ನ್ಯೂಸ್ ಓದೋವಾಗ ಹಲ್ಲು ಉದುರಿಬಿದ್ರೆ ಹೇಗಿರ್ಬೋದು..? ಅದೂ ಲೈವ್ ಸೆಷನ್‌ನಲ್ಲಿ..? ಆ್ಯಂಕರ್ ಏನ್ ಮಾಡಿದ್ರು..? ಇಲ್ಲಿ ಓದಿ.

ಉಕ್ರೈನ್(ಜು.18): ನ್ಯೂಸ್ ಓದೋವಾಗ ಹಲ್ಲು ಉದುರಿಬಿದ್ರೆ ಹೇಗಿರ್ಬೋದು..? ಅದೂ ಲೈವ್ ಸೆಷನ್‌ನಲ್ಲಿ..? ಟಿವಿಯ ಲೈವ್‌ ಸೆಷನ್‌ಗಳಲ್ಲಿ ಏನೇನೋ ಅವಾಂತರಗಳಾಗುತ್ತವೆ. ಉಕ್ರೈನ್‌ನ ನ್ಯೂಸ್‌ ಆ್ಯಂಕರ್ ಒಬ್ಬರು ನ್ಯೂಸ್ ಓಡುತ್ತಿದ್ದಾಗಲೇ ಲೈವ್‌ನಲ್ಲಿ ಹಲ್ಲು ಉದುರಿಬಿದ್ದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನ್ಯೂಸ್ ಓದುವಾಗಲೇ ಹಲ್ಲು ಉದುರಿಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಆದರೆ ಆ್ಯಂಕರ್ ಮಾತ್ರ ವಿಚಲಿತರಾಗದೆ ನ್ಯೂಸ್ ಓದುತ್ತಾ ಹೋಗಿದ್ದಾರೆ. ಪೇಚಿಗೆ ಬೀಳಲಿದ್ದ ಸಂದರ್ಭವನ್ನು ಸರಿಯಾಗಿ ನಿಭಾಯಿಸಿರುವ ಆ್ಯಂಕರ್ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಆ್ಯಂಕರ್ ಮರಿಚ್ಕಾ ಪಡಲ್ಕೊ ಸ್ವತಂ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಘಟನೆ ಬಗ್ಗೆ ತಮ್ಮ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ.

ಚೀನಾ ಕಂಪನಿಯಿಂದ 3ನೇ ಹಂತದ ಕೊರೋನಾ ಲಸಿಕೆ ಪ್ರಯೋಗ ಶುರು!

20 ವರ್ಷದ ಆ್ಯಂಕರ್ ವೃತ್ತಿ ಜೀವನದಲ್ಲಿ ಇದು ಅತ್ಯಂತ ಕುತೂಹಲಕಾರಿ ಘಟನೆಯಾಗಿತ್ತು. ನೀನಿ ದಿನಾ ಹಲ್ಲನ್ನು ಕಳೆದುಕೊಳ್ಳುತ್ತಿರುವಂತೆ ಪ್ರತಿಕ್ರಿಯಿಸಿದ್ದಿ ಎಂದು ಸಹುದ್ಯೋಗಿಗಳು ಹೇಳಿದರು ಎಂದು ಅವರು ಬರೆದಿದ್ದಾರೆ.

View post on Instagram

10 ವರ್ಷದ ಹಿಂದೆ ಮಗಳು ಮೆಟಲ್‌ ಅಲರಾಂ ಕ್ಲಾಕ್‌ನಲ್ಲಿ ಆಡುವಾಗ ಅದರಿಂದ ನನ್ನ ಹಲ್ಲಿಗೆ ಬಡಿದಿದ್ದಳು. ಅದರ ಪರಿಣಾಮ ಹಲ್ಲು ಲೂಸ್ ಆದಂತಹ ಸ್ಥಿತಿಯಲ್ಲಿತ್ತು ಎಂದಿದ್ದಾರೆ.

ದೇಶೀಯ ಕೊರೋನಾ ಲಸಿಕೆ ಕೊವ್ಯಾಕ್ಸಿನ್‌ ಮಾನವ ಪ್ರಯೋಗ ಶುರು!

ಈ ಘಟನೆಯನ್ನು ಜನ ಗಮನಿಸಲ್ಲ ಎಂದುಕೊಂಡಿದ್ದೆ. ಆದರೆ ನಮ್ಮ ವೀಕ್ಷಕರ ಏಕಾಗ್ರತೆ ಬಗ್ಗೆ ತಪ್ಪು ತಿಳಿದಿದ್ದೆ ಎಂದಿದ್ಧಾರೆ. ಊಪ್ಸ್.. ನಾನು ಇದನ್ನು ಗಮನಿಸಲೇ ಇಲ್ಲ. ನೀವು ಬಹಳ ಕೂಳ್ ಆಗಿ ಹ್ಯಾಂಡಲ್ ಮಾಡಿದ್ದೀರಿ, ಅದ್ಭುತ ಪ್ರತಿಕ್ರಿಯೆ ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.