ಮಗಳ ಹೆಸರು ಯಾರು ಇಡುವಂತಿಲ್ಲ, ಈಗಾಗಲೇ ಹೆಸರಿಟ್ಟಿದ್ದರೆ ಬದಲಿಸಿ; ಕಿಮ್ ಜಾಂಗ್ ಹೊಸ ಆದೇಶ!
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾನ್ ಉನ್ ಹೊಸ ಆದೇಶ ನೀಡಿದ್ದಾರೆ. ತಮ್ಮ ಮಗಳ ಹೆಸರನ್ನು ಯಾರು ಬಳಸುವಂತಿಲ್ಲ,ಈಗಾಗಲೇ ಯಾರಾದರೂ ಅದೇ ಹೆಸರನ್ನು ಇಟ್ಟಿದ್ದರೆ ತಕ್ಷಣವೆ ಬದಲಿಸಲು ಖಡಕ್ ಸೂಚನೆ ನೀಡಲಾಗಿದೆ. ಅಷ್ಟಕ್ಕೂ ಕಿಮ್ ಜಾಂಗ್ ಉನ್ ತನ್ನ ಮಗಳಿಗೆ ಇಟ್ಟಿರುವ ಹೆಸರೇನು?
ಉತ್ತರ ಕೊರಿಯಾ(ಫೆ.16): ಉತ್ತರ ಕೊರಿಯಾದಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನೀಡುವ ಆದೇಶಗಳು ಜನರಿಗೆ ಇಷ್ಟ, ಕಷ್ಟದ ಪ್ರಶ್ನೆ ಇಲ್ಲ. ಆದೇಶ ಹೊರಬಿದ್ದರೆ ಪಾಲಿಸಲೇಬೇಕು. ಉಲ್ಲಂಘಿಸಿದರೆ ಶಿಕ್ಷೆಯ ಪ್ರಮಾಣ ಊಹಿಸಲು ಅಸಾಧ್ಯ. ಇದೀಗ ಕಿಮ್ ಜಾನ್ ಉನ್ ವಿಶೇಷ ಆದೇಶವೊಂದನ್ನು ಹೊರಡಿಸಿದ್ದಾರೆ. ತನ್ನ ಮಗಳಿಗೆ ಇಟ್ಟಿರುವ ಹೆಸರನ್ನು ಉತ್ತರ ಕೊರಿಯಾದಲ್ಲಿ ಯಾರೂ ಇಡುವಂತಿಲ್ಲ. ಒಂದು ವೇಳೆ ಈಗಾಗಲೇ ಈ ಹೆಸರು ಬಳಕೆ ಮಾಡಿದ್ದರೆ, ತಕ್ಷಣವೇ ಬದಲಿಸಲು ಆದೇಶ ನೀಡಲಾಗಿದೆ. ತನ್ನ ಮಗಳ ಹೆಸರು ಉತ್ತರ ಕೊರಿಯಾದಲ್ಲಿ ಬೇರೆ ಯಾರಿಗೂ ಇರಬಾರದು ಎಂದು ಖಡಕ್ ಆದೇಶ ಹೊರಡಿಸಲಾಗಿದೆ. ಈ ಆದೇಶ ಬೆನ್ನಲ್ಲೇ ಹಲವು ಪೋಷಕರು ಹೆಸರು ಬದಲಿಸಲು ಅಲೆದಾಡುತ್ತಿದ್ದಾರೆ.
