ಆಯೋಧ್ಯೆಯಲ್ಲಿ ದೀಪಾವಳಿ ಸಂಭ್ರಮ, 24 ಲಕ್ಷ ದೀಪದ ಮೂಲಕ ಗಿನ್ನಿಸ್ ದಾಖಲೆ!
ಆಯೋಧ್ಯೆಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಇಮ್ಮಡಿಗೊಂಡಿದೆ. ಸತತ 6ನೇ ಬಾರಿಗೆ ಉತ್ತರ ಪ್ರದೇಶ ಸರ್ಕಾರ ಗಿನ್ನಿಸ್ ದಾಖಲೆಗೆ ಸಜ್ಜಾಗಿದೆ. ಈ ಬಾರಿ ಸರಯೂ ನದಿ ದಂಡೆ ಬದಿಯಲ್ಲಿ ಒಟ್ಟ 24 ಲಕ್ಷ ದೀಪ ಬೆಳಗಿಸಿ ದೀಪಾವಳಿ ಹಬ್ಬ ಆಚರಿಸಲಾಗುತ್ತಿದೆ.
ಆಯೋಧ್ಯೆ(ನ.11) ಆಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಜನವರಿ 22 ರಂದು ಶ್ರೀ ರಾಮ ಮಂದಿರ ಉದ್ಘಾಟನೆಯಾಗುತ್ತಿದೆ. ಇದಕ್ಕೂ ಮುನ್ನ ಆಗಮಿಸಿರುವ ದೀಪಾವಳಿ ಹಬ್ಬ ಆಯೋಧ್ಯೆಯಯಲ್ಲಿ ಶ್ರೀರಾಮನ ಗತವೈಭವವನ್ನು ಮರುಸೃಷ್ಟಿಸಿದೆ. ಈ ಬಾರಿ ಉತ್ತರ ಪ್ರದೇಶ ಸರ್ಕಾರ ಬರೋಬ್ಬರಿ 24 ಲಕ್ಷ ದೀಪ ಬೆಳಗಿಸಿ, ಮತ್ತೊಂದು ಗಿನ್ನಿಸ್ ದಾಖಲೆಗೆ ಸಜ್ಜಾಗಿದೆ. ಆಯೋಧ್ಯೆಯ ಸರಯೂ ನದಿ ದಂಡೆ ಮೇಲೆ ಬರೋಬ್ಬರಿ 24 ಲಕ್ಷ ದೀಪ ಬೆಳಗಿಸಿ ದೀಪಾವಳಿ ಹಬ್ಬ ಆಚರಿಸಲಾಗುತ್ತಿದೆ. ಈಗಾಗಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾರ್ಯಕ್ರಮ ಉದ್ಘಾಟಿಸಿದ್ದಾರೆ.
ಇಂದು ಬೆಳಗ್ಗೆ ದೀವಾವಳಿ ಹಬ್ಬದ ಪ್ರಯುಕ್ತ ಶೋಭಯಾತ್ರೆಗೆ ಚಾಲನೆ ನೀಡಲಾಗಿತ್ತು. ಅದ್ಧೂರಿ ಶೋಭಯಾತ್ರೆ ಬಳಿಕ 3 ಗಂಟೆಯಿಂದ ದೀಪಾವಳಿ ಹಬ್ಬದ ಕಾರ್ಯಕ್ರಮಗಳು ಆರಂಭಗೊಂಡಿದೆ. ಇದೀಗ ಯೋಗಿ ಆದಿತ್ಯನಾಥ್ ಕಾರ್ಯಕ್ರಮ ಉದ್ಘಾಟಿಸಿ ಭಾಷಣ ಮಾಡಿದ್ದಾರೆ. ಶ್ರೀ ರಾಮ ಮಂದಿರ ಉದ್ಘಾಟನೆಗೆ ಇನ್ನು ಕೇಲವೇ ದಿನಗಳು ಮಾತ್ರ ಬಾಕಿ ಇದೆ. ಇದರ ನಡುವೆ ದೀಪಾವಳಿ ಹಬ್ಬ ಆಗಮಿಸಿರುವುದು ಆಯೋಧ್ಯೆ ಕಳೆ ಹೆಚ್ಚಿಸಿದೆ ಎಂದಿದ್ದಾರೆ.
