ಪಾಕಿಸ್ತಾನದಲ್ಲಿ ತುಘಲಕ್ ಕಾನೂನು, ಸೇನೆ-ಕೋರ್ಟ್ ಬಗ್ಗೆ ಕೀಳಾಗಿ ಮಾತಾಡಿದ್ರೆ ಉಳಿಗಾಲವಿಲ್ಲ!
ಹೊಸ ಕಾನೂನಿನ ಪ್ರಕಾರ, ಪಾಕಿಸ್ತಾನದ ಯಾವುದೇ ವ್ಯಕ್ತಿ ದೇಶದ ಸೇನೆ ಮತ್ತು ನ್ಯಾಯಾಂಗವನ್ನು ಯಾವುದೇ ರೀತಿಯಲ್ಲಿ ಅವಮಾನಿಸಿದರೆ, ಆತನಿಗೆ 5 ವರ್ಷ ಶಿಕ್ಷೆ ಹಾಗೂ 10 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ.
ಕರಾಚಿ (ಫೆ.5): ದುಡ್ಡಿಲ್ಲದೆ ದಿವಾಳಿಯಾಗುವ ಹಂತ ತಲುಪಿರುವ ಪಾಕಿಸ್ತಾನದಲ್ಲಿ ಯಾವುದೇ ಹಂತದಲ್ಲಿ ಕ್ಷಿಪ್ರ ಕ್ರಾಂತಿ ನಡೆಯಬಹುದು. ದೇಶವನ್ನೇ ಮಾರಿಕೊಳ್ಳುವ ಹಂತದಲ್ಲಿರುವ ಪಾಕಿಸ್ತಾನಕ್ಕೆ ತನ್ನ ಆಪ್ತ ರಾಷ್ಟ್ರಗಳಿಂದಲೂ ಸಹಾಯ ಸಿಗುತ್ತಿಲ್ಲ. ಈ ನಡುವೆ ಪ್ರಸ್ತುತ ಸರ್ಕಾರವು ಪಾಕಿಸ್ತಾನ ದಂಡ ಸಂಹಿತೆ (PPC) ಮತ್ತು ಕ್ರಿಮಿನಲ್ ಪ್ರೊಸೀಜರ್ ಕೋಡ್ (CRPC) ಗೆ ತಿದ್ದುಪಡಿ ಮಾಡುವ ಮಸೂದೆಯನ್ನು ಅಂಗೀಕರಿಸಲು ಸಿದ್ಧತೆ ನಡೆಸಿದೆ. ಈ ಕರಡು ಮಸೂದೆಯ ಪ್ರಕಾರ, ಪಾಕಿಸ್ತಾನದ ಯಾವುದೇ ವ್ಯಕ್ತಿ ಯಾವುದೇ ರೀತಿಯಲ್ಲಿ ದೇಶದ ಸೇನೆ ಮತ್ತು ನ್ಯಾಯಾಂಗವನ್ನು ಅವಮಾನಿಸಿದರೆ, ಅವರಿಗೆ 5 ವರ್ಷ ಶಿಕ್ಷೆ ಮತ್ತು 10 ಲಕ್ಷ ರೂಪಾಯಿ ದಂಡ ವಿಧಿಸಲು ತೀರ್ಮಾನಿಸಲಾಗಿದೆ. ಇಲ್ಲಿಯವರೆಗೂ ಪಾಕಿಸ್ತಾನದಲ್ಲಿ ಸೇನೆ ಹಾಗೂ ನ್ಯಾಯಾಂಗ ವ್ಯವಸ್ಥೆಯನ್ನು ಟೀಕೆ ಮಾಡಿದರೆ, ಎಚ್ಚರಿಕೆ ನೀಡಿ ದಂಡ ಕಟ್ಟಿಸಿಕೊಳ್ಳಲಾಗುತ್ತಿತ್ತು. ಈಗ ಇಂಥ ವ್ಯಕ್ತಿಗಳಿಗೆ ಜೈಲು ಶಿಕ್ಷೆ ಹಾಗೂ ಭಾರೀ ಪ್ರಮಾಣದ ದಂಡ ವಿಧಿಸಲು ತೀರ್ಮಾನ ಮಾಡಲಾಗಿದೆ.
ಕರಡು ಮಸೂದೆಯನ್ನು ಕಾನೂನು ಮತ್ತು ನ್ಯಾಯ ಸಚಿವಾಲಯವು ವೀಟೋ ಮಾಡಿದೆ. ಪ್ರಧಾನಿ ಮತ್ತು ಫೆಡರಲ್ ಕ್ಯಾಬಿನೆಟ್ಗಾಗಿ ಆಂತರಿಕ ಸಚಿವಾಲಯವು ಈ ಮಸೂದೆಯನ್ನು ತಂದಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸೇನೆ ಮತ್ತು ನ್ಯಾಯಾಲಯಗಳ ವಿರುದ್ಧ ಟೀಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪ್ರಸ್ತಾವಿತ ಮಸೂದೆಯ ಉದ್ದೇಶವನ್ನು ಸಚಿವ ಸಂಪುಟ ಸ್ಪಷ್ಟವಾಗಿ ಉಲ್ಲೇಖಿಸಿದೆ. ಆಂತರಿಕ ಸಚಿವಾಲಯದ ಮೂಲಗಳ ಪ್ರಕಾರ, ಸಾರಾಂಶ ಮತ್ತು ಮಸೂದೆಯನ್ನು ಶೀಘ್ರದಲ್ಲೇ ಫೆಡರಲ್ ಕ್ಯಾಬಿನೆಟ್‌ಗೆ ಕಳುಹಿಸಲಾಗುತ್ತದೆ.
500ಎ ಹೊಸ ಸೆಕ್ಷನ್ ಸೇರ್ಪಡೆ: ಕ್ರಿಮಿನಲ್ ಕಾನೂನು (ತಿದ್ದುಪಡಿ) ಕಾಯಿದೆ, 2023, ಬಿಲ್ ಪಾಕಿಸ್ತಾನ ಪೆನಲ್ ಕೋಡ್(ಪಿಪಿಸಿ) 1860 ಸೆಕ್ಷನ್ 500 ರ ನಂತರ ಹೊಸ ಸೆಕ್ಷನ್ 500A ಅನ್ನು ಸೇರಿಸಲು ಸಲಹೆ ನೀಡಿದೆ. ಹೊಸ ಸೆಕ್ಷನ್ 'ಉದ್ದೇಶಪೂರ್ವಕವಾಗಿ ರಾಜ್ಯ ಸಂಸ್ಥೆಗಳನ್ನು ಅಪಹಾಸ್ಯ ಮಾಡುವುದು ಅಥವಾ ಮಾನಹಾನಿ ಮಾಡುವುದು' ಎಂಬ ಶೀರ್ಷಿಕೆಯನ್ನು ಹೊಂದಿದೆ.
ಬಿಪಿನ್ ರಾವತ್‌