ಕಿಮ್ ಜಾಂಗ್ ಉನ್ ಮಗಳ ಹೆಸರು ಕಿಮ್ ಜು ಏ. ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರವೂ ಇದೆ. ಕಿಮ್ ಜಾನ್ ಉನ್ ಮಗಳ ವಯಸ್ಸು 9. ಈಗ ಕಿಮ್ ಜಾಂಗ್ ಉನ್‌ಗೆ ತನ್ನ ಮಗಳ ಹೆಸರು ಯಾರೂ ಇಡಬಾರದು ಅನ್ನೋ ಯೋಜನೆ ಬಂದಿದೆ. ಉತ್ತರ ಕೊರಿಯಾದಲ್ಲಿ ಕಿಮ್ ಜು ಏ ಅನ್ನೋ ಹೆಸರಿಟ್ಟಿರುವ ಹೆಣ್ಣುಮಕ್ಕಳ ಸಂಖ್ಯೆ ಬೆರೆಳೆಣಿಕೆ. ಇಂತದೊಂದು ಅಪಾಯವನ್ನು ಹಲವರು ಮೊದಲೇ ಊಹಿಸಿದ್ದರು. ಹೀಗಾಗಿ ಕಿಮ್ ಜಾಂಗ್ ಉನ್ ಕುಟುಂಬದ ಯಾವುದೇ ಹೆಸರನ್ನು ಯಾರು ಇಡುವುದಿಲ್ಲ. ಆದರೆ ಉತ್ತರ ಪ್ಯಾಂಗ್ಯಾಂಗ್ ಹಾಗೂ ದಕ್ಷಿಣ ಪ್ಯಾಂಗ್ಯಾಂಗ್‌ನಲ್ಲಿ ಇಬ್ಬರು ಹೆಣ್ಣುಮಕ್ಕಳ ಹೆಸರಿನಲ್ಲಿ ಜು ಏ ಎಂದು ಬಳಸಿದ್ದಾರೆ. ಇದಕ್ಕೂ ಅಲ್ಲಿನ ಆಡಳಿತ ಮಂಡಳಿ ಪೋಷಕರಿಗೆ ಖಡಕ್ ಸೂಚನೆ ನೀಡಿದೆ. ಒಂದು ವಾರದಲ್ಲಿ ಹೆಸರು ಬದಲಿಸಲು ಸೂಚನೆ ನೀಡಿದೆ.
ದಕ್ಷಿಣ ಕೊರಿಯಾ; ಚಿತ್ರ ವೀಕ್ಷಣೆ ಮಾಡಿದ ಇಬ್ಬರು ವಿದ್ಯಾರ್ಥಿಗಳಿಗೆ ಗಲ್ಲು ಶಿಕ್ಷೆ ನೀಡಿದ ಕಿಮ್!
ಕಿಮ್ ಜು ಏ ಅನ್ನೋ ಸಂಪೂರ್ಣ ಹೆಸರು ಉತ್ತರ ಕೊರಿಯಾದಲ್ಲಿ ನೊಂದಣಿಯಾಗಿಲ್ಲ. ಆದರೆ ಜು ಏ, ಕಿಮ್ ಜು ಎಂದೆಲ್ಲಾ ಕೆಲ ಹೆಸರುಗಳು ನೋಂದಣಿಯಾಗಿದೆ. ಇದೀಗ ಆಯಾ ಸ್ಥಳೀಯ ಆಡಳಿತ ಮಂಡಳಿ ಖಡಕ್ ಸೂಚನೆ ನೀಡಿದೆ. ತಕ್ಷಣವೇ ಎಲ್ಲಾ ದಾಖಲೆ ಪತ್ರ ಮಾತ್ರವಲ್ಲ ಜನನ ಪ್ರಮಾಣ ಪತ್ರದಲ್ಲೂ ಹೆಸರು ಬದಲಿಸುವಂತೆ ಸೂಚಿಸಿದೆ. ಒಂದು ವಾರದಲ್ಲಿ ಉತ್ತರ ಕೊರಿಯಾದಲ್ಲಿನ ಹೆಸರು ಬದಲಿಸುವ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಎಂದು ಆದೇಶ ನೀಡಲಾಗಿದೆ.
