Asianet Suvarna News Asianet Suvarna News

ಟ್ರಂಪ್‌ಗೆ ಕೊರೋನಾ: ಅಮೆರಿಕ ಅಧ್ಯಕ್ಷರಿಗೆ ವಯಸ್ಸು, ಬೊಜ್ಜು ಮುಳುವು!

ಸೇನಾ ಆಸ್ಪ​ತ್ರೆಗೆ ಟ್ರಂಪ್‌ ಶಿಫ್ಟ್‌, ರೆಮ್‌ಡೆಸಿವಿರ್‌ನಿಂದ ಚಿಕಿತ್ಸೆ| ವಯಸ್ಸು, ಬೊಜ್ಜು ಮುಳುವು: ವೈದ್ಯರು

74 and overweight, Donald Trump faces extra risks from a very sneaky virus pod
Author
Bangalore, First Published Oct 4, 2020, 11:49 AM IST
  • Facebook
  • Twitter
  • Whatsapp

ವಾಷಿಂಗ್ಟ​ನ್(ಅ.04)‌: ಕೊರೋನಾ ಸೋಂಕಿಗೆ ಒಳ​ಗಾ​ದರೂ ತಮ್ಮ ಅಧಿ​ಕೃತ ನಿವಾ​ಸ​ವಾದ ಅಮೆ​ರಿ​ಕದ ಶ್ವೇತ​ಭ​ವ​ನ​ದಲ್ಲೇ ಚಿಕಿತ್ಸೆ ಪಡೆ​ಯು​ತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವ​ರನ್ನು ‘ವಾ​ಲ್ಟರ್‌ ರೀಡ್‌ ಸೇನಾ ಆಸ್ಪ​ತ್ರೆ​’ಗೆ ಸ್ಥಳಾಂತ​ರಿ​ಸ​ಲಾ​ಗಿ​ದೆ.

"

ಟ್ರಂಪ್‌ರನ್ನು ಮುಂಜಾ​ಗ್ರತಾ ಕ್ರಮ​ವಾಗಿ ಆಸ್ಪ​ತ್ರೆಗೆ ದಾಖ​ಲಿ​ಸ​ಲಾ​ಗಿದೆ ಎಂದು ಶ್ವೇತ​ಭ​ವನ ಹೇಳಿ​ದೆ​ಯಾ​ದರೂ, ‘ಟ್ರಂಪ್‌ ಅವ​ರಿಗೆ ಈಗ 74 ವರ್ಷ ವಯಸ್ಸು. 65 ದಾಟಿ​ದ​ವ​ರಿಗೆ ಅಪಾಯ ಹೆಚ್ಚು. ಅವ​ರಿಗೆ ಬೊಜ್ಜು ಇದೆ. ಬೊಜ್ಜು ಇದ್ದ​ವ​ರಿಗೆ ರೋಗ​ನಿ​ರೋ​ಧಕ ಶಕ್ತಿ ಕಡಿಮೆ ಇರು​ತ್ತದೆ. ವಯಸ್ಸು ಹಾಗೂ ಇತರ ಆರೋಗ್ಯ ಸಮ​ಸ್ಯೆ​ಯನ್ನು ಹೊಂದಿ​ದ​ವ​ರಿಗೆ ಕೊರೋ​ನಾ​ದಿಂದ ಅಪಾಯ ಹೆಚ್ಚು’ ಎಂದು ಅಮೆ​ರಿ​ಕದ ಹಿರಿಯ ವೈದ್ಯ​ಕೀಯ ತಜ್ಞರು ಎಚ್ಚ​ರಿ​ಸಿ​ದ್ದಾ​ರೆ.

