, ಕಳೆದ ಶನಿವಾರ ಇಸ್ರೇಲ್ ಮೇಲೆ 6 ಸಾವಿರಕ್ಕೂ ಅಧಿಕ ರಾಕೆಟ್‌ಅನ್ನು ಉಡಾಯಿಸಿದ ಬೆನ್ನಲ್ಲಿಯೇ, ಇಸ್ರೇಲ್ ಹಮಾಸ್ ಮೇಲೆ ಯುದ್ಧ ಘೋಷಣೆ ಮಾಡಿದೆ. ಇತ್ತೀಚೆಗೆ, ಗಾಜಾದ ಸಂಪೂರ್ಣ ದಿಗ್ಭಂದನ ಹೇರಿರುವ ಇಸ್ರೇಲ್, ನೀರು, ವಿದ್ಯುತ್ ಮತ್ತು ಆಹಾರ ಸಂಪೂರ್ಣವಾಗಿ ಬಂದ್ ಮಾಡುವುದಾಗಿ ತಿಳಿಸಿದೆ.
ಇನ್ನು ನಾಸ್ಟ್ರಾಡಾಮಸ್ ಇಸ್ರೇಲ್ ಯುದ್ಧ ಮಾತ್ರವಲ್ಲದೆ, ಸಾಕಷ್ಟು ವಿಚಾರಗಳ ಬಗ್ಗೆ ಅವರು ಹಿಂದೆಯೇ ಭವಿಷ್ಯ ನುಡಿದಿದ್ದರು. ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಆಗಬಹುದು ಎಂದು ಅಗಲೇ ಅವರು ತಿಳಿಸಿದ್ದರು. ನಾಸ್ಟ್ರಾಡಾಮಸ್ ಹೇಳಿರುವ ಭವಿಷ್ಯದ ಟ್ರ್ಯಾಕ್ ರೆಕಾರ್ಡ್ ನೋಡಿದಲ್ಲಿ, ಅವರ ಭವಿಷ್ಯವನ್ನು ಅಲ್ಲಗಳೆಯಲು ಸಾಧ್ಯವಿಲ್ಲ.
"ಸೂರ್ಯನಂತೆ ತಲೆಯು ಹೊಳೆಯುವ ಸಮುದ್ರವನ್ನು ನೋಡುತ್ತದೆ: ಕಪ್ಪು ಸಮುದ್ರದ ಜೀವಂತ ಮೀನುಗಳು ಕುದಿಯುತ್ತವೆ. ರೋಡ್ಸ್ ಮತ್ತು ಜಿನೋವಾ ಅರ್ಧ ಹಸಿವಿನಿಂದ ಬಳಲುತ್ತಿರುವಾಗ, ಸ್ಥಳೀಯ ಜನರು ಅವುಗಳನ್ನು ಕತ್ತರಿಸಲು ಶ್ರಮಿಸುತ್ತಾರೆ" ಎಂದು ನಾಸ್ಟ್ರಾಡಾಮಸ್ 450 ವರ್ಷಗಳ ಹಿಂದೆ 2023 ರ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ. ನಾಸ್ಟ್ರಾಡಾಮಸ್ ಬದುಕಿದ್ದ ಸಮಯ ವಾಹನಗಳು ಹಾಗೂ ಕೈಗಾರೀಕರಣದ ಕಾಲಘಟ್ಟವೂ ಆಗಿರಲಿಲ್ಲ. ಹಾಗಿದ್ದರೂ ಅಂದೇ ಅವರು ಜಾಗತಿಕ ತಾಪಮಾನದ ಬಗ್ಗೆ ಊಹೆ ಮಾಡಿದ್ದರು.
2023ಕ್ಕೆ ನಾಸ್ಟ್ರಾಡಾಮಸ್ ಹೇಳಿರುವ ಭೀಕರ ಭವಿಷ್ಯ ಕೇಳಿದ್ರೆ ಬೆಚ್ಚಿ ಬೀಳ್ತೀರಾ..
ಇನ್ನು ಮಂಗಳ ಗ್ರಹದ ಬಗ್ಗೆ ಮಾನವನ ಆಸಕ್ತಿಯ ಬಗ್ಗೆಯೂ ಅವರು ಬರೆದಿದ್ದು, 'ಮಂಗಳನಲ್ಲಿ ಬೆಳಕು ಕುಸಿಯುತ್ತದೆ' ಎಂದು ತಮ್ಮ ಕಾಲಜ್ಞಾನದ ಪುಸ್ತಕದಲ್ಲಿ ಬರೆದಿದ್ದಾರೆ. ಹೆಚ್ಚಿನವರು ಇದು ಗ್ರಹದ ಹಿಮ್ಮುಖ ಚಲನೆಯನ್ನು ಆಗಿರಬಹುದು ಎಂದಿದ್ದಾರೆ. ಆದರೆ, ಕೆಲವು ಪಂಡಿತರ ಪ್ರಕಾರ, ಮಂಗಳ ಗ್ರಹದಲ್ಲಿ ಮಾನವನ ಭವಿಷ್ಯವನ್ನು ನಾಸ್ಟ್ರಾಡಾಮಸ್ ಇದರಲ್ಲಿ ಬರೆದಿದ್ದಾರೆ ಎಂದು ಅಂದಾಜಿಸಿದ್ದಾರೆ. ಇನ್ನು ನಾಸ್ಟ್ರಾಡಾಮಸ್ ಹೇಳಿರುವ ಅಂದಾಜಿನಲ್ಲಿ ತಿಳಿಸುವುದಾದರೆ, ಯಾವುದೇ ಸಮಯದಲ್ಲಿ ಸ್ಫೋಟಗಳು ಮತ್ತು ವಿಮಾನ ಅಪಘಾತಗಳು ಸಂಭವಿಸಬಹುದು. ಡಚ್ ಕಂಪನಿಯಿಂದ ಎಲೋನ್ ಮಸ್ಕ್‌ನ ಸ್ಪೇಸ್‌ಎಕ್ಸ್‌ವರೆಗೆ, ಹಲವಾರು ಏಜೆನ್ಸಿಗಳು ಮಂಗಳಯಾನದ ಹಿಂದೆ ಬಿದ್ದಿವೆ. ಆದರೆ, ನಾಸ್ಟ್ರಾಡಾಮಸ್ ಪ್ರಕಾರ ಇದು ಕಷ್ಟದ ವಿಚಾರ.
ಸತ್ಯವಾಗುತ್ತಿದೆಯೇ 2022ಕ್ಕೆ ನಾಸ್ಟ್ರಾಡಾಮಸ್ ನುಡಿದ ಭಯಾನಕ ಭವಿಷ್ಯವಾಣಿ?