ಹಬ್ಬಕ್ಕೆ ಸಜ್ಜಾಗಿರುವ PF ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್, ಈ ದಿನ ನಿಮ್ಮ ಖಾತೆಗೆ ಬಡ್ಡಿ ಹಣ ಜಮೆ!

ಪಿಎಫ್ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಬಂಪರ್ ಗಿಫ್ಟ್ ನೀಡಿದೆ. ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಖಾತೆಗೆ ಪಿಎಫ್ ಬಡ್ಡಿ ಹಣ ಜಮೆ ಆಗಲಿದೆ. ಎಷ್ಟು ಹಣ ನಿಮಗೆ ಬರಲಿದೆ? ಚೆಕ್ ಮಾಡುವುದು ಹೇಗೆ?

Big gift for PF employees amid festival season Government will soon transfer interest money ckm

ನವದೆಹಲಿ(ಸೆ.13) ಸಾಲು ಸಾಲು ಹಬ್ಬಗಳು ಆಗಮಿಸುತ್ತಿದೆ. ಹಬ್ಬಗಳ ಬೆನ್ನಲ್ಲೇ ಕೇಂದ್ರ ಸರ್ಕಾರಕ್ಕೆ ಪಿಎಫ್ ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್ ನೀಡಲು ಸಜ್ಜಾಗಿದೆ. ಉದ್ಯೋಗ ಭವಿಷ್ಯ ನಿಧಿ(ಪಿಎಫ್) ಉದ್ಯೋಗಿಗಳಿಗೆ ಬಡ್ಡಿ ಹಣ ಜಮೆ ಆಗಲಿದೆ. ಮೂಲಗಳ ಪ್ರಕಾರ ಸೆಪ್ಟೆಂಬರ್ 16ರ ಒಳಗೆ ಕೇಂದ್ರ ಸರ್ಕಾರ ಪಿಎಫ್ ಉದ್ಯೋಗಿಗಳ ಖಾತೆಗೆ ಬಡ್ಡಿ ಹಣ ಜಮೆ ಆಗಲಿದೆ. ಬರೋಬ್ಬರಿ ಶೇಕಡ 8.25ರ ಬಡ್ಡಿ ಪಿಎಫ್ ಇಲಾಖೆ ನೀಡಲಿದೆ. ಉದಾಹರಣೆಗೆ ನಿಮ್ಮ ಪಿಎಫ್ ಖಾತೆಯಲ್ಲಿ 4 ಲಕ್ಷ ರೂಪಾಯಿ ಹಣ ಇದ್ದರೆ, ನಿಮಗೆ ಈ ವರ್ಷ 33,000 ರೂಪಾಯಿ ಬಡ್ಡಿ ಹಣ ಜಮೆ ಆಗಲಿದೆ.

ಉದಾಹರಣೆಗೆ ಪಿಎಫ್ ಖಾತೆಯಲ್ಲಿ 2 ಲಕ್ಷ ರೂಪಾಯಿ ಹಣವಿದ್ದರೆ 16,500 ರೂಪಾಯಿ ಬಡ್ಡಿ ಹಣ ಖಾತೆಗೆ ಜಮೆ ಆಗಲಿದೆ. ಹಣದುಬ್ಬರ, ಬೆಲೆ ಏರಿಕೆಗಳಿಂದ ಹೈರಾಣಿಗಿರುವ ಉದ್ಯೋಗಿಗಳಿಗೆ ಇದೀಗ ಪಿಎಫ್ ಬಡ್ಡಿ ಹಣ ಬೂಸ್ಟರ್ ನೀಡಲಿದೆ. ನಿಮ್ಮ ಖಾತೆಗೆ ಎಷ್ಟು ಹಣ ಜಮೆ ಆಗಲಿದೆ ಅನ್ನೋದನ್ನು ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು.

ಉದ್ಯೋಗ ಭವಿಷ್ಯ ನಿಧಿ ಫಲಾನುಭವಿಗಳಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ!

ಬರೋಬ್ಬರಿ 7 ಕೋಟಿಗೂ ಅದಿಕ ಪಿಎಫ್ ಉದ್ಯೋಗಳಿಗೆ ಇದೀಗ ಪಿಎಫ್ ಬಡ್ಡಿ ಹಣ ಜಮೆ ಆಗಲಿದೆ. ಪಿಎಫ್ ಅಧಿಕೃತವಾಗಿ ಈ ಘೋಷಣೆ ಮಾಡಿಲ್ಲ. ಮೂಲಗಳ ಪ್ರಕಾರ ಸೆಪ್ಟಂಬರ್ 16ರೊಳಗೆ ಪಿಎಫ್ ಬಡ್ಡಿ ಹಣೆ ಜಮೆ ಆಗಲಿದೆ. 

