Asianet Suvarna News Asianet Suvarna News

ಒಂದೇ ತಾಯಿಗೆ ಒಟ್ಟಿಗೆ ಹುಟ್ಟಿದ 9 ಮಕ್ಕಳಿಗೆ ಮೊದಲ ಹುಟ್ಟುಹಬ್ಬದ ಸಂಭ್ರಮ

2021ರ ಮೇ.4 ರಂದು ಹುಟ್ಟಿದ ಒಂಭತ್ತು ಮಕ್ಕಳು
ಹಲೀಮಾ ಸಿಸ್ಸೆ ಹಾಗೂ ಅಬ್ದೆಲ್ಕಾದರ್ ಅರ್ಬಿ ದಂಪತಿಗೆ ಜನಿಸಿದ ಮಕ್ಕಳು
ಆಫ್ರಿಕಾದ ಮಾಲಿಯಲ್ಲಿ ಒಂಭತ್ತು ಮಕ್ಕಳಿಗೆ ಜನ್ಮ ನೀಡಿದ ಹಲೀಮಾ ಸಿಸ್ಸೆ

Nonuplet Babies Celebrate Their First Birthday in Africas Mali akb
Author
Mali, First Published May 8, 2022, 10:22 AM IST | Last Updated May 8, 2022, 10:22 AM IST

ಆಫ್ರಿಕಾದ ಮಾಲಿ ದೇಶದಲ್ಲಿ ಒಂದೇ ದಂಪತಿಗೆ ಒಟ್ಟಿಗೆ ಹುಟ್ಟಿದ 9 ಮಕ್ಕಳು ಮೊದಲ ಹುಟ್ಟುಹಬ್ಬವನ್ನು ಆಚರಿಸಿದ್ದು, ಅವರ ಹುಟ್ಟುಹಬ್ಬದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 2021ರ ಮೇ.4 ರಂದು ಈ ಮಕ್ಕಳು ಅವಧಿಗೂ ಮುನ್ನವೇ ಜನಿಸಿದ್ದವು. ಏಳು ತಿಂಗಳು ತುಂಬುವುದಕ್ಕೂ ಮೊದಲೇ ಇವರ ತಾಯಿ ಈ 9 ಮಕ್ಕಳಿಗೆ ಜನ್ಮ ನೀಡಿದ್ದರು. ಈ ಒಂಭತ್ತು ಮಕ್ಕಳಲ್ಲಿ ಐವರು ಹೆಣ್ಣು ಮಕ್ಕಳು ಹಾಗೂ ನಾಲ್ವರು ಗಂಡು ಮಕ್ಕಳು. ಒಂಭತ್ತು ಮಕ್ಕಳು ಒಟ್ಟಿಗೆ ಜನಿಸುವ ಮೂಲಕ ಇವರು ವಿಶ್ವ ದಾಖಲೆಯ ಪುಟ ಸೇರಿದ್ದರು.

ಇತ್ತೀಚೆಗೆ ಈ ಮಕ್ಕಳು ತಮ್ಮ ಮೊದಲ ಹುಟ್ಟುಹಬ್ಬವನ್ನು ಆಚರಿಸಿವೆ. ಅವಧಿ ಪೂರ್ವ ಕೇವಲ 30 ವಾರಗಳ ಒಳಗೆ ಈ ಮಕ್ಕಳು ಜನಿಸಿದ್ದರಿಂದ ಅಲ್ಲದೇ ಆರೋಗ್ಯವೂ ಸರಿ ಇಲ್ಲದ ಕಾರಣ ಈ ಮಕ್ಕಳನ್ನು ಮೊರಾಕೋದ ಕ್ಲಿನಿಕ್‌ನಲ್ಲೇ ಹೆಚ್ಚಿನ ಆರೈಕೆಗೆ ಇರಿಸಲಾಗಿತ್ತು ಎಂದು ಈ ಮಕ್ಕಳ ತಂದೆ ಆಫ್ರಿಕಾ ಬಿಬಿಸಿಗೆ ಹೇಳಿಕೆ ನೀಡಿದ್ದರು. ಈ ಎಲ್ಲಾ ಮಕ್ಕಳು ಈಗ ತೆವಳಿಕೊಂಡು ಹೋಗುತ್ತಿವೆ. ಕೆಲವು ಕುಳಿತುಕೊಳ್ಳಲು ಪ್ರಯತ್ನಿಸುತ್ತಿವೆ. ಮತ್ತೆ ಕೆಲವು ಏನನ್ನಾದರು ಹಿಡಿದು ನಿಲ್ಲಲು ಪ್ರಯತ್ನಿಸುತ್ತಿವೆ ಎಂದು ಮಗುವಿನ ತಂದೆ ಹೇಳಿದ್ದಾರೆ.

