Asianet Suvarna News Asianet Suvarna News

ಡಿಗ್ರಿ, ಪಿಎಚ್‌ಡಿಗೆ ಬೆಲೆ ಇಲ್ಲ: ತಾಲಿಬಾನ್‌ ಶಿಕ್ಷಣ ಸಚಿವ ಹೇಳಿಕೆ!

* ಡಿಗ್ರಿ, ಪಿಎಚ್‌ಡಿಗೆ ಬೆಲೆ ಇಲ್ಲ: ತಾಲಿಬಾನ್‌ ಶಿಕ್ಷಣ ಸಚಿವ ಹೇಳಿಕೆ!

* ಮೌಲ್ವಿ ನೂರುಲ್ಲಾ ಮುನೀರ್‌ ಅಸಂಬದ್ಧ ವಾದ

* ಮುಲ್ಲಾಗಳು, ನಾವ್ಯಾರೂ ಶಾಲೆಗೆ ಹೋಗಿಯೇ ಇಲ್ಲ

* ನಮಗೆ ಡಿಗ್ರಿ ಇಲ್ಲ. ಆದರೂ ಶ್ರೇಷ್ಠ ಹುದ್ದೆ ಸಿಕ್ಕಿಲ್ಲವೇ?

No PhD Master Degree Valuable Says Taliban New Education Minister pod
Author
Bangalore, First Published Sep 9, 2021, 7:47 AM IST
  • Facebook
  • Twitter
  • Whatsapp

ಕಾಬೂಲ್‌(ಸೆ.09): ಅಫ್ಘಾನಿನಿ​ಸ್ತಾ​ನ​ದಲ್ಲಿ ಮಹಿ​ಳೆ​ಯರ ಶಿಕ್ಷ​ಣಕ್ಕೆ ತಾಲಿ​ಬಾ​ನಿ​ಗಳು ಕತ್ತರಿ ಹಾಕಿ​ದ್ದಾಯ್ತು. ಇನ್ನು ಉನ್ನತ ಶಿಕ್ಷ​ಣಕ್ಕೂ ಕತ್ತರಿ ಹಾಕುವಂಥ ಹೇಳಿ​ಕೆ​ಯನ್ನು ದೇಶದ ಶಿಕ್ಷಣ ಸಚಿ​ವ​ನಾಗಿ ನೇಮ​ಕ​ವಾ​ಗಿ​ರುವ ತಾಲಿಬಾನ್‌ ನಾಯಕ ಶೇಖ್‌ ಮೌಲ್ವಿ ನೂರುಲ್ಲಾ ಮುನೀರ್‌ ನೀಡಿ​ದ್ದಾ​ನೆ.

‘ಪಿಎಚ್‌ಡಿ, ಸ್ನಾತಕೋತ್ತರ ಪದವಿ ಪಡೆದವರಿಗಿಂತ ಮುಲ್ಲಾಗಳು, ತಾಲಿಬಾನಿಗಳೇ ಶ್ರೇಷ್ಠ. ಅವರ ಮುಂದೆ ಯಾವ ಡಿಗ್ರಿಗೂ ಬೆಲೆ ಇಲ್ಲ’ ಎಂದು ನೂರುಲ್ಲಾ ಮುನೀರ್‌ ಹೇಳಿ​ರುವ ವಿಡಿಯೋ ಈಗ ಸಾಮಾ​ಜಿಕ ಮಾಧ್ಯ​ಮ​ಗ​ಳಲ್ಲಿ ವೈರಲ್‌ ಆಗಿ​ದೆ. ಈತನ ಅಸಂಬದ್ಧ ಹೇಳಿಕೆಯ ವಿಡಿಯೋಗ ಈಗ ನಗೆಪಾಟಲಿಗೆ ಈಡಾಗಿದೆ. ಹಾಗೆಯೇ ಆಕ್ರೋಶ ಕೂಡ ವ್ಯಕ್ತ​ವಾ​ಗಿ​ದೆ.

ಮಂಗಳವಾರವಷ್ಟೇ ರಚನೆಯಾದ ತಾಲಿಬಾನಿಗಳ ಸರ್ಕಾರದಲ್ಲಿ ನೂರುಲ್ಲಾ ಮುನೀರ್‌ಗೆ ಶಿಕ್ಷಣ ಸಚಿವ ಹುದ್ದೆಯನ್ನು ನೀಡಲಾಗಿತ್ತು. ಹುದ್ದೆಯನ್ನು ವಹಿಸಿಕೊಂಡ ಮಾರನೇ ದಿನವೇ ತನ್ನ ಪಾಂಡಿತ್ಯವನ್ನು ಪ್ರದರ್ಶಿಸುವ ಆತ, ‘ಇಂದು ಪಿಎಚ್‌ಡಿ ಡಿಗ್ರಿ, ಸ್ನಾತಕೋತ್ತರ ಪದವಿಗಳಿಗೆ ಯಾವುದೇ ಬೆಲೆ ಇಲ್ಲ. ಅಧಿಕಾರದಲ್ಲಿರುವ ಮುಲ್ಲಾಗಳು, ತಾಲಿಬಾನಿಗಳು ಇಂತಹ ಯಾವುದೇ ಡಿಗ್ರಿಯನ್ನು ಪಡೆದಿಲ್ಲ. ಪ್ರೌಢ​ಶಾಲಾ ಶಿಕ್ಷ​ಣ​ವನ್ನೂ ಪಡೆ​ದಿಲ್ಲ. ಶಾಲೆಗೆ ಕೂಡ ಹೋಗಿಲ್ಲ. ಆದರೂ ಅವರು ಡಿಗ್ರಿ, ಮಾಸ್ಟರ್‌ ಡಿಗ್ರಿ ಪಡೆದವರಿಗಿಂತ ಶ್ರೇಷ್ಠ. ಹೀಗಾಗಿ ಡಿಗ್ರಿಗ​ಳಿಗೆ ಬೆಲೆ ಇಲ್ಲ’ ಎಂದು ಹೇಳಿ​ದ್ದಾ​ನೆ.

Follow Us:
Download App:
  • android
  • ios