ದಕ್ಷಿಣ ಕೊರಿಯಾ; ಚಿತ್ರ ವೀಕ್ಷಣೆ ಮಾಡಿದ ಇಬ್ಬರು ವಿದ್ಯಾರ್ಥಿಗಳಿಗೆ ಗಲ್ಲು ಶಿಕ್ಷೆ ನೀಡಿದ ಕಿಮ್‌!

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌, ಇತ್ತೀಚೆಗೆ ತನ್ನ ದೇಶದ ಇಬ್ಬರು ಅಪ್ರಾಪ್ತ ಬಾಲಕರಿಗೆ ಮರಣದಂಡನೆ ಶಿಕ್ಷೆ ಜಾರಿ ಮಾಡಿದ್ದಾನೆ. ಅವರು ಮಾಡಿದ್ದು ತಪ್ಪು ಏನೆಂದರೆ, ಉತ್ತರ ಕೊರಿಯಾದಲ್ಲಿ ತನ್ನ ಶತ್ರು ದೇಶ ದಕ್ಷಿಣ ಕೊರಿಯಾದ ಸಿನಿಮಾಗಳನ್ನು ನೋಡಿದ್ದು. ಉತ್ತರ ಕೊರಿಯಾದಲ್ಲಿ ಶತ್ರು ದೇಶಗಳ ಸಿನಿಮಾ ನೋಡುವುದು ಮಹಾಅಪರಾಧ.
 

North Korea President Kim Jong Un Executes 2 Minors For Watching South Korean drama san

ನವದೆಹಲಿ (ಡಿ.6): ಉತ್ತರ ಕೊರಿಯಾದಿಂದ ಆಘಾತಕಾರಿ ಸುದ್ದಿ ಹೊರಬಂದಿದೆ. ಹೈಸ್ಕೂಲ್‌ನಲ್ಲಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ಉತ್ತರ ಕೊರಿಯಾ ಸರ್ವಾಧಿಕಾರಿ ಮರಣದಂಡನೆ ಶಿಕ್ಷೆ ಜಾರಿ ಮಾಡಿದ್ದಾನೆ. ಇವರು ಮಾಡಿದ್ದ ಮಹಾಅಪರಾಧ ಏನೆಂದರೆ, ದಕ್ಷಿಣ ಕೊರಿಯಾದ ಸಿನಿಮಾವನ್ನು ನೋಡಿದ್ದು. ರೇಡಿಯೋ ಫ್ರೀ ಏಷ್ಯಾದ ವರದಿಯ ಪ್ರಕಾರ, ಇಬ್ಬರೂ ವಿದ್ಯಾರ್ಥಿಗಳ ವಯಸ್ಸು 15-16 ವರ್ಷಗಳು ಎನ್ನಲಾಗಿದೆ. ಜನರ ಮುಂದೆ ಸಾರ್ವಜನಿಕವಾಗಿ ಅವರನ್ನು ಗುಂಡು ಹಾರಿಸಿ ಸಾಯಿಸಿಸಲಾಗಿದೆ. ಉತ್ತರ ಕೊರಿಯಾ ಹಾಗೂ ದಕ್ಷಿಣ ಕೊರಿಯಾ ನಡುವಿನ ವೈಮನಸ್ಸು ಇಂದು ನಿನ್ನೆಯದಲ್ಲ. ದಶಕಗಳಿಂದ ಕಾಲ ಉತ್ತರ ಕೊರಿಯಾ, ದಕ್ಷಿಣ ಕೊರಿಯಾವನ್ನು ದ್ವೇಷ ಮಾಡುತ್ತಲೇ ಬದುಕಿದೆ. ಉತ್ತರ ಕೊರಿಯಾದ ಆಡಳಿತದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಎಷ್ಟು ಪ್ರಮಾಣದ ದ್ವೇಷವಿದೆ ಎಂದರೆ, ದಕ್ಷಿಣ ಕೊರಿಯಾದಲ್ಲಿ ತಯಾರಾದ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳನ್ನು ವೀಕ್ಷಿಸುವುದು ಮಹಾ ಅಪರಾಧ. ಅದೇ ಕಾರಣಕ್ಕಾಗಿ ಈ ಇಬ್ಬರು ಹೈಸ್ಕೂಲ್‌ ವಿದ್ಯಾರ್ಥಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.

ಕೊರಿಯಾದ ಮಾಧ್ಯಮವನ್ನು ಉಲ್ಲೇಖಿಸಿ ಬ್ರಿಟಿಷ್ ಪತ್ರಿಕೆ 'ದಿ ಇಂಡಿಪೆಂಡೆಂಟ್' ತನ್ನ ವರದಿಯಲ್ಲಿ ಮಾಡಿದೆ. ಈ ಘಟನೆ ಅಕ್ಟೋಬರ್‌ನಲ್ಲಿ ನಡೆದಿದ್ದು, ಈಗ ಅದರ ಮಾಹಿತಿ ಲಭ್ಯವಾಗಿದೆ. ಪ್ರತ್ಯಕ್ಷದರ್ಶಿಯೊಬ್ಬರು ಹೇಳುವ ಪ್ರಕಾರ,  ಮರಣದಂಡನೆಯನ್ನು ವೀಕ್ಷಿಸಲು ಜನರಿಗೂ ಕೂಡ ಒತ್ತಾಯ ಮಾಡಲಾಗಿತ್ತು ಎಂದು ವರದಿಯಲ್ಲಿ ಬರೆಯಲಾಗಿದೆ. ಪ್ರತ್ಯಕ್ಷದರ್ಶಿಯ ಪ್ರಯಾರ, ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರ ಅಧಿಕಾರಿಗಳು ಹೆಸನ್ ನಗರದಲ್ಲಿ ವಾಸಿಸುವ ಜನರನ್ನು ಖಾಲಿ ಮೈದಾನಕ್ಕೆ ಬರುವಂತೆ ಆದೇಶ ನೀಡಿದ್ದುರ. ಇಲ್ಲಿ ಕೆಲವು ಅಧಿಕಾರಿಗಳು ಜನಸಮೂಹದ ಸಮ್ಮುಖದಲ್ಲಿ ವಿದ್ಯಾರ್ಥಿಗಳಿಗೆ ಮರಣದಂಡನೆ ಜಾರಿ ಮಾಡುತ್ತಾ ಅವರ ಮೇಲೆ ಗುಂಡು ಹಾರಿಸಲಾಯಿತು ಎಂದಿದ್ದಾರೆ.

