ಸ್ವೀಡನ್(ಅ.05): ವಿಶ್ವ ಎದುರಿಸುತ್ತಿದ್ದ ಗಂಭೀರ ಸಮಸ್ಯೆಯನ್ನು ಪತ್ತೆ ಹಚ್ಚಿದ ಸಾಧಕರಿಗೆ ಗೌರವ ಸಿಕ್ಕಿದೆ. ಲಿವರ್ ಸಮಸ್ಯೆ ಹಾಗೂ ಲಿವರ್ ಕ್ಯಾನ್ಸರ್‌ಗೆ ಕಾರಣವಾಗುತ್ತಿದ್ದ ಹೆಪಿಟೈಟಿಸ್‌ನಲ್ಲಿ ಸಿ ವೈರಸ್ ಪತ್ತೆ ಹೆಚ್ಚಿದ ಅಮೆರಿಕದ  ಹಾರ್ವೆ ಜೆ ಆಲ್ಟರ್, ಚಾರ್ಲ್ಸ್ ಎಂ ರೈಸ್ ಹಾಗೂ ಇಂಗ್ಲೆಂಡ್  ವಿಜ್ಞಾನಿ ಮೈಕಲ್ ಹೌಟನ್‌ಗೆ ನೊಬೆಲ್ ಪ್ರಶಸ್ತಿ ನೀಡಿ ಘೋಷಿಸಲಾಗಿದೆ.

ಟ್ರಂಪ್‌ಗೆ ಕೊರೋನಾ: ಅಮೆರಿಕ ಅಧ್ಯಕ್ಷರಿಗೆ ವಯಸ್ಸು, ಬೊಜ್ಜು ಮುಳುವು!

ಸ್ವೀಡನ್‌ನ ಸ್ಟಾಕ್‌ಹೊಮ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೊಬೆಲ್ ಸಮತಿ ಮುಖ್ಯಸ್ಥ ಥಾಮಸ್ ಪರ್ಲಮ್ಯಾನ್ ಮೂವರಿಗೆ ನೊಬೆಲ್ ಪ್ರಶಸ್ತಿ ಘೋಷಿಸಿದ್ದಾರೆ.  

ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ, ಪ್ರತಿ ವರ್ಷ ಬರೋಬ್ಬರಿ 70 ಲಕ್ಷ ಮಂದಿ ಹೆಪಟೈಟಿಸ್ ಸಮ್ಯೆಗೆ ತುತ್ತಾಗುತ್ತಿದ್ದಾರೆ. ಇದರಲ್ಲಿ 4 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ. ಪ್ರಮುವಾಗಿ ಈ ಸಮಸ್ಯೆ ಕಾಣಿಸಿಕೊಂಡವರಲ್ಲಿ ದೀರ್ಘಕಾಲದ ಮತ್ತು ಯಕೃತ್ತಿನ ಉರಿಯೂತ ಕಾಣಿಸಿಕೊಳ್ಳಲಿದೆ. ಬಳಿಕ ಇದು ಕ್ಯಾನ್ಸರ್‌ಗೆ ಕಾರಣವಾಗಲಿದೆ.