Nigerian Aircraft Crash: ಫ್ಲೈದುಬೈ ದಾಳಿ ಬೆನ್ನಲ್ಲೇ ನೈಜೀರಿಯಾದಲ್ಲಿ ವಿಮಾನ ದುರಂತ ಸಂಭವಿಸಿದ್ದು, ಏಳು ವಾಯುಪಡೆ ಸಿಬ್ಬಂದಿ ಸೇರಿ 32 ಪ್ರಯಾಣಿಕರು ದುರ್ಮರಣಕ್ಕೀಡಾಗಿದ್ದಾರೆ. ಹೇಗಾಯ್ತು? ವಿವರಗಳಿಗೆ ಮುಂದೆ ಓದಿ.
Nigerian Aircraft Crash: ಫ್ಲೈದುಬೈ ದಾಳಿ ಆಘಾತದ ಬೆನ್ನಲ್ಲೇ ನೈಜೀರಿಯಾದಲ್ಲಿ ಮತ್ತೊಂದು ವಿಮಾನವೊಂದು ನೆಲಕ್ಕಪ್ಪಳಿಸಿ 32 ಜನರು ದಾರುಣವಾಗಿ ಮೃತಪಟ್ಟ ಘಟನೆ ನಡೆದ ಬಗ್ಗೆ ನೈಜೀರಿಯಾದ ಅಧ್ಯಕ್ಷ ಬೋಲಾ ಟಿನುಬು ಹೇಳಿಕೆ ನೀಡಿದ್ದಾರೆಂದು ವರದಿಯಾಗಿದೆ.,
ಟಿನುಬು ಅವರ ಕಚೇರಿ, ನೈಜೀರಿಯಾದ ವಾಯುಪಡೆಯ ಹೇಳಿಕೆಯಂತೆ, 'ನೈಜೀರಿಯಾ ವಾಯುಪಡೆ ವಿಮಾನದಲ್ಲಿ 25 ಪ್ರಯಾಣಿಕರು ಮತ್ತು ಏಳು ಮಂದಿ ಸಿಬ್ಬಂದಿ ಹೊತ್ತೊಯ್ಯುತ್ತಿದ್ದ ವೇಳೆ ಇಗ್ಬೊಕೋಡಾದಲ್ಲಿ ದುರಂತ ಸಂಭವಿಸಿದೆ.
ಆಫ್ರಿಕಾದಲ್ಲಿ ಅತ್ಯಂತ ಭೀಕರ ವಾಯು ದುರಂತವಿದು!
ಆಫ್ರಿಕಾದ ಅತ್ಯಂತ ಜನನಿಬಿಡ ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಇದು ಅತ್ಯಂತ ಭೀಕರ ವಾಯು ದುರಂತಗಳಲ್ಲಿ ಒಂದಾಗಿದೆ. ದಕ್ಷಿಣ ನೈಜೀರಿಯಾದ ಬೆನಿನ್ ನಗರದಿಂದ ಎಕನಾಮಿಕ್ ಹಬ್ ಆಗಿರುವ ಲಾಗೋಸ್‌ಗೆ ಹೊರಟಿದ್ದ ಪ್ರಯಾಣಿಕ ವಿಮಾನವು ಬೆಳಿಗ್ಗೆ 9:00 ಗಂಟೆಗೆ (ಅಲ್ಲಿನ ಕಾಲಮಾನ) ನೈಋತ್ಯ ಒಂಡೋ ರಾಜ್ಯದ ಇಗ್ಬೊಕೊಡಾದಲ್ಲಿ ಪತನಗೊಂಡಿದೆ.
ಈ ದುರಂತದಲ್ಲಿ ಘಟನೆಯಲ್ಲಿ ಮೃತಪಟ್ಟ 25 ಪ್ರಯಾಣಿಕರು ಮತ್ತು ಏಳು ಸಿಬ್ಬಂದಿಗಳ ಕುಟುಂಬಕ್ಕೆ ಅಧ್ಯಕ್ಷರು ತೀವ್ರ ಸಂತಾಪ ಸೂಚಿಸಿದ್ದಲ್ಲದೆ, ಅಪಘಾತದಲ್ಲಿ ಮಡಿದ ವಾಯುಪಡೆಯ ಸಿಬ್ಬಂದಿಗೆ ಅಧ್ಯಕ್ಷರು ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದ್ದಾರೆ ಎಂದು ಟಿನುಬು ಅವರ ವಕ್ತಾರ ಬಯೋ ಒನನುಗಾ ತಿಳಿಸಿದ್ದಾರೆ.
