ಕೊರೋನಾ ವಿರುದ್ಧ ಹೋರಾಡಿ ಗೆದ್ದ 36 ದಿನದ ಪುಟ್ಟ ಕಂದಮ್ಮ!
ಚಿಕ್ಕ ಮಕ್ಕಳು, ಹಿರಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ. ಹೀಗಾಗಿ ಮನೆಯಿಂದ ಹೊರಗೆ ಬರಬೇಡಿ, ಪ್ರಯಾಣ ಮಾಡಬೇಡಿ ಎಂದು ಕಟ್ಟು ನಿಟ್ಟಾಗಿ ಹೇಳಲಾಗಿದೆ. ಕಾರಣ ರೋಗನಿರೋಧಕ ಶಕ್ತಿ ಕಡಿಮೆ ಇದ್ದಲ್ಲಿ ಕೊರೋನಾ ಸೋಂಕು ಗುಣಪಡಿಸುವುದು ಕಷ್ಟ. ಆದರೆ 36 ದಿನದ ಪುಟ್ಟ ಕಂದಮ್ಮ ಕೊರೋನಾ ವಿರುದ್ಧ ಹೋರಾಡಿ ಗೆದ್ದಿದೆ.
ಮುಂಬೈ(ಮೇ.29): ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1.65 ಲಕ್ಷ ದಾಟಿದೆ. ಇದರಲ್ಲಿ ಮಹಾರಾಷ್ಟ್ರದ ಕೊಡುಗೆ ಅತೀ ಹೆಚ್ಚು. ಅದರಲ್ಲೂ ಮುಂಬೈ ಮಹಾನಗರಿಯಲ್ಲಿ ಕೊರೋನಾ ಆರ್ಭಟ ಹೆಚ್ಚಾಗಿದೆ. ಮುಂಬೈನ ಗಲ್ಲಿ ಗಲ್ಲಿಯಲ್ಲಿ ಕೊರೋನಾ ವಕ್ಕರಿಸಿದೆ. ಹಲವರು ಕೊರೋನಾ ವಿರುದ್ಧದ ಹೋರಾಟದಲ್ಲಿ ಗೆದ್ದಿದ್ದಾರೆ. ಆದರೆ ಹಿರಿಯರು ಮಕ್ಕಳ ಚೇತರಿಕೆ ಕೊಂಚ ನಿಧಾನವಾಗುತ್ತಿದೆ. ಆದರೆ ಮುಂಬೈ ಸಿಯೋನ್ ಆಸ್ಪತ್ರೆಯಲ್ಲಿ 36 ದಿನದ ಮಗು ಕೊರೋನಾ ವಿರುದ್ಧದ ಹೋರಾಟದಲ್ಲಿ ಗೆದ್ದು ಡಿಸ್ಚಾರ್ಜ್ ಆಗಿದೆ.
ಕರ್ನಾಟಕಕ್ಕೆ ಕೊರೋನಾಘಾತ: ಶುಕ್ರವಾರ ಒಂದೇ ದಿನ ದಾಖಲೆಯ 248 ಕೇಸ್..!.
ಕರೋನಾ ವೈರಸ್ ಕಾರಣ ಸಿಯೋನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುಟ್ಟ ಕಂದಮ್ಮ ಅಚ್ಚರಿಯ ರೀತಿಯಲ್ಲಿ ಗುಣಮುಖವಾಗಿದೆ. 36 ದಿನದ ಮಗು ಇದೀಗ ಕೊರೋನಾದಿಂದ ಸಂಪೂರ್ಣ ಮುಕ್ತವಾಗಿದೆ. ಈ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಟ್ವಿಟರ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.
ಮೋದಿ ಕಳುಹಿಸಿದ ಮಾತ್ರೆ ಸೇವಿಸಿ ಹುಷಾರಾಗಿದ್ದಾರೆ ಟ್ರಂಪ್: ಶ್ವೇತ ಭವನ.
ಮಹಾರಾಷ್ಟ್ರದ ಜನತೆಗೆ ಹೋರಾಟದಲ್ಲಿ ವಯಸ್ಸಿನ ಅಂತರವಿಲ್ಲ. ಇದಕ್ಕೆ 35 ದಿನದ ಮಗು ಕೊರೋನಾ ವೈರಸ್ ವಿರುದ್ಧ ಹೋರಾಡಿ ಗೆದ್ದ ಘಟನೆಯೇ ಸಾಕ್ಷಿ. ಪುಟ್ಟ ಕಂದಮ್ಮ ಸಿಯೋನ್ ಆಸ್ಪತ್ರೆಯಿಂದ ಗುಣಮುಖರಾಗಿ ಹೊರಬಂದಿದೆ. ಪುಟ್ಟ ಮಗು, ವೈದ್ಯರು, ನರ್ಸ್, ವಾರ್ಡ್ ಬಾಯ್ ಸೇರಿದಂತೆ ಎಲ್ಲಾ ಅಸ್ಪತ್ರೆ ಸಿಬ್ಬಂದಿಗೆ ಧನ್ಯವಾದ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ 59,546 ಕೊರೋನಾ ವೈರಸ್ ಪ್ರಕರಣ ವರದಿಯಾಗಿದೆ. 1,982 ಮಂದಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇನ್ನು 18,616 ಮಂದಿ ಕೊರೋನಾ ವೈರಸ್‌ನಿಂದ ಗುಣಮುಖರಾಗಿದ್ದಾರೆ. ಭಾರತದಲ್ಲಿ ಗರಿಷ್ಠ ಕೊರೋನಾ ವೈರಸ್ ಪ್ರಕರಣವಿರುವ ರಾಜ್ಯ ಅನ್ನೋ ಕುಖ್ಯಾತಿಗೆ ಮಹಾರಾಷ್ಟ್ರ ಗುರಿಯಾಗಿದೆ.