ಉದ್ಯೋಗ ಭವಿಷ್ಯ ನಿಧಿ ವೇತನ ಪಡೆಯುತ್ತಿರುವ ಉದ್ಯೋಗಿಗಳಿಗೆ ಕಡ್ಡಾಯ. ಒಂದು ಕಂಪನಿಯಲ್ಲಿ ಕನಿಷ್ಠ 20 ಮಂದಿ ಉದ್ಯೋಗಿಳಿದ್ದರೆ ಕಂಪನಿ ಉದ್ಯೋಗಿಗಳ ಭವಿಷ್ಯ ನಿಧಿ ಖಾತೆ ತೆರೆಯುವುದು ಕಡ್ಡಾಯವಾಗಿದೆ. ಉದ್ಯೋಗಿಗಳು ತಿಂಗಳ ಆದಾಯದ ಶೇಕಡಾ 12ರಷ್ಟು ಪಿಎಫ್ ಖಾತೆಗೆ ಜಮೆ ಆಗಲಿದೆ. ಈ ಪೈಕಿ ಶೇಕಡಾ 3.67 ರಷ್ಟು ಮೊತ್ತ ಉದ್ಯೋಗ ನಿಧಿಗೆ ಜಮೆ ಆದರೆ, ಇನ್ನುಳಿದ ಶೇಕಡಾ 8.33 ಮೊತ್ತ ಉದ್ಯೋಗ ಪಿಂಚಣಿ ಯೋಜನೆಯಲ್ಲಿ ಜಮೆ ಆಗಲಿದೆ. ಹೊಸ ಯೋಜನೆಯಡಿ ಉದ್ಯೋಗ ಭವಿಷ್ಯ ನಿಧಿ ಬಡ್ಡಿ ದರ ಶೇಕಡಾ 8.25. ಆದರೆ ಈ ಹಿಂದೆ ಈ ಬಡ್ಡಿ ದರ ಶೇಕಡಾ 8.15ರಷ್ಟಿತ್ತು. 

ಪಿಎಫ್ ಖಾತೆ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
UMANG ಆ್ಯಪ್ ಮೂಲಕ
ಅಧಿಕೃತ ಪಿಎಫ್ ವೆಬ್‌ಸೈಟ್(ಇ ಸೇವಾ)
ಮಿಸ್ ಕಾಲ್ ಮೂಲಕ
ಎಸ್ಎಂಎಸ್ ಮೂಲಕ

UMANG ಆ್ಯಪ್ ಮೂಲಕ ಚೆಕ್ ಮಾಡುವುದು ಹೇಗೆ?
UMANG ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ
ಮೊಬೈಲ್ ನಂಬರ್ ಮೂಲಕ ರಿಜಿಸ್ಟ್ರೇಶನ್ ಮಾಡಿಕೊಳ್ಳಿ
EPFO ಆಯ್ಕೆ ಕ್ಲಿಕ್ ಮಾಡಿಕೊಳ್ಳಿ
ಇಲ್ಲಿ ವೀವ್ ಪಾಸ್‌ಬುಕ್ ಕ್ಲಿಕ್ ಮಾಡಿ
ನಿಮ್ಮ UAN ನಂಬರ್ ನಮೂದಿಸಿ ಒಟಿಪಿ ಆಯ್ಕೆ ಕ್ಲಿಕ್ ಮಾಡಿ
ಲಾಗಿನ್ ಆಯ್ಕೆ ಮಾಡಿ
ಪಿಎಫ್ ಪಾಸ್‌ಬುಕ್, ಬ್ಯಾಲೆನ್ಸ್ ತೋರಿಸುತ್ತದೆ

EPFO ಸದಸ್ಯರಿಗೆ ಒಂದು ರೂ ಪಾವತಿಸದೆ 7 ಲಕ್ಷ ರೂ ವರೆಗೆ ಇದೆ ವಿಮೆ ಸೌಲಭ್ಯ!

EPFO ಪೋರ್ಟಲ್‌ನಲ್ಲಿ ಪರಿಶೀಲನೆ ಮಾಡುವುದು ಹೇಗೆ?
EPFO ಪೋರ್ಟಲ್ ಅಧಿಕೃತ ತೆರಳಿ ಮೆಂಬರ್ ಪಾಸ್‌ಬುಕ್ ಆಯ್ಕೆ ಕ್ಲಿಕ್ ಮಾಡಿಕೊಳ್ಳಿ.  UAN ನಂಬರ್ ನಮೂದಿಸಿ ಪಾಸ್‌ವರ್ಡ್ ಹಾಕಿ ಖಾತೆ ತೆರೆಯಿರಿ. ಖಾತೆ ಒಪನ್ ಆದಂತೆ ಪಿಎಫ್ ಪಾಸ್‌ಬುಕ್ ತೋರಿಸಲಿದೆ. ಉದ್ಯೋಗಿ ಹಾಗೂ ಉದ್ಯೋಗದಾತನ ಕೊಡುಗೆ ಎಷ್ಟು ಅನ್ನೋದು ತೋರಿಸಲಿದೆ. ಪಿಎಪ್ ಖಾತೆ ಬ್ಯಾಲೆನ್ಸ್, ಖಾತೆಗೆ ಪ್ರತಿ ತಿಂಗಳು, ಜಮೆ ಆದ ಮೊತ್ತ, ಬಡ್ಡಿ ದರ ಜಮೆ ಸೇರಿದಂತೆ ಎಲ್ಲವನ್ನೂ ಖಾತೆ ತೋರಿಸಲಿದೆ.

ಎಸ್ಎಂಎಸ್ ಮೂಲಕ ಬ್ಯಾಲೆನ್ಸ್ ಪರಿಶೀಲನೆ
ಎಸ್ಎಂಎಸ್ ಮೂಲಕ ಮೆಸೇಜ್ ಕಳುಹಿಸಿದರೆ ನಿಮ್ಮ ಖಾತೆಯ ಬ್ಯಾಲೆನ್ಸ್ ಪರಿಶೀಲನೆ ಮಾಡಲು ಸಾಧ್ಯವಿದೆ. ಪಿಎಫ್ ಅಧಿಕೃತ ನಂಬರ್ 
7738299899 ಮೆಸೇಜ್ ಮಾಡಿ ಬ್ಯಾಲೆನ್ಸ್ ಪರಿಶೀಲನೆ ಮಾಡಲು ಸಾಧ್ಯವಿದೆ.
 

Latest Videos
Follow Us:
Download App:
  • android
  • ios