ಅಧ್ಯಕ್ಷರು ಮತ್ತು ವಿಮಾನಯಾನ ಸಚಿವ ಫೆಸ್ಟಸ್ ಕೆಯಾಮೊ ಅವರ ಪ್ರಕಾರ ವಿಮಾನವು ನೌಕಾ ನೆಲೆಯ ಬಳಿಯೇ ಪತನಗೊಂಡಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೊವೊಂದರಲ್ಲಿ, ರಕ್ಷಣಾ ಕಾರ್ಯಕರ್ತರು ದೋಣಿಯ ಮೂಲಕ ಆ ಪ್ರದೇಶವನ್ನು ಹುಡುಕುತ್ತಿರುವಾಗ ನದಿಯ ಬಳಿ ಸಣ್ಣ ಜನಸಮೂಹ ಜಮಾಯಿಸಿರುವುದನ್ನು ತೋರಿಸಲಾಗಿದೆ.
ಗುಡುಗಿನಂತಹ ಶಬ್ದ..!
ಅಪಘಾತ ಸಂಭವಿಸಿದ ಸ್ಥಳದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ವಾಸಿಸುವ ಸೌದೆ ವ್ಯಾಪಾರಿ 39 ವರ್ಷದ ದಯೋ ಅಕಿಂಟೆ ಹೇಳುವಂತೆ, ವಿಮಾನ ಪತನಗೊಂಡ ಸ್ಥಳದಲ್ಲಿ ಗುಡುಗಿದ ಶಬ್ದ ಕೇಳಿಸಿತು ಎಂದು ಹೇಳಿದ್ದಾರೆ. ಅಪಘಾತದ ನಂತರ ಮೂರು ವಿಮಾನಗಳು ಸಹ ಘಟನಾ ಸ್ಥಳದ ಮೇಲೆ ಹಾರುತ್ತಿದ್ದವು ಎಂದು ಅವರು ಫೋನ್ ಮೂಲಕ ಮಾಹಿತಿ ನೀಡಿದ್ದಾರೆ.
ಹಿಂದಿನ ವಿಮಾನ ದುರಂತಗಳು
ಮೇ 2021 ರಲ್ಲಿ, ನೈಜೀರಿಯಾದ ಉನ್ನತ ಶ್ರೇಣಿಯ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಇಬ್ರಾಹಿಂ ಅಟ್ಟಹಿರು ಮತ್ತು ಇತರ 10 ಅಧಿಕಾರಿಗಳು ತಮ್ಮ ವಿಮಾನವು ಉತ್ತರ ಕಡುನಾ ರಾಜ್ಯ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಕೆಟ್ಟ ಹವಾಮಾನದಲ್ಲಿ ಪತನಗೊಂಡು ಸಾವನ್ನಪ್ಪಿದರು.
ಆಗಸ್ಟ್ 2015 ರಲ್ಲಿ ಉತ್ತರ ನೈಜೀರಿಯಾದಲ್ಲಿ ಮಿಲಿಟರಿ ವಿಮಾನವೊಂದು ಮನೆಯೊಂದಕ್ಕೆ ಅಪ್ಪಳಿಸಿ ಏಳು ಜನರು ಸಾವನ್ನಪ್ಪಿದರು, ಅದರಲ್ಲಿದ್ದ ಎಲ್ಲರೂ ಸಾವನ್ನಪ್ಪಿದರು.
ಅದೇ ತಿಂಗಳ ಆರಂಭದಲ್ಲಿ, ಲಾಗೋಸ್‌ನ ಲಗೂನ್‌ಗೆ ಹೆಲಿಕಾಪ್ಟರ್ ಪತನಗೊಂಡು ಅಮೆರಿಕದ ಪೈಲಟ್ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದರು.