ರಾಮ ಮಂದಿರ ಮೇಲೆ ಪಾಕ್ ಭಯೋತ್ಪಾದಕರ ದಾಳಿ ಸಂಚು ಬಹಿರಂಗ, ಆಯೋಧ್ಯೆಯಲ್ಲಿ ಭದ್ರತೆ ಹೆಚ್ಚಳ!
ಸತತ 6ನೇ ವರ್ಷ ಆಯೋಧ್ಯೆಯಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಗಿನ್ನಿಸ್ ದಾಖಲೆ ಬರೆಯುತ್ತಿದೆ.ಲಕ್ಷ ಲಕ್ಷ ದೀಪೋತ್ಸವ ಸಂಭ್ರಮದ ಮೂಲಕ ದೀಪಾವಳಿ ಆಚರಿಸಿ ಜಗತ್ತಿಗೆ ಸಂದೇಶ ಸಾರಿದೆ. ಕಳೆದ ವರ್ಷ 15 ಲಕ್ಷ ದೀಪಗಳನ್ನು ಬೆಳಗಿಸಿ ದೀಪಾವಳಿ ಹಬ್ಬ ಆಚರಿಸಲಾಗಿತ್ತು. 20,000 ಸ್ವಯಂ ಸೇವಕರು ದೀಪ ಬೆಳಗಿಸಿದ್ದರು. ಈ ಬಾರಿ 24 ಲಕ್ಷ ದೀಪಗಳನ್ನು ಬೆಳಗಿಸಲಾಗುತ್ತಿದೆ. 25,000ಕ್ಕೂ ಹೆಚ್ಚು ಸ್ವಯಂ ಸೇವಕರು ದೀಪ ಬೆಳಗಿ ಗಿನ್ನಿಸ್ ದಾಖಲೆ ಬರೆಯಲಿದ್ದಾರೆ.
ಹಲವು ದೇಶಗಳಲ್ಲಿ ಈ ಕಾರ್ಯಕ್ರಮ ನೇರಪ್ರಸಾರವಾಗುತ್ತಿದೆ.14 ವರ್ಷದ ವನವಾಸ ಮುಗಿಸಿ ಶ್ರೀರಾಮ ಚಂದ್ರ ಆಯೋಧ್ಯೆಗೆ ಆಗಮಿಸಿದಾಗ ಇಡೀ ಆಯೋಧ್ಯೆ ಹೇಗೆ ಅಲಂಕಾರಗೊಂಡಿತ್ತು. ಯಾವ ರೀತಿ ಶ್ರೀರಾಮ ಸ್ವಾಗತಕ್ಕೆ ಸಜ್ಜಾಗಿತ್ತು ಅನ್ನೋದು ಇಂದಿನ ದೀಪೋತ್ಸವದಲ್ಲಿ ಜಗತ್ತಿಗೆ ತಿಳಿಯಲಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ಆಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಕಾರ್ಯ ಅಂತಿಮ ಹಂತ ತಲುಪಿದೆ. ಜನವರಿಯಲ್ಲಿ ಮಂದಿರ ಉದ್ಘಾಟನೆಯಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ 3,500 ಕೋಟಿ ರೂಪಾಯಿ ಅನುದಾನ ನೀಡಿ ಅಭಿವೃದ್ದಿ ಕಾಮಗಾರಿ ನಡೆಯುತ್ತಿದೆ. ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರದಿಂದ ಲಕ್ಷ ಲಕ್ಷ ಮಂದಿಗೆ ಉದ್ಯೋಗಗಳು ಸಿಗಲಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಅಯೋಧ್ಯೆ ರಾಮಮಂದಿರದ 3 ಮಹಡಿಯ ಎಲ್ಲಾ 18 ಬಾಗಿಲಿಗೆ ಸ್ವರ್ಣ ಲೇಪನ