ಆದರೆ, ಪ್ರಕ​ಟಣೆ ಹೊರ​ಡಿ​ಸಿರುವ ಶ್ವೇತ​ಭ​ವ​ನ, ‘ಮುಂಜಾ​ಗ್ರತಾ ಕ್ರಮ​ವಾಗಿ ಟ್ರಂಪ್‌ ಅವ​ರನ್ನು ಸೇನಾ ಆಸ್ಪ​ತ್ರೆಗೆ ಸ್ಥಳಾಂತ​ರಿ​ಸ​ಲಾ​ಗಿದೆ. ಟ್ರಂಪ್‌ ಕೆಲವು ದಿನ ಆಸ್ಪ​ತ್ರೆ​ಯಿಂದಲೇ ಕಾರ್ಯ​ನಿ​ರ್ವ​ಹಿ​ಸ​ಲಿ​ದ್ದಾ​ರೆ’ ಎಂದು ತಿಳಿ​ಸಿ​ದೆ.

‘ಟ್ರಂಪ್‌ ಅವರು ನಮ್ಮ ಶಿಫಾ​ರ​ಸಿನ ಮೇರೆಗೆ ರೆಮ್‌​ಡೆ​ಸಿ​ವಿರ್‌ ಚಿಕಿತ್ಸೆ ಪಡೆ​ಯು​ತ್ತಿ​ದ್ದು, ಆರೋ​ಗ್ಯ​ದಿಂದ ಇದ್ದಾರೆ. ಸೌಮ್ಯ ರೋಗ​ಲ​ಕ್ಷ​ಣ​ಗ​ಳಿ​ವೆ’ ಎಂದು ಶ್ವೇತ​ಭ​ವ​ನದ ವೈದ್ಯ​ರೊ​ಬ್ಬರು ಹೇಳಿ​ದ್ದಾ​ರೆ. ರೆಮ್‌​ಡೆ​ಸಿ​ವಿರ್‌ ಔಷ​ಧವು ಕೊರೋನಾ ಪೀಡಿ​ತ​ರಿಗೆ ಪರಿ​ಣಾ​ಮ​ಕಾ​ರಿ​ಯಾ​ಗಿ​ದ್ದು, ಕೊರೋನಾ ಚಿಕಿ​ತ್ಸೆ​ಯ​ಲ್ಲಿ ಇದರ ಬಳ​ಕೆಗೆ ಟ್ರಂಪ್‌ ಆಡ​ಳಿತ ಈ ಹಿಂದೆಯೇ ಒತ್ತು ನೀಡಿ​ತ್ತು.

ಇದೇ ವೇಳೆ ವಿಡಿಯೋ ಸಂದೇ​ಶ ಬಿಡು​ಗಡೆ ಮಾಡಿ​ರುವ ಟ್ರಂಪ್‌, ‘ನಾನು ಆಸ್ಪ​ತ್ರೆಗೆ ದಾಖ​ಲಾ​ಗು​ತ್ತಿ​ದ್ದೇನೆ. ನಾನು ಆರೋ​ಗ್ಯ​ದಿಂದ ಇದ್ದೇನೆ. ಕೊರೋನಾ ಸೋಂಕಿತ ಪತ್ನಿಯೂ ಆರೋ​ಗ್ಯ​ದಿಂದ ಇದ್ದಾ​ರೆ’ ಎಂದು ಸ್ಪಷ್ಟ​ಪ​ಡಿ​ಸಿ​ದ್ದಾ​ರೆ. ಮೆಲಾ​ನಿಯಾ ಅವರು ಶ್ವೇತ​ಭ​ವ​ನ​ದಲ್ಲೇ ಹೌಸ್‌ ಐಸೋ​ಲೇ​ಶ​ನ್‌​ನ​ಲ್ಲಿದ್ದು, ಚಿಕಿತ್ಸೆ ಪಡೆ​ಯು​ತ್ತಿ​ದ್ದಾ​ರೆ.

ಈ ನಡುವೆ, ಟ್ರಂಪ್‌ ಯಾರ ಸಹಾ​ಯ​ವಿ​ಲ್ಲದೇ ಓಡಾ​ಡು​ತ್ತಿ​ದ್ದು​ದನ್ನು ತಾವು ನೋಡಿ​ದ್ದೇವೆ ಎಂದು ಪ್ರತ್ಯ​ಕ್ಷ​ದ​ರ್ಶಿ​ಗಳು ಹೇಳಿ​ದ್ದಾ​ರೆ.

Follow Us:
Download App:
  • android
  • ios