ಅಮೆರಿಕಾಗೆ ಯಾಮಾರಿಸಿದ ನಿತ್ಯಾನಂದ, ಕೈಲಾಸ ದೇಶವೇ ಇಲ್ಲ ದ್ವಿಪಕ್ಷೀಯ ಒಪ್ಪಂದಕ್ಕೆ ಮೇಯರ್ ವಿಷಾದ!
ಭಾರತದಿಂದ ಪರಾರಿಯಾಗಿರುವ ನಿತ್ಯಾನಂದ ಕೈಲಾಸ ದೇಶ ಸೃಷ್ಟಿಸಿ ವಿಶ್ವಸಂಸ್ಥೆಗೆ ಪ್ರತಿನಿಧಿ ಕಳುಹಿಸಿದ ಘಟನೆ ಭಾರಿ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಅಮೆರಿಕದ ನೆವಾರ್ಕ್ ಮೇಯರ್ ಕೈಲಾಸದ ಜೊತೆ ಕೆಲ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದೀಗ ನೆವಾರ್ಕ್ ಗರಂ ಆಗಿದೆ. ಇಷ್ಟೇ ಅಲ್ಲ ಕೈಲಾಸ ವಿರುದ್ಧ ಅಧಿಕೃತ ಪ್ರಕಟಣೆ ಹೊರಡಿಸಿದೆ.
ನೆವಾರ್ಕ್(ಮಾ.17): ಭಾರತದಿಂದ ಪರಾರಿಯಾಗಿ ಕೈಲಾಸ ದೇಶ ಸೃಷ್ಟಿಸಿ ಜಗತ್ತಿಗೆ ಅಚ್ಚರಿ ನೀಡಿದ ನಿತ್ಯಾನಂದ, ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ಕೈಲಾಸ ದೇಶದ ಪ್ರತಿನಿಧಿಗಳು ಭಾಷಣ ಮಾಡುವ ಮೂಲಕ ಮತ್ತೊಂದು ಸರ್ಪ್ರೈಸ್ ನೀಡಲಾಗಿತ್ತು. ವಿಶ್ವಸಂಸ್ಥೆಯಲ್ಲಿ ಕೈಲಾಸ ದೇಶದ ಪ್ರತಿನಿಧಿಗಳು ಪಾಲ್ಗೊಳ್ಳುವ ಮೂಲಕ ವಿಶ್ವಾದ್ಯಂತ ನಿತ್ಯಾನಂದ ಮತ್ತೆ ಸದ್ದು ಮಾಡಿದ್ದರು. ಇದೀಗ ಕೈಲಾಸದಲ್ಲಿ ಕುಳಿತ ನಿತ್ಯಾನಂದನಿಗೆ ತಲೆನೋವು ಶುರುವಾಗಿದೆ. ಇತ್ತೀಚೆಗೆ ಅಮೆರಿಕಾದ ನೆವಾರ್ಕ್ ಮೇಯರ್ ಹಿಂದೂ ದೇಶ ಕೈಲಾಸದ ಪ್ರತಿನಿಧಿಗಳ ಜೊತೆ ಮಹತ್ವದ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ನೆವಾರ್ಕ್ ಮೇಯರ್ ಇದೀಗ ಗರಂ ಆಗಿದ್ದಾರೆ. ಕಾರಣ ಕೈಲಾಸ ದೇಶ ಅನ್ನೋದೇ ಇಲ್ಲ. ನಕಲಿ ದೇಶ ಸೃಷ್ಟಿಸಿ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮೇಯರ್ ರಾಸ್ ಬರಾಕ ಹೇಳಿದ್ದಾರೆ.
2023ರ ಜನವರಿ ತಿಂಗಳಲ್ಲಿ ಕೈಲಾಸ ದೇಶದ ಪ್ರತಿನಿಧಿಗಳಿಗೆ ನವಾರ್ಕ್ ಸಿಟಿ ಮೇಯರ್ ಆಹ್ವಾನ ನೀಡಿದ್ದರು. ಇದರಂತೆ ನೆವಾರ್ಕ್ ಹಾಗೂ ಕೈಲಾಸ ದೇಶ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ವಿಡಿಯೋ ಹಾಗೂ ಫೋಟೋವನ್ನು ನಿತ್ಯಾನಂದನ ಕೈಲಾಸ ದೇಶದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇಷ್ಟೇ ಅಲ್ಲ ಅಮೆರಿಕದ ಜೊತೆ ಕೈಲಾಸ ದೇಶದ ದ್ವಿಪಕ್ಷೀಯ ಒಪ್ಪಂದ ಎಂದು ಹೇಳಲಾಗಿತ್ತು. ಇದೀಗ ನೆವಾರ್ಕ್ ಸಿಟಿ ಕೌನ್ಸಿಲ್, ಕೆಲಾಸ ದೇಶವೇ ಇಲ್ಲ ಎಂದಿದೆ. ಸಾಮಾಜಿಕ ಜಾಲತಾಣ, ವೆಬ್‌ಸೈಟ್ ಮೂಲಕ ಕೈಲಾಸ ದೇಶ ಸೃಷ್ಟಿಸಲಾಗಿದೆ. ಅಸಲಿಗೆ ದೇಶವೇ ಇಲ್ಲ ಎಂದು ಸಿಟಿ ಕೌನ್ಸಿಲಿ ಹೇಳಿದೆ.
ಸೀಲ್ಯಾಂಡ್, ಲೈಬರ್ ಲ್ಯಾಂಡ್..ನಿತ್ಯಾನಂದನ ಕೈಲಾಸದಂತೆ ಜಗತ್ತಿನಲ್ಲಿವೆ ಹಲವಾರು ಸ್ವಯಂಘೋಷಿತ ದೇಶಗಳು!
