Asianet Suvarna News Asianet Suvarna News

Watch... ವಧು ಸಿಗರೇಟ್ ಸೇದುತ್ತಿರುವಾಗಲೇ ಬಂದ ಸಂಬಂಧಿಕರು! ನೀವು ನಮ್ಮಂತೇನಾ ಎಂದ ಪೋಲಿಗಳು!

ವಧು ಸಿಗರೇಟ್ ಸೇದುತ್ತಿರುವ ವಿಡಿಯೋ 1 ಲಕ್ಷ 48 ಸಾವಿರ ಜನರು ರಿಶೇರ್ ಮಾಡಿಕೊಂಡಿದ್ದು, 1 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ. ಇಷ್ಟು ಮಾತ್ರವಲ್ಲದೇ ವಿಡಿಯೋ ನೂರಾರು ಕಮೆಂಟ್‌ಗಳು ಬಂದಿವೆ.

bride smoking cigarette in laws home video gone viral in social media mrq
Author
First Published Aug 3, 2024, 4:31 PM IST | Last Updated Aug 3, 2024, 4:31 PM IST

ದುವೆ ದಿನ ವಧು ತುಂಬಾ ನಾಚಿಕೊಂಡು ವೇದಿಕೆ ಮೇಲೆ ನಿಂತಿರುತ್ತಾಳೆ. ಮದುವೆಗೆ ಸಂಬಂಧಿಸಿದ ಎಲ್ಲಾ ಶಾಸ್ತ್ರಗಳಲ್ಲಿಯೂ ವಧು ಬಹುತೇಕ ನಾಚಿಕೆಯಿಂದ ತಲೆ ತಗ್ಗಿಸಿರುತ್ತಾಳೆ. ಅಷ್ಟು ಮಾತ್ರವಲ್ಲದೇ ವಧುವನ್ನು ಆಕೆಯ ಸಂಬಂಧಿಕರು ನಗೆ ಚಟಾಕಿ ಮೂಲಕ ನಗಿಸುತ್ತಿರುತ್ತಾರೆ. ಆದ್ರೆ ಇಂದು ಕಾಲ ಬದಲಾಗಿದ್ದು, ಯುವತಿ ತಮ್ಮ ಮದುವೆಯ ಪ್ರತಿಯೊಂದು ಕ್ಷಣವನ್ನು ಎಂಜಾಯ್ ಮಾಡುತ್ತಿರುತ್ತಾರೆ. ಇದು ರೀಲ್ಸ್ ಜಮಾನಾ ಆಗಿರೋ ಕಾರಣ ಮೇಕಪ್‌ನಿಂದ ಹಿಡಿದು ತಾಳಿ ಕಟ್ಟಿಸಿಕೊಳ್ಳುವ ಪ್ರತಿಯೊಂದು ಕ್ಷಣಗಳನ್ನು ಸೆರೆ ಹಿಡಿದುಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. 

ಇದೀಗ ವಿಡಿಯೋ ವೈರಲ್ ಆಗುತ್ತಿದ್ದು, ಯುವತಿ ವಧುವಿನ ಲುಕ್‌ನಲ್ಲಿ ಫುಲ್ ರೆಡಿಯಾಗಿದ್ದಾಳೆ. ಕೊರಳಲ್ಲಿ ಮಾಂಗಲ್ಯಸರವೂ ಕಾಣಿಸುತ್ತಿದೆ. ಈ ನಡುವೆ ಸಿಗರೇಟ್ ಸೇದಿ ಎರಡು ಧಮ್ ಎಳೆದಿದ್ದಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದ್ರೆ ಸಿಗರೇಟ್ ಸೇದುತ್ತಿರುವ ಸಂದರ್ಭದಲ್ಲಿ ಜನರು ಬರುತ್ತಿದ್ದಂತೆ ಸಿಗರೇಟ್ ಆರಿಸಿ ಯುವತಿ ಅಲ್ಲಿಂದ ಓಡಿ ಹೋಗಿದ್ದಾಳೆ.

ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಯುವತಿ 'ನಾಗಿಣಿ'ಯಾಗಿ ಪತ್ತೆ; ವಿಡಿಯೋ ನೋಡಿ

ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸೀಮಾ ಮೀನಾ ಎಂಬವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ 3.9 ಮಿಲಿಯನ್ ವ್ಯೂವ್ ಬಂದಿದ್ದು, ನೆಟ್ಟಿಗರು ತರೇಹವಾರಿಯಾಗಿ ಕಮೆಂಟ್ ಮಾಡುತ್ತಿದ್ದಾರೆ. ಸೀಮಾ ಮೀನಾ ಇನ್‌ಸ್ಟಾಗ್ರಾಂನಲ್ಲಿ 59.8 ಸಾವಿರ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ವಧು ಸಿಗರೇಟ್ ಸೇದುತ್ತಿರುವ ವಿಡಿಯೋ 1 ಲಕ್ಷ 48 ಸಾವಿರ ಜನರು ರಿಶೇರ್ ಮಾಡಿಕೊಂಡಿದ್ದು, 1 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ. ಇಷ್ಟು ಮಾತ್ರವಲ್ಲದೇ ವಿಡಿಯೋ ನೂರಾರು ಕಮೆಂಟ್‌ಗಳು ಬಂದಿವೆ.

ಓರ್ವ ನೆಟ್ಟಿಗ ನೀವು ಸಹ ನಮ್ಮಂತೆ ಟಾಯ್ಲೆಟ್‌ನಲ್ಲಿ ಕದ್ದುಮುಚ್ಚಿ ಸಿಗರೇಟ್ ಸೇದ್ತಿರಾ ಅಂತ ಕೇಳಿದ್ದಾರೆ. ಮತ್ತೋರ್ವ ಇದು ಪಕ್ಕಾ 8 ರೂಪಾಯಿ ಸಿಗರೇಟ್ ಅಂತ ಹೇಳಿದ್ದಾನೆ. ವಾವ್.. ಭಾಬಿಜೀ, ನಮಗೊಂದು ಧಮ್ ಕೊಡಿ ಅಂತ ಕೆಲವರು ಕೇಳಿದ್ದಾರೆ. ಯಾರೇ ಆಗಲಿ ಸಿಗರೇಟ್ ಸೇದುವುದು ಆರೋಗ್ಯಕ್ಕೆ ಹಾನಿಕಾರಕ ಅಂತ ಕೆಲ ನೆಟ್ಟಿಗರು ಸಲಹೆ ನೀಡಿದ್ದಾರೆ. ಆದ್ರೆ ಈ ವಧು ಯಾರು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಮಗನೊಂದಿಗೆ ಇನ್‌ಫ್ಲುಯೆನ್ಸರ್ ವಿಡಿಯೋ ಶೂಟ್‌ಗೆ ಭಾರಿ ಟೀಕೆ ಬೆನ್ನಲ್ಲೇ ಕಮೆಂಟ್ಸ್ ಸೆಕ್ಷನ್ ಆಫ್!

Latest Videos
Follow Us:
Download App:
  • android
  • ios