Asianet Suvarna News Asianet Suvarna News

ಕೊರೋನಾಗೆ ಅಂತ್ಯ ಹಾಡಿದ ನ್ಯೂಜಿಲೆಂಡ್; ವೈರಸ್ ಮುಕ್ತ ಮೊದಲ ದೇಶ !

ಕೊರೋನಾ ವೈರಸ್ ನಿಯಂತ್ರಣಕ್ಕೆ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಹರಸಾಹಸ ಪಡುತ್ತಿದೆ. ಆದರೆ ನ್ಯೂಜಿಲೆಂಡ್ ಕೊರೋನಾ ವಿರುದ್ಧದ ಹೋರಾಟದಲ್ಲಿ ಗೆದ್ದಿದೆ. ಇದೀಗ ನ್ಯೂಜಿಲೆಂಡ್ ಕೊರೋನಾ ಮುಕ್ತ ಮೊದಲ ದೇಶ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ತ್ವರಿತಗತಿಯಲ್ಲಿ ನ್ಯೂಜಿಲೆಂಡ್ ಕೊರೋನಾ ವೈರಸ್ ಹೊಡೆದೋಡಿಸಿದ್ದು ಹೇಗೆ? ಇಲ್ಲಿದೆ ವಿವರ.

New Zealand become first country in the world eliminate all active coronavirus cases
Author
Bengaluru, First Published May 29, 2020, 7:32 PM IST

ವೆಲ್ಲಿಂಗ್ಟನ್(ಮೇ.29): ಕೊರೋನಾ ವೈರಸ್ ನಿಯಂತ್ರಿಸಲು ಲಾಕ್‌ಡೌನ್, ಸಾಮಾಜಿಕ ಅಂತರ ಸೇರಿದಂತೆ ಹಲವು ನಿಯಮಗಳು, ಕಟ್ಟು ನಿಟ್ಟಿನ ಆದೇಶಗಳು ಹಲವು ದೇಶದಲ್ಲಿ ಜಾರಿಯಲ್ಲಿದೆ. ಆದರೆ ಕೊರೋನಾ ಮಾತ್ರ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಆದರೆ ನ್ಯೂಜಿಲೆಂಡ್ ಸಂಪೂರ್ಣವಾಗಿ ಕೊರೋನಾ ವೈರಸ್‌ನಿಂದ ಮುಕ್ತವಾಗಿದೆ. ಈ ಮೂಲಕ ಕೊರೋನಾ ಗೆದ್ದ ಮೊದಲ ದೇಶ ಅನ್ನೋ ಹೆಗ್ಗಳಿಕೆಗೆ ನ್ಯೂಜಿಲೆಂಡ್ ಪಾತ್ರವಾಗಿದೆ.

ಕೊರೋನಾ ವಿರುದ್ಧ ಹೋರಾಡಿ ಗೆದ್ದ 36 ದಿನದ ಪುಟ್ಟ ಕಂದಮ್ಮ!.

ಕಳೆದೊಂದು ವಾರದಲ್ಲಿ ಕೇವಲ 1 ಕೇಸ್ ಮಾತ್ರ ನ್ಯೂಜಿಲೆಂಡ್ ದೇಶದಲ್ಲಿದೆ . ಇಷ್ಟೇ ಅಲ್ಲ ಯಾವುದೇ ಹೊಸ ಕೊರೋನಾ ವೈರಸ್ ಕೇಸ್ ಪತ್ತೆಯಾಗಿಲ್ಲ. ಮೇ.27 ರಿಂದ 21 ಕೊರೋನಾ ವೈರಸ್ ಪ್ರಕರಣವಿದ್ದ ನ್ಯೂಜಿಲೆಂಡ್‌ನಲ್ಲಿ ಇದೀಗ 1ಕ್ಕೆ ಇಳಿದೆ. 19 ಮಂದಿ ಸಂಪೂರ್ಣ ಗುಣಮುಖರಾಗಿ ಹೊರಬಂದಿದ್ದಾರ. ಇನ್ನು 96  ವರ್ಷದ ವೃದ್ದೆ ಮೃತಪಟ್ಟಿದ್ದಾರೆ.

ಮೋದಿ ಕಳುಹಿಸಿದ ಮಾತ್ರೆ ಸೇವಿಸಿ ಹುಷಾರಾಗಿದ್ದಾರೆ ಟ್ರಂಪ್: ಶ್ವೇತ ಭವನ

ಐಸ್‌ಲೆಂಡ್ ಕೂಡ ಕೊರೋನಾ ವೈರಸ್ ಶೂನ್ಯವಾಗಿತ್ತು. ಆದರೆ ಮೇ.28 ರಂದು 1 ಕೇಸ್ ಪತ್ತೆಯಾಗಿದೆ. ಇದೀಗ ಮೇ.29ರ ವೇಳೆಗೆ ಐಸ್‌ಲೆಂಡ್‌ನಲ್ಲಿ ಒಟ್ಟು 3 ಕೊರೋನಾ ವೈರಸ್ ಪ್ರಕರಣಗಳು ಇವೆ. ನ್ಯೂಜಿಲೆಂಡ್ ಹಾಗೂ ಐಸ್‌ಲೆಂಡ್ ಎರಡೂ ದೇಶಗಳು  ಪ್ರತಿ ಕೇಂದ್ರಗಳಲ್ಲಿ ತಪಾಸಣೆ ನಡೆಸಿದೆ. ಗರಿಷ್ಠ ಜನರನ್ನು ತಪಾಸಣೆಗೆ ಒಳಪಡಿಸಿತು. ಬಳಿಕ ಪಾಸಿಟೀವ್ ವರದಿ ಬಂದವರನ್ನು ಐಸೋಲೇಶನ್ ಹಾಗೂ ಕ್ವಾರಂಟೈನ್ ಮಾಡಿ, ಚಿಕಿತ್ಸೆ ನೀಡಲಾಯಿತು.

ಪ್ರತಿಯೊಬ್ಬರೂ ಕೊರೋನಾ ವೈರಸ್ ಪರೀಕ್ಷೆ ನಡೆಸುವುದು ಕಡ್ಡಾಯವಾಗಿತ್ತು. ಇದಕ್ಕಾಗಿ ನ್ಯೂಜಿಲೆಂಡ್ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಂಡಿತ್ತು. ಈ ಮೂಲಕ ಕೊರೋನಾ ವೈರಸ್ ಸಂಪೂರ್ಣ ನಿಯಂತ್ರಿಸುವಲ್ಲಿ ನ್ಯೂಜಿಲೆಂಡ್ ಯಶಸ್ವಿಯಾಗಿದೆ. ಆದರೆ ಇದೇ ವಿಧಾನ ಗರಿಷ್ಠ ಜನಸಂಖ್ಯೆ ಇರುವ ಭಾರತದಲ್ಲಿ ಕಷ್ಟ. ಸರ್ಕಾರದ ಜೊತೆಗೆ ಜನರೂ ಕೈಜೋಡಿಸಿದರೆ ಯಾವುದೂ ಅಸಾಧ್ಯವಲ್ಲ. 

Follow Us:
Download App:
  • android
  • ios