ಗೆಳತಿ ಏನಾಗಿದೆ ಅಂತ ಕೇಳಿದ್ರೂ ಯಾಕೆ ಉತ್ತರ ನೀಡಲ್ಲ. ಕೊನೆಗೆ ಬ್ಯಾಗ್ ತೆಗೆದುಕೋ ಇಲ್ಲಿಂದ ಹೊರಡೋಣ ಅಂತ ಹೇಳುತ್ತಾಳೆ. ಇಲ್ಲಿಗೆ ವಿಡಿಯೋ ಕಟ್ ಆಗುತ್ತದೆ.
ನ್ಯೂಯಾರ್ಕ್: ಯುವತಿಯೊಬ್ಬಳು ಊಬರ್ ಚಾಲಕನ ಕಣ್ಣಿಗೆ ಪೆಪ್ಪರ್ ಸ್ಪ್ರೇ (Pepper Spray) ಮಾಡಿದ್ದಾಳೆ. ಯುವತಿಯನ್ನು ನ್ಯೂಯಾರ್ಕ್ ಮೂಲದ ಜೆನ್ನಿಫರ್ ಗಿಲ್‌ಬೆಲ್ಟ್ ಎಂದು ಗುರುತಿಸಲಾಗಿದ್ದು, ಮ್ಯಾನ್‌ಹ್ಯಾಟನ್‌ನಲ್ಲಿ ಈ ಘಟನೆ ನಡೆದಿದೆ. ಈ ಎಲ್ಲಾ ದೃಶ್ಯಗಳು ಕಾರ್‌ನಲ್ಲಿರುವ ಕ್ಯಾಮೆರಾದಲ್ಲಿ (Car Camera) ಸೆರೆಯಾಗಿದ್ದು, ಯುವತಿ ಚಾಲಕನ ಜೊತೆ ಅಮಾನವೀಯವಾಗಿ ನಡೆದಿಕೊಂಡಿದ್ದಾಳೆ. 45 ವರ್ಷದ ಚಾಲಕನ (assaulting driver) ಮೇಲೆ ಹಠಾತ್ತನೇ ದಾಳಿ ನಡೆಸಿರುವ ಯುವತಿಯನ್ನು ಬಂಧಿಸಲಾಗಿದ್ದು, ಆಕೆಯ ಇನ್ಮುಂದೆ ಊಬರ್ ಪ್ರಯಾಣ (Uber Travel) ಮಾಡದಂತೆ ನಿಷೇಧ ವಿಧಿಸಲಾಗಿದೆ. ಮಂಗಳವಾರ ರಾತ್ರಿ 11:20 ರ ಸುಮಾರಿಗೆ ಲೆಕ್ಸಿಂಗ್ಟನ್ ಅವೆನ್ಯೂ ಮತ್ತು ಪೂರ್ವ 65 ನೇ ಬೀದಿಯ ಮೇಲಿನ ಪೂರ್ವ ಭಾಗದಲ್ಲಿ ಈ ಘಟನೆ ನಡೆದಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿದ್ದು, ಯುವತಿಯ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಕಾರ್ ಹಿಂಬದಿ ಆಸನದಲ್ಲಿ ಯುವತಿಯರಿಬ್ಬರು ಕುಳಿತಿರುತ್ತಾಳೆ. ಚಾಲಕ ಫೋನ್‌ನಲ್ಲಿ ಮಾತನಾಡುತ್ತಾ ಹೊರಗೆ ನೋಡುತ್ತಿರುತ್ತಾನೆ. ಹಿಂದೆ ಕುಳಿತಿದ್ದ ಯುವತಿ, ನಿಧಾನವಾಗಿ ಚಾಲಕನ ಬಳಿ ಬಂದು ಆತನ ಕಣ್ಣಿಗೆ ಪೆಪ್ಪರ್ ಸ್ಪ್ರೇ ಮಾಡ್ತಾಳೆ. ಯುವತಿ ಸ್ಪ್ರೇ ಮಾಡುತ್ತಿದ್ದಂತೆ ಗೊಂದಲಕ್ಕೊಳಗಾದ ಚಾಲಕ ಕಾರ್ ನಿಂದ ಹೊರ ಬರುತ್ತಾನೆ. ಸೀಟ್ ಬೆಲ್ಟ್ ಹಾಕಿದ್ದರಿಂದ ಚಾಲಕ ಕಷ್ಟಪಟ್ಟು ಕಾರ್‌ನಿಂದ ಹೊರಗೆ ಬರೋದನ್ನು ಗಮನಿಸಬಹುದು. ಇದೇ ಕಾರ್‌ನಲ್ಲಿದ್ದ ಮತ್ತೊಬ್ಬ ಯುವತಿ, ಜೆನ್ನಿ ಯಾಕೆ ಹೀಗೆ ಮಾಡಿದೆ? ಏನಾಯ್ತು? ಏನಾಗಿದೆ ಎಂದು ಪ್ರಶ್ನೆ ಮಾಡುತ್ತಾಳೆ. ಅಷ್ಟರಲ್ಲಿ ಆರೋಪಿ ಜೆನ್ನಿ ಸಹ ಕಾರ್ ಇಳಿದು ಹೊರಗೆ ಬರುತ್ತಾಳೆ. ಗೆಳತಿ ಏನಾಗಿದೆ ಅಂತ ಕೇಳಿದ್ರೂ ಯಾಕೆ ಉತ್ತರ ನೀಡಲ್ಲ. ಕೊನೆಗೆ ಬ್ಯಾಗ್ ತೆಗೆದುಕೋ ಇಲ್ಲಿಂದ ಹೊರಡೋಣ ಅಂತ ಹೇಳುತ್ತಾಳೆ. ಇಲ್ಲಿಗೆ ವಿಡಿಯೋ ಕಟ್ ಆಗುತ್ತದೆ.
