ಭಾರತದ ಹಬ್ಬದ ವಿಶೇಷತೆ, ಮಹತ್ವ, ಪ್ರಾಧಾನ್ಯತೆಗೆ ವಿಶ್ವವೇ ಮನ್ನಣೆ ನೀಡಿದೆ. ಇದೀಗ ನ್ಯೂಯಾರ್ಕ್ ಸಿಟಿ ಮೇಯರ್ ಘೋಷಣೆಯಿಂದ ಭಾರತ ಹಿರಿ ಹಿರಿ ಹಿಗ್ಗಿದೆ. ಹೌದು, ನ್ಯೂಯಾರ್ಕ್ ಸಿಟಿ ಮೇಯರ್ ಇದೀಗ ದೀಪಾವಳಿ ಹಬ್ಬಕ್ಕೆ ಸಾರ್ವತ್ರಿಕ ಶಾಲಾ ರಜೆ ಘೋಷಿಸಿದ್ದಾರೆ.
ನ್ಯೂಯಾರ್ಕ್(ನ.11) ದೇಶಾದ್ಯಂತ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆಯೋಧ್ಯೆಯಲ್ಲಿ 24 ಲಕ್ಷ ದೀಪ ಬೆಳಗಿಸಿ ದೀಪೋತ್ಸವ ಆಚರಿಸಲಾಗಿದೆ. ದೇಶದ ಮೂಲೆ ಮೂಲೆಯಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿದೆ. ದೀಪಾವಳಿ ಹಬ್ಬದ ಸಂಭ್ರಮ ಕೇವಲ ಭಾರತದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಗರಿಗೆದರಿದೆ. ಇದರ ನಡುವೆ ಅಮೆರಿಕದ ನ್ಯೂಯಾರ್ಕ್ ಸಿಟಿ ಮೇಯರ್ ಮಹತ್ವದ ಘೋಷಣೆ ಮಾಡಿದ್ದಾರೆ. ದೀಪಾವಳಿ ಹಬ್ಬಕ್ಕೆ ನ್ಯೂಯಾರ್ಕ್ ಸಿಟಿಯಲ್ಲಿ ಸಾರ್ವತ್ರಿಕ ಶಾಲಾ ರಜೆ ಘೋಷಿಸಲಾಗಿದೆ.
ಮೇಯರ್ ಎರಿಡ್ ಆ್ಯಡಮ್ ಅಧಿಕೃತವಾಗಿ ದೀಪಾವಳಿ ಹಬ್ಬದ ಸಾರ್ವತ್ರಿಕ ರಜೆ ಘೋಷಣೆ ಮಾಡಿದ್ದಾರೆ. ನ್ಯೂಯಾರ್ಕ್ ಸಿಟಿ ಸಾಂಸ್ಕತಿಕ ವೈವಿದ್ಯತೆಯಿಂದ ಕೂಡಿದೆ. ಇಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ವಿಶೇಷ ಹಾಗೂ ಐತಿಹಾಸಿಕ ಮಹತ್ವದ ದೀಪಾವಳಿ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿದೆ ಎಂದು ಎರಿಕ್ ಆ್ಯಡಮ್ ಹೇಳಿದ್ದಾರೆ.
ಆಯೋಧ್ಯೆಯಲ್ಲಿ ದೀಪಾವಳಿ ಸಂಭ್ರಮ, 24 ಲಕ್ಷ ದೀಪದ ಮೂಲಕ ಗಿನ್ನಿಸ್ ದಾಖಲೆ!
ಈ ಘೋಷಣೆ ಕುರಿತು ಅತೀವ ಸಂತಸ ವ್ಯಕ್ತಪಡಿಸಿದೆ ನ್ಯೂಯಾರ್ಕ್ ಸಿಟಿ ಮೇಯರ್ ಕಚೇರಿಯ ಡೆಪ್ಯೂಟಿ ಕಮಿಷನರ್, ಭಾರತೀಯ ಮೂಲಕ ದಿಲೀಪ್ ಚೌವ್ಹಾಣ್ ಇದು ಐತಿಹಾಸಿಕ ದಿನ ಎಂದು ಬಣ್ಣಸಿದ್ದಾರೆ. ದೀಪಾವಳಿ ಹಬ್ಬಕ್ಕೆ ಸಾರ್ವತ್ರಿಕ ಶಾಲಾ ರಜೆ ಘೋಷಣೆ ಹಿಂದೆ ಭಾರತೀಯ ಸಮುದಾಯದ ನಾಯಕರು, ಅಧಿಕಾರಿಗಳು ಶ್ರಮಿಸಿದ್ದಾರೆ ಎಂದು ದಿಲೀಪ್ ಚೌವ್ಹಾಣ್ ಹೇಳಿದ್ದಾರೆ.
