Nobel Peace Prize 2024 controversy: ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರಿಗೆ 2024ರ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗಿದೆ. ಆದರೆ, ತಾವೇ ನಿಜವಾದ ಅರ್ಹರು ಎಂದು ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದು, ತಮ್ಮ ಶಾಂತಿ ಪ್ರಯತ್ನಗಳನ್ನು ಉಲ್ಲೇಖಿಸಿದ್ದಾರೆ.
ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ ಅವರಿಗೆ 2024ರ ನೊಬೆಲ್ ಶಾಂತಿ ಪ್ರಶಸ್ತಿ ಘೋಷಿಸಲಾಗಿದೆ. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಪ್ರಶಸ್ತಿಯ ರೇಸ್‌ನಲ್ಲಿ ತಮ್ಮ ಹೆಸರು ಜಾಗತಿಕವಾಗಿ ಚರ್ಚೆಯಾಗಿದ್ದರೂ, ಅದನ್ನು ಪಡೆಯದಿರುವ ನೋವನ್ನು ವ್ಯಕ್ತಪಡಿಸಿದ್ದಾರೆ. 'ನಾನೇ ನಿಜವಾದ ಪುರಸ್ಕೃತ' ಎಂದು ಮಾರಿಯಾ ಕೊರಿನಾ ಕೂಡ ಒಪ್ಪಿಕೊಂಡಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.
ಅಕ್ಟೋಬರ್ 10, 2025ರಂದು ಶ್ವೇತಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, ತಾವು ಎಂಟು ಶಾಂತಿ ಒಪ್ಪಂದಗಳಿಗೆ ಮಧ್ಯಸ್ಥಿಕೆ ವಹಿಸಿದ್ದೇನೆ. ಭಾರತ-ಪಾಕಿಸ್ತಾನ ಸಂಘರ್ಷದಂತಹ ಅಪಾಯಕಾರಿ ಯುದ್ಧವನ್ನು ತಡೆದು, ಲಕ್ಷಾಂತರ ಜೀವಗಳನ್ನು ಉಳಿಸಿದ್ದೇನೆ. ಆದರೂ ನಾನು ಪ್ರಶಸ್ತಿಯನ್ನು ಕೇಳಿಲ್ಲ, ಆದರೆ ಮಾರಿಯಾ ಅವರು ನನಗೆ ಕರೆ ಮಾಡಿ, 'ನೀವು ಇದಕ್ಕೆ ಅರ್ಹರು' ಎಂದು ಹೇಳಿದರು ಎಂದು ಟ್ರಂಪ್ ಭಾವುಕರಾದರು.
ನೊಬೆಲ್ ಸಮಿತಿ ನಿರ್ಧಾರದ ಬಗ್ಗೆ ಶ್ವೇತಭವನದ ಟೀಕೆ
ನೊಬೆಲ್ ಸಮಿತಿಯ ನಿರ್ಧಾರದ ಬಗ್ಗೆ ಶ್ವೇತಭವನ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ವಕ್ತಾರ ಸ್ಟೀವನ್ ಚೆಯುಂಗ್, ರಾಜಕೀಯವು ಅರ್ಹತೆಯನ್ನು ಮೀರಿಸಿದೆ ಎಂದು ಟೀಕಿಸಿದರು. ಅಧ್ಯಕ್ಷ ಟ್ರಂಪ್ ಶಾಂತಿಯನ್ನು ಸ್ಥಾಪಿಸಿ, ಯುದ್ಧಗಳನ್ನು ಕೊನೆಗೊಳಿಸಿ, ಜೀವಗಳನ್ನು ಉಳಿಸುತ್ತಾರೆ. ಅವರಂತಹ ಮಾನವೀಯ ವ್ಯಕ್ತಿ ಬೇರೊಬ್ಬರಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
2024ರ ನೊಬೆಲ್ ಶಾಂತಿ ಪ್ರಶಸ್ತಿಯು ಮಾರಿಯಾ ಕೊರಿನಾ ಮಚಾದೊ ಅವರಿಗೆ ದೊರೆತರೂ, ಟ್ರಂಪ್‌ರ ಶಾಂತಿ ಪ್ರಯತ್ನಗಳು ಚರ್ಚೆಯ ಕೇಂದ್ರವಾಗಿವೆ. ಆದರೆ, ಸಮಿತಿಯ ನಿರ್ಧಾರವು ರಾಜಕೀಯ ಪ್ರೇರಿತವಾಗಿದೆ ಎಂಬ ಟೀಕೆಯೂ ಜೋರಾಗಿದೆ.