ಕಿಮ್ ಜಾಂಗ್ ಉನ್ ಪುತ್ರಿ ಮುಂದಿನ ಉತ್ತರ ಕೊರಿಯಾದ ಚುಕ್ಕಾಣಿ ಹಿಡಿಯಲಿದ್ದಾರೆ. ಕಿಮ್ ಜಾನ್ ಉನ್ ಉತ್ತರಾಧಿಕಾರಿ ಎಂದೇ ಬೆಂಬಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಇತ್ತೀಚೆಗಿನ ಮಿಲಿಟರಿ ಪರೇಡ್‌ನಲ್ಲಿ ಕಿಮ್ ಜಾನ್ ಉನ್ ಜೊತೆ ಪುತ್ರಿ ಕಿಮ್ ಜು ಏ ಮೊದಲ ಬಾರಿ ಕಾಣಿಸಿಕೊಂಡಿದ್ದರು. ಕೇವಲ 9 ವರ್ಷದ ಕಿಮ್ ಜು ಏ ಪ್ರಬಲ ನಾಯಕಿಯನ್ನಾಗಿ ಮಾಡಲು ವಿಶೇಷ ತರಬೇತಿಯನ್ನು ನೀಡಲಾಗುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.
ಉತ್ತರ ಕೊರಿಯಾದ ಗನ್, ಬಾಂಬ್‌ಗಳ ಹೆಸರನ್ನು ನಿಮ್ಮ ಮಕ್ಕಳಿಗೆ ಇಡಿ: ಕಿಮ್ ಜಾಂಗ್ ಹೊಸ ಅದೇಶ!
ಉತ್ತರ ಕೊರಿಯಾದ ಸರ್ವಾಧಿಕಾರಿ ಅಧ್ಯಕ್ಷ ಕಿಮ್ ಜಾಂಗ್ ಉನ್‌ರ ಪುತ್ರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಬೆನ್ನಲ್ಲೇ ಮುಂದಿನ ನಾಯಕಿ, ಉತ್ತರಾಧಿಕಾರಿ ಅನ್ನೋ ಮಾತುಗಳು ಜೋರಾಗಿ ಕೇಳಿಬರುತ್ತಿದೆ. 9 ವರ್ಷದ ಬಾಲಕಿ ಜು ಎ, ಕ್ಷಿಪಣಿ ವಿಜ್ಞಾನಿಗಳು ಹಾಗೂ ಗಣ್ಯ ವ್ಯಕ್ತಿಗಳ ಜತೆಯಲ್ಲಿ ಕಂಡುಬಂದಿದ್ದು, ಈಕೆಯೇ ಕಿಮ್‌ನ ಉತ್ತರಾಧಿಕಾರಿಯಾಗಬಹುದು ಎಂಬ ಊಹಾಪೋಹಕ್ಕೆ ಕಾರಣವಾಗಿದೆ. ಜು ಐ ಕಿಮ್‌ನ ದ್ವಿತೀಯ ಪುತ್ರಿಯಾಗಿದ್ದು, ಕಿಮ್ ಈಕೆಯನ್ನು ಬಹಳ ಪ್ರೀತಿಸುತ್ತಾರೆ ಎನ್ನಲಾಗಿದೆ. ಹ್ವಾಸಾಂಗ್-17 ಕ್ಷಿಪಣಿ ತಯಾರಿಕಾ ವಿಜ್ಞಾನಿಗಳನ್ನು ತಂದೆ ಜತೆ ಭೇಟಿಯಾದ ಈಕೆ ಅವರೊಂದಿಗೆ ಫೋಟೊ ತೆಗೆಸಿಕೊಂಡಿದ್ದಾಳೆ. ಈ ಹಿಂದೆ ಕಳೆದ ವಾರ ಬ್ಯಾಲಿಸ್ಟಿಕ್ ಕ್ಷಿಪಣಿ ಹಾರಾಟದ ಮುನ್ನ ಈಕೆ ಸಾರ್ವಜನಿಕವಾಗಿ ಮೊಟ್ಟಮೊದಲು ಕಾಣಿಸಿಕೊಂಡಿದ್ದಳು.