ಕೈಲಾಸ ದೇಶದ ಜೊತೆ ಒಪ್ಪಂದ ಮಾಡಿಕೊಂಡು ನೆವಾರ್ಕ್ ಸಿಟಿ ಕೌನ್ಸಿಲಿ ವಂಚನೆಗೆ ಒಳಗಾಗಿದೆ. ಗೂಗಲ್‌ಗೂ ಕೈಲಾಸ ದೇಶ ಹುಡುಕಲು ಸಾಧ್ಯವಾಗಿಲ್ಲ ಎಂದು ವಂಗ್ಯವಾಡಿದೆ. ಗೂಗಲ್‌ನಲ್ಲಿ ಕೈಲಾಸ ದೇಶ ಎಂದು ಹುಡುಕಿದರೆ ಭಾರತ ಹಾಗೂ ಟಿಬೆಟ್ ಗಡಿಯಲ್ಲಿರುವ ಪರ್ವತವನ್ನು ತೋರಿಸುತ್ತಿದೆ. ಇಷ್ಟೇ ಅಲ್ಲ ಕೈಲಾಸ ಹಿಂದೂಗಳ ಪವಿತ್ರ ಕ್ಷೇತ್ರ ಎನ್ನುತ್ತಿದೆ. ಆದರೆ ನಿತ್ಯಾನಂದನ ಕೈಲಾಸದ ಕುರಿತು ಯಾವುದೇ ಮಾಹಿತಿ ಗೂಗಲ್‌ನಲ್ಲೂ ಲಭ್ಯವಿಲ್ಲ ಎಂದು ಸಿಟಿ ಕೌನ್ಸಿಲ್ ಹೇಳಿದೆ.
ಕೈಲಾಸದಲ್ಲಿ ಕುಳಿತರೂ ನಿತ್ಯಾನಂದನಿಗೆ ಇದೀಗ ಸಂಕಷ್ಟ ತಪ್ಪುತ್ತಿಲ್ಲ. ಇತ್ತೀಚೆಗೆ ಜಿನೆವಾದಲ್ಲಿ ನಡೆದ ಸಭೆಯಲ್ಲಿ ಕೈಲಾಸ ದೇಶದ ಪ್ರತಿನಿಧಿಗಳು ಪಾಲ್ಗೊಂಡ ಫೋಟೋ ಹಾಗೂ ವಿಡಿಯೋ ಹಂಚಿಕೊಂಡ ನಿತ್ಯಾನಂದ, ಕೈಲಾಸಕ್ಕೆ ವಿಶ್ವಸಂಸ್ಥೆಯ ಮಾನ್ಯತೆ ಸಿಕ್ಕಿದೆ ಎಂದು ಹೇಳಲಾಗಿತ್ತು.
ನಿತ್ಯಾನಂದನ ಆಪ್ತರು ಒಂದು ಸ್ವಯಂಸೇವಾ ಸಂಸ್ಥೆಯಾಗಿ ಸಭೆಯಲ್ಲಿ ಪಾಲ್ಗೊಂಡಿದ್ದರು.‘ಅದು ಸಾರ್ವಜನಿಕ ಸಭೆ ಆಗಿತ್ತು. ಎಲ್ಲರೂ ಪಾಲ್ಗೊಳ್ಳಲು ಅವಕಾಶವಿತ್ತು. ಆ ಸಭೆಯಲ್ಲಿನ ಚರ್ಚಾ ವಿಷಯಗಳು ಕೇವಲ ಚರ್ಚೆಗೆ ಸೀಮಿತ. ಮೇಲಾಗಿ ನಿತ್ಯಾನಂದನ ಕಡೆಯವರು ಅಪ್ರಸ್ತುತ ವಿಷಯ ಮಂಡಿಸಿದ್ದರು.ಅವುಗಳನ್ನು ಪರಿಗಣಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದೆ.
ನಿತ್ಯಾನಂದನ ನಿಗೂಢ ಮಾಯಾಲೋಕ ಹೇಗಿದೆ..? ಕೈಲಾಸ ದೇಶಕ್ಕೆ ಮಾನ್ಯತೆ ಇದ್ಯಾ..? ಇಲ್ಲಿದೆ ಡೀಟೇಲ್ಸ್
ನಿತ್ಯಾನಂದ ಭಾರತದಲ್ಲಿ ಅತ್ಯಾಚಾರ ಪ್ರಕರಣ ಎದುರಿಸುತ್ತಿದ್ದು, ಈಗ ಅಜ್ಞಾತ ದ್ವೀಪವೊಂದರಲ್ಲಿ ನೆಲೆಸಿದ್ದಾನೆ. ಅದನ್ನೇ ಕೈಲಾಸ ದೇಶ ಎಂದು ಹೇಳಿಕೊಳ್ಳುತ್ತಾನೆ. ಇತ್ತೀಚೆಗೆ ಜಿನೇವಾದಲ್ಲಿನ ವಿಶ್ವಸಂಸ್ಥೆ ಸಭೆಯಲ್ಲಿ ಆತನ ಮಹಿಳಾ ಪ್ರತಿನಿಧಿಗಳು ಪಾಲ್ಗೊಂಡು, ‘ನಿತ್ಯಾನಂದನ ಮೇಲಿನ ಆರೋಪಗಳು ಸುಳ್ಳು’ ಎಂದಿದ್ದರು. ಇದನ್ನೇ ನೆಪ ಮಾಡಿಕೊಂಡಿದ್ದ ನಿತ್ಯಾನಂದ, ತನ್ನ ‘ದೇಶ’ಕ್ಕೆ ಮನ್ನಣೆ ಸಿಕ್ಕಿದೆ ಎಂಬರ್ಥದ ಟ್ವೀಟ್ ಮಾಡಲಾಗಿತ್ತು.