ನ್ಯೂಜಿಲೆಂಡ್(ಅ.17): ಕೊರೋನಾ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿ ನ್ಯೂಜಿಲೆಂಡ್ ಕೊರೋನಾ ಮುಕ್ತವಾಗಿ ಮಾಡಿದ ಹೆಗ್ಗಳಿಕೆ ಪ್ರಧಾನಿ ಜಾಸಿಂಡ ಅರ್ಡೆರ್ನ್‌ಗಿದೆ.  ಕೊರೋನಾ ನಿರ್ವಹಣೆ ಬಳಿಕ ನಡೆದ ನ್ಯೂಜಿಲೆಂಡ್ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಜಾಸಿಂಡ ಅರ್ಡೆರ್ನ್ ಪಕ್ಷ ಭರ್ಜರಿ ಗೆಲುವು ದಾಖಲಿಸಿದೆ.

ಹಿಂದೂ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನ್ಯೂಜಿಲೆಂಡ್ ಪ್ರಧಾನಿ!.

ಕಳೆದೊಂದು ದಶಕದಿಂದ  40 ವರ್ಷದ ಜಾಸಿಂಡ ನೇತೃತ್ವದ ಸರ್ಕಾರ ಮೈತ್ರಿ ಇಲ್ಲದೆ ಆಡಳಿತ ನಡೆಸುತ್ತಿದೆ. ಅಧಿಕಾರಕ್ಕೇರುವಾಗ ಜಾಸಿಂಡ ನೀಡಿದ ಹಲವು ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದರು. ಆದರೆ ಕೊರೋನಾ ವೈರಸ್ ನಿರ್ವಹಣೆಯಲ್ಲಿ ಜಾಸಿಂಡ ಕಾರ್ಯವೈಖರಿಗೆ ವಿಶ್ವ ಆರೋಗ್ಯ ಸಂಸ್ಥೆ ಮಾತ್ರವಲ್ಲ, ಇಡೀ ವಿಶ್ವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಇದೀಗ ಈ ಚುನಾವಣೆ ಗೆಲುವು ಕೊರೋನಾ ನಿರ್ವಹಣೆಗೆ ಜನ ನೀಡಿದ ಮತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬುರ್ಜ್‌ ಖಲೀಫಾ ಮೇಲೆ ನ್ಯೂಜಿಲ್ಯಾಂಡ್ ಪ್ರಧಾನಿ ಫೋಟೋ!.

ಸುಮಾರು 50 ವರ್ಷಗಳಲ್ಲಿ ನ್ಯೂಜಿಲೆಂಡ್ ಲೇಬರ್ ಪಾರ್ಟಿಗೆ ಜನತೆ ದೊಡ್ಡ ಬೆಂಬಲ ನೀಡಿದ್ದಾರೆ ಎಂದು ಆರ್ಡರ್ನ್ ತನ್ನ ಭರ್ಜರಿ ವಿಜಯದ ನಂತರ ಬೆಂಬಲಿಗರನ್ನುದ್ದೇಶಿ ಮಾತನಾಡಿದ್ದಾರೆ. ಜನತೆ ತೋರಿದ ಪ್ರೀತಿ ಹಾಗೂ ಬೆಂಬಲವನ್ನು ಲಘುವಾಗಿ ಪರಿಗಣಿಸುವುದಿಲ್ಲ. ಜನರಿಗೆ ನೀಡಿದ ಎಲ್ಲಾ ಭರವಸೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಆರ್ಡೆರ್ನ್ ಹೇಳಿದ್ದಾರೆ.

ಸಾರ್ವತ್ರಿಕ ಚುನಾವಣ ಮತ ಎಣಿಕೆಯಲ್ಲಿ ಜಾಸಿಂಡ ಆರ್ಡೆರ್ನ್ ಅವರ ಲೇಬರ್ ಪಾರ್ಟಿ ಶೇಕಡಾ 49.0% ರಷ್ಟು ಮತಗಳನ್ನು ಪಡೆದಿದೆ. ಇದು ಪ್ರಬಲ ಎದುರಾಳಿ ಎದುರಾಳಿ  ನ್ಯಾಷನಲ್ ಪಾರ್ಟಿಗಿಂತ  ಶೇಕಡಾ 27%  ರಷ್ಟು ಮುಂದಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಚುನಾವಣೆಯ ಶೇಕಡಾ 77% ಮತಪತ್ರಗಳನ್ನು ಎಣಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.