Asianet Suvarna News Asianet Suvarna News

ರಾತ್ರಿ ಕ್ಲಬ್‌ಲ್ಲಿ ಸಿಂಗರ್, ಬೆಳಗ್ಗೆ ಆಫೀಸ್‌ಗೆ ಚಕ್ಕರ್: ಆದರೂ 10 ವರ್ಷ ತಪ್ಪದೆ ಸ್ಯಾಲರಿ ಪಡೆದ ಸರ್ಕಾರಿ ನೌಕರ!

ಸರ್ಕಾರದ ವಿಪತ್ತು ತಡೆಗಟ್ಟುವಿಕೆ ಹಾಗೂ ನಿರ್ವಹಣಾ ಇಲಾಖೆಯಲ್ಲಿ ಈತ ಅಧಿಕಾರಿ. ಆದರೆ ರಾತ್ರಿ ವೇಳೆ ಈತ ನೈಟ್‌ಕ್ಲಬ್‌ನಲ್ಲಿ ಸಿಂಗರ್ ಆಗಿ ಕೆಲಸ ಮಾಡುತ್ತಾನೆ. ಕಳೆದ 10 ವರ್ಷದಿಂದ ಈತ ಕಚೇರಿಗೆ ತೆರಳಿಲ್ಲ, ಆದರೂ ಪ್ರತಿ ತಿಂಗಳು ವೇತನ ಪಡೆದಿದ್ದಾನೆ, ವರ್ಷದಿಂದ ವರ್ಷ ಸ್ಯಾಲರಿ ಹೈಕ್ ಕೂಡ ಗಿಟ್ಟಿಸಿಕೊಂಡಿದ್ದಾನೆ.
 

Nightclub singer who works as Govt employee receives salary from decade even rarely went office Thailand ckm
Author
First Published Sep 23, 2024, 10:23 PM IST | Last Updated Sep 23, 2024, 10:23 PM IST

ಬ್ಯಾಂಗ್‌ಕಾಕ್(ಸೆ.23) ಬೆಳಗ್ಗೆ ಈತ ಸರ್ಕಾರಿ ಅಧಿಕಾರಿ, ರಾತ್ರಿ ಈತ ನೈಟ್ ಕ್ಲಬ್‌ನಲ್ಲಿ ಸಿಂಗರ್. ನೈಟ್ ಕ್ಲಬ್ ಅಂದರೆ ಹೇಳಬೇಕೆ, ತಡರಾತ್ರಿ, ಪಾರ್ಟಿ, ಮಸ್ತಿಯಿಂದ ಮನೆಗೆ ಬಂದು ಮಲಗುವುದೇ ಬೆಳಗಿನ ಜಾವ. ಇನ್ನು ಬೆಳಗ್ಗೆ ಎದ್ದು 10 ಗಂಟೆಗೆ ತನ್ನ ವಿಪತ್ತು ತಡೆಗಟ್ಟುವಿಕೆ ಹಾಗೂ ನಿರ್ವಹಣಾ ಇಲಾಖೆ ಕಚೇರಿಯಲ್ಲಿ ಕೆಲಸಕ್ಕೆ ಹಾಜರಾಗಲು ಸಾಧ್ಯವೇ? ಖಂಡಿತ ಇಲ್ಲ, ಹೀಗಾಗಿ ಈತ ಕಚೇರಿಗೆ ಹಾಜರಾಗಿದ್ದೇ ವಿರಳ. 2 ತಿಂಗಳಿಗೊಮ್ಮೆ, ಮೂರು ತಿಂಗಳಿಗೊಮ್ಮೆ ಕಚೇರಿಗೆ ತೆರಳಿದ್ದಾನೆ. ಆದರೆ ಪ್ರತಿ ದಿನ ತಪ್ಪದೆ ನೈಟ್ ಕ್ಲಬ್‌ನಲ್ಲಿ ಹಾಡಿನ ಮೋಡಿ ಮಾಡುತ್ತಾನೆ. ಹೀಗಿದ್ದರೂ ಕಳೆದ ವರ್ಷದಿಂದ ಈ ಅಧಿಕಾರಿ ಪ್ರತಿ ತಿಂಗಳು ಸರ್ಕಾರದ ವೇತನ ಪಡೆದಿದ್ದಾನೆ. ವರ್ಷದಿಂದ ವರ್ಷ ಸ್ಯಾಲರಿ ಹೈಕ್ ಕೂಡ ಪಡೆದಿದ್ದಾನೆ. ಈತ ಕಚೇರಿಗೆ ಚಕ್ಕರ್ ಮಾಹಿತಿ ಹೊರಬಿದ್ದರೂ ಇನ್ನೂ ಈತನಿಗೆ ಯಾವುದೇ ಶಿಕ್ಷೆಯಾಗಿಲ್ಲ. ಈ ಘಟನೆ ನಡೆದಿರುವುದು ಥಾಯ್ಲೆಂಡ್‌ನಲ್ಲಿ.