ಕೊರಿಯನ್‌ ಚಿತ್ರಗಳನ್ನು ಹಂಚಿದ್ದ ವಿದ್ಯಾರ್ಥಿಗಳು: ಉತ್ತರ ಕೊರಿಯಾದ ರಿಯಾಂಗಾಂಗ್ ಪ್ರಾಂತ್ಯದ ಪ್ರೌಢಶಾಲೆಯ ವಿದ್ಯಾರ್ಥಿಗಳು  ಅನೇಕ ದಕ್ಷಿಣ ಕೊರಿಯಾ ಮತ್ತು ಅಮೆರಿಕನ್‌ ನಾಟಕಗಳು ಮತ್ತು ಚಲನಚಿತ್ರಗಳನ್ನು ವೀಕ್ಷಿಸಿದರು. ಇಬ್ಬರೂ ಕೊರಿಯನ್ ನಾಟಕವನ್ನು ಇತರರಿಗೆ ತೋರಿಸಿದ್ದರು ಎಂದೂ ಆರೋಪಿಸಲಾಗಿದೆ. ಇಬ್ಬರೂ ಕೊರಿಯನ್ ನಾಟಕವನ್ನು ತಮ್ಮ ಸ್ನೇಹಿತರಿಗೆ ಹಂಚಿದರು ಈ ಆರೋಪವನ್ನು ಅವರು ಮೇಲೆ ಹೊರಿಸಲಾಗಿದ್ದರಿಂದ ಮರಣ ದಂಡನೆ ಶಿಕ್ಷೆ ನೀಡಲಾಗಿದೆ.

ಉತ್ತರ ಕೊರಿಯಾದ ಗನ್‌, ಬಾಂಬ್‌ಗಳ ಹೆಸರನ್ನು ನಿಮ್ಮ ಮಕ್ಕಳಿಗೆ ಇಡಿ: ಕಿಮ್‌ ಜಾಂಗ್ ಹೊಸ ಅದೇಶ!

ದಕ್ಷಿಣ ಕೊರಿಯಾದ ನಾಟಕ ಮತ್ತು ಸಂಗೀತದ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಕಡಿಮೆ ಮಾಡಲು ಉತ್ತರ ಕೊರಿಯಾ 2020 ರಲ್ಲಿ ಕಾನೂನನ್ನು ಅಂಗೀಕರಿಸಿತು. ಈ ಕಾನೂನಿನ ಅಡಿಯಲ್ಲಿ, ಸೈದ್ಧಾಂತಿಕ ಮತ್ತು ಸಾಂಸ್ಕೃತಿಕ ಸಾಧನಗಳನ್ನು ನಿಯಂತ್ರಿಸಲು ವಿದೇಶಿ ಮಾಹಿತಿ ಮತ್ತು ಅದರ ಪ್ರಭಾವವನ್ನು ನಿಷೇಧಿಸಲಾಗಿತ್ತು.

ಕಿಮ್‌ ಜಾಂಗ್‌ ಉನ್‌ 'ಪ್ಲೆಶರ್‌ ಸ್ಕ್ವಾಡ್‌', ವೇಶ್ಯಾವಾಟಿಕೆ ಕೂಪಕ್ಕೆ ಶಾಲಾ ಬಾಲಕಿಯರು!

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಮತ್ತೊಂದು ಚಿತ್ರಹಿಂಸೆ ಮುನ್ನೆಲೆಗೆ ಬಂದಿದೆ. ಅವರ ತಂದೆ ಕಿಮ್ ಜಾಂಗ್ ಇಲ್ ಅವರ ಜನ್ಮದಿನದಂದು ಸಾವಿರಾರು ಜನರು ಕೊರೆಯುವ ಚಳಿಯಲ್ಲಿ ಆತ ನಿಲ್ಲಿಸಿದ್ದ ಎನ್ನಲಾಗಿದೆ..ಕಿಮ್ ಜಾಂಗ್‌-ಉನ್ ತನ್ನ ತಂದೆಯ ಕೆಲಸವನ್ನು ಹೊಗಳುತ್ತಾ ಮಾತನಾಡುತ್ತಿದ್ದ ವೇಳೆ,  ಜನರು ಕೈಗವಸುಗಳು ಅಥವಾ ಟೋಪಿಗಳಿಲ್ಲದೆ ಸುಮಾರು -15 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 30 ನಿಮಿಷಗಳ ಕಾಲ ನಿಂತಿದ್ದರು.

Latest Videos
Follow Us:
Download App:
  • android
  • ios