ಬುಧವಾರ ರಾತ್ರಿ 12.45ಕ್ಕೆ ಯುವತಿ ಜೆನ್ನಿಫರ್ ಗಿಲ್‌ಬೆಲ್ಟ್ ಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಯುವತಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಯುವತಿ ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿರದ ಕಾರಣ ನ್ಯಾಯಾಲಯ ಜಾಮೀನು ನೀಡಿದೆ. ಆದ್ರೆ ಈ ಘಟನೆಯನ್ನು ಉಬರ್ ಮತ್ತು ನಗರದ ಟ್ಯಾಕ್ಸಿ ಮತ್ತು ಲಿಮೋಸಿನ್ ಕಮಿಷನ್ ಸಹ ತೀವ್ರವಾಗಿ ಖಂಡಿಸಿದೆ. ಯುವತಿ ಇನ್ಮುಂದೆ ಊಬರ್ ಸೇವೆ (Uber Service) ಬಳಸದಂತೆ ಆಕೆ ಮೇಲೆ ನಿಷೇಧ ಹೇರಲಾಗಿದೆ.
ತಾಜ್ ಮಹಲ್‌ನಲ್ಲಿರುವ ಗೋರಿಗಳ ಮೇಲೆ ಗಂಗಾಜಲ ಸಿಂಪಡಿಸಿದ ಹಿಂದೂ ಮಹಾಸಭಾ ಸದಸ್ಯರು
ನಮ್ಮ ಚಾಲಕರು ಪ್ರಾಮಾಣಿಕವಾಗಿ ಗ್ರಾಹಕರಿಗೆ ಉತ್ತಮವಾದ ಸೇವೆ ನೀಡಲು ಪ್ರಯತ್ನಿಸುತ್ತಿರುತ್ತಾರೆ. ಚಾಲಕರ ಮೇಲಿನ ದೌರ್ಜನ್ಯ ಮತ್ತು ಈ ರೀತಿ ಹಿಂಸೆ ನೀಡುವುದನ್ನು ನಾವು ಖಂಡಿಸುತ್ತೇವೆ. ಇದೊಂದು ಹೃದಯ ವಿದ್ರಾವಕ ಘಟನೆಯಾಗಿದ್ದು, ಚಾಲಕನ ಮೇಲಿನ ದಾಳಿ ತೀವ್ರ ನೋವನ್ನುಂಟು ಮಾಡಿದೆ. ಈ ರೀತಿ ಹಿಂಸೆ ನೀಡುವವರು ಮೊದಲು ಅದನ್ನು ಅನುಭವಿಸಬೇಕು. ನಾವೆಲ್ಲರೂ ಚಾಲಕನ ಪರವಾಗಿ ನಿಲ್ಲುತ್ತೇವೆ ಎಂದು ನ್ಯೂಯಾರ್ಕ್ ನಗರದ ಟ್ಯಾಕ್ಸಿ ಮತ್ತು ಲಿಮೋಸಿನ್ ಕಮಿಷನ್ ಹೇಳಿಕೆ ಬಿಡುಗಡೆ ಮಾಡಿದೆ.
ಯುವತಿಗೆ ಜಾಮೀನು ಸಿಕ್ಕಿದ್ದಕ್ಕೆ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರೋಪಿ ಜೆನ್ನಿ ಪೆಪ್ಪರ್ ಸ್ಪ್ರೇ ಮಾಡ್ತಿದ್ದರೆ ಆಕೆಯ ಗೆಳತಿಯ ಮುಖದಲ್ಲಿ ನಗುವಿದೆ. ಚಾಲಕ ಕಂದು ಬಣ್ಣವನೆಂದು ಈ ದಾಳಿ ನಡೆದಿದೆ ಎಂದು ಕೆಲ ನೆಟ್ಟಿಗರು ಆರೋಪಿಸಿದ್ದಾರೆ. ಆದ್ರೆ ದಾಳಿಯ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸದ್ಯ ವಿಡಿಯೋಗೆ ಬಗ್ಗ ಚರ್ಚೆಗಳು ಶುರುವಾಗಿವೆ.
Watch... ವಧು ಸಿಗರೇಟ್ ಸೇದುತ್ತಿರುವಾಗಲೇ ಬಂದ ಸಂಬಂಧಿಕರು! ನೀವು ನಮ್ಮಂತೇನಾ ಎಂದ ಪೋಲಿಗಳು!