ಈತ ಆ್ಯಂಗ್ ಥಾಂಗ್ ಪ್ರಾಂತ್ಯದಲ್ಲಿ ವಿಪತ್ತು ನಿರ್ವಹಣೆ, ತಡೆಗಟ್ಟುವಿಕೆ ಇಲಾಖೆಯಲ್ಲಿ ಅಧಿಕಾರಿಯಾಗಿ ನೇಮಕಗೊಂಡಿದ್ದಾನೆ. ಆದರೆ ಸಿಂಗಿಂಗ್ ಈತನ ಪ್ಯಾಶನ್. ಕಾಲೇಜು ದಿನಗಳಲ್ಲಿ ಗಾಯಕನಾಗಿ ಗುರುತಿಸಿಕೊಂಡಿದ್ದ. ಸರ್ಕಾರಿ ಕೆಲಸ ಗಿಟ್ಟಿಸುತ್ತಿದ್ದಂತೆ , ಇತ್ತ ನೈಟ್ ಕ್ಲಬ್‌ನಲ್ಲೂ  ಸಿಂಗರ್ ಆಗಿ ಕೆಲಸ ಆರಂಭಿಸಿದ್ದಾನೆ.  ಆರಂಭದಲ್ಲೇ ಒಂದಷ್ಟು ದಿನ ಕಚೇರಿಗೆ ಹಾಜರಾಗಿದ್ದಾನೆ. ಕಚೇರಿಯ ಕೆಲಸ, ನಿರ್ವಹಣೆ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿದ್ದಾನೆ. 

ಹಬ್ಬಕ್ಕೆ ಸಜ್ಜಾಗಿರುವ PF ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್, ಈ ದಿನ ನಿಮ್ಮ ಖಾತೆಗೆ ಬಡ್ಡಿ ಹಣ ಜಮೆ!

ಇದೇ ವೇಳೆ ನೈಟ್ ಕ್ಲಬ್‌ನಲ್ಲಿ ಈತ ಜನಪ್ರಿಯನಾದ. ಪ್ರತಿ ದಿನ ರಾತ್ರಿ ಈತನ ಹಾಡಿಗೆ ಭಾರಿ ಬೇಡಿಕೆ ವ್ಯಕ್ತವಾಗತೊಡಗಿತು. ಈತನ ಅಭಿಮಾನಿ ಬಳಗವೂ ಸೃಷ್ಟಿಯಾಯಿತು. ತಡ ರಾತ್ರಿ ವರೆಗೆ ಹಾಡು, ಪಾರ್ಟಿ ಕಾರಣ ಬೆಳಗ್ಗೆ ಎದ್ದು ಕಚೇರಿಗೆ ತೆರಳ ಸಾಧ್ಯವಾಗುತ್ತಿಲ್ಲ. ಯಾವಾಗಾದರೂ ಒಮ್ಮೆ ಆಫೀಸ್‌ಗೆ ತೆರಳಿ ಕಡತಗಳಿಗೆ ಸಹಿ ಹಾಕುತ್ತಿದ್ದ. 

ನೈಟ್‌ಕ್ಲಬ್‌ನಲ್ಲಿ ಜನಪ್ರಿಯವಾದ ಕಾರಣ ಸೋಶಿಯಲ್ ಮೀಡಿಯಾದಲ್ಲಿ ಈತನ ಫೋಟೋ, ವಿಡಿಯೋಗಳು ಬರಲು ಆರಂಭವಾಯಿತು. ಈ ವೇಳೆ ಕೆಲ ಸೋಶಿಯಲ್ ಮೀಡಿಯಾದಲ್ಲಿ ಈತ ಸರ್ಕಾರಿ ನೌಕರ, ಇದರ ಜೊತೆಗೆ ಗಾಯಕನಾಗಿ ಪ್ಯಾಶನ್ ಹೊಂದಿದ್ದಾನೆ ಅನ್ನೋ ಮಾಹಿತಿ ಬಹಿರಂಗವಾಗಿತ್ತು. ಹೀಗಾಗಿ ಈತ ಕಚೇರಿ, ಸಹದ್ಯೋಗಿಗಳ ಪ್ರತಿಕ್ರಿಯೆ ಪಡೆಯಲು ಕೆಲ ಯೂಟ್ಯೂಬ್ ಚಾನೆಲ್, ಪತ್ರಿಕೆಗಳು ತೆರಳಿದೆ. ಈ ವೇಳೆ ಈ ಆಸಾಮಿ ಕಚೇರಿಗೆ ಬರುತ್ತಿಲ್ಲ ಅನ್ನೋದು ಗೊತ್ತಾಗಿದೆ.

ಈತನ ಕುರಿತು ಸೋಶಿಯಲ್ ಮೀಡಿಯಾದಲ್ಲಿ, ಪತ್ರಿಕೆಗಳಲ್ಲಿ ಲೇಖನ ಪ್ರಕಟವಾಗಿದೆ. ಈ ವಿಷಯ ಮೇಯರ್ ಮಟ್ಟಕ್ಕೂ ತಲುಪಿದೆ. ಆದರೂ ಯಾವುದೇ ಕ್ರಮಕೈಗೊಂಡಿಲ್ಲ. ಇಷ್ಟೇ ಅಲ್ಲ ಇಲಾಖೆ ಕನಿಷ್ಠ ದಂಡವನ್ನೂ ವಿಧಿಸಿಲ್ಲ. ಈತನ ಅದೃಷ್ಠವೂ ಅಥವಾ ಆ ಸಂಬಳಕ್ಕೆ ಬೇರೆ ಯಾರು ಬರುವುದಿಲ್ಲವೋ ಗೊತ್ತಿಲ್ಲ. ಈಗಲೂ ಈತ ಸರ್ಕಾರಿ ಅಧಿಕಾರಿ, ಇತ್ತ ಸರ್ಕಾರ ಕೂಡ ಈ ವಿಚಾರ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ನಿಮ್ಮ ಮಕ್ಕಳು ನಮ್ಮ ಉದ್ಯೋಗಿಗಳಲ್ಲ ಅವರ ಆರೋಗ್ಯಕ್ಕಾಗಿ ಸಿಕ್ ಲೀವ್ ಸಾಧ್ಯವಿಲ್ಲ; ಕಂಪನಿ ವಿವಾದ!

Latest Videos
Follow Us:
Download App:
  • android
  • ios