ಬಂಡೀಪುರದಲ್ಲಿ ಅಪರೂಪದ ದೃಶ್ಯ ಸೆರೆ : ಅವಳಿ ಮರಿಗಳೊಂದಿಗೆ ಕಾಣಿಸಿಕೊಂಡ ಆನೆ

ಆದಾಗ್ಯೂ ಒಂಭತ್ತು ಮಕ್ಕಳನ್ನು ನೋಡಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ ಎಂದು ಮಕ್ಕಳ ತಂದೆ ಅಬ್ದೆಲ್ಕಾದರ್ ಅರ್ಬಿ ಒಪ್ಪಿಕೊಂಡರು. ಪೋಷಕರು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಯೋಚಿಸಿದಾಗ ಬೇರೆಲ್ಲಾ ವಿಚಾರಗಳು ಮರೆಯಾಗುತ್ತದೆ ಎಂದು ಹೇಳಿದರು. ಇಷ್ಟು ಮಕ್ಕಳನ್ನು ಒಟ್ಟಿಗೆ ಸಾಕುವುದು ಸುಲಭವಲ್ಲ ಆದರೆ ಇದು ಅದ್ಭುತವಾಗಿದೆ ಎಂದು ಅವರು ಹೇಳಿದರು. 27 ವರ್ಷದ ಹಲೀಮಾ ಸಿಸ್ಸೆ (Halima Cissé) ಮತ್ತು ಅವರ ಪತಿ ಅಬ್ದೆಲ್ಕಾದರ್ ಅರ್ಬಿ (Abdelkader Arby) ಅವರಿಗೆ ಈ ಒಂಭತ್ತು ಮಕ್ಕಳಲ್ಲದೇ  3 ವರ್ಷ ವಯಸ್ಸಿನ ಇನ್ನೊಬ್ಬ ಮಗಳಿದ್ದಾಳೆ.

ತಾಯ್ತನದ ಸಂಭ್ರಮಕ್ಕೆ 2 ತಿಂಗಳು; ಅವಳಿ ಮಕ್ಕಳೆಂದು ಗೊತ್ತಾದಾಗ ನಟಿ ಅಮೂಲ್ಯ ರಿಯಾಕ್ಷನ್ ಇದು!

ಸಾಮಾನ್ಯವಾಗಿ ಅವಳಿಗಳು ತ್ರಿವಳಿಗಳು ಜನಿಸುವುದು ಸಾಮಾನ್ಯ ಆದರೆ ಒಂಭತ್ತು ಮಕ್ಕಳು ಒಟ್ಟಿಗೆ ಜನಿಸಿದ್ದು ಇದೇ ಮೊದಲು ಎಂಬ ಕಾರಣಕ್ಕೆ ಈ ಮಕ್ಕಳ ಹೆಸರಿನಲ್ಲಿ ವಿಶ್ವ ದಾಖಲೆ ಇದೆ. ಅವಳಿ ಮಕ್ಕಳು ಹುಟ್ಟಿದ ಪೋಷಕರೇ ಈ ಮಕ್ಕಳನ್ನು ಸಾಕಲು ಸಾಕಷ್ಟು ಪರದಾಡುತ್ತಾರೆ. ಈ ಮಕ್ಕಳಿಗೆ ಅಳು ನಗು ಹಸಿವು ಎಲ್ಲವೂ ಒಂದೇ ಸಮಯದಲ್ಲಾಗುವುದರಿಂದ ಈ ಮಕ್ಕಳನ್ನು ನೋಡಿಕೊಳ್ಳಲು ಹಲವು ಜನರು ಬೇಕು ಹೀಗಿರುವಾಗ ಒಂಭತ್ತು ಮಕ್ಕಳನ್ನು ಒಟ್ಟಿಗೆ ಹೊಂದಿದ ಈ ದಂಪತಿ ಪಾಡೇನು ತಿಳಿಯದು.

ಹೆಣ್ಣಿಗೆ ತನ್ನ ಉದರದಲ್ಲಿ ಜೀವವೊಂದಿದೆ ಎಂದು ತಿಳಿಯುತ್ತಿದ್ದಂತೆ ತಾಯಿಯಾಗುತ್ತಿದ್ದೇನೆ ಎಂಬ ಸಂಭ್ರಮದಲ್ಲಿ ಪುಳುಕಗೊಳ್ಳುತ್ತಾಳೆ, ಇನ್ನು ಮನೆ ಮಂದಿ ನಮ್ಮ ಮನೆಗೆ ಮುದ್ದಾದ ಕೂಸು ಬರಲಿದೆ ಎಂದು ಖುಷಿ ಪಡುತ್ತಾರೆ. ಅದರಲ್ಲಿ ಹೊಟ್ಟೆಯಲ್ಲಿರುವುದು ಎಂದು ಒಂದಲ್ಲ, ಎರಡು ಎಂದು ತಿಳಿಯುತ್ತಿದ್ದಂತೆ ಆ ಖುಷಿ ಅಪಾರವಾಗುತ್ತದೆ. ಈಗೆಲ್ಲಾ ಸ್ಕ್ಯಾನಿಂಗ್‌ನಲ್ಲಿ ಅವಳಿ ಮಕ್ಕಳ ಹುಟ್ಟಲಿದ್ದಾರೆ ಎಂದು ತಿಳಿಯುವುದರಿಂದ ಅಪ್ಪ-ಅಮ್ಮ ಹುಟ್ಟುವ ಅವಳಿ ಮಕ್ಕಳು ಹೇಗಿರಬಹುದು? ನೋಡಲು ಒಂದೇ ರೀತಿ ಕಾಣಬಹುದಾ? ಹೆಣ್ಣು ಮಕ್ಕಳು ಹುಟ್ಟಬಹುದಾ, ಗಂಡು ಮಕ್ಕಳು ಹುಟ್ಟಬಹುದಾ ಅಥವಾ ಒಂದು ಹೆಣ್ಣು, ಒಂದು ಗಂಡು ಹುಟ್ಟುತ್ತಾರಾ? ಹೀಗೆ ಹುಟ್ಟುವ ಮಕ್ಕಳ ಬಗ್ಗೆ ಸಾಕಷ್ಟು ಕನಸುಗಳನ್ನು ಕಾಣುತ್ತಾರೆ.
 

Latest Videos
Follow Us:
Download App:
  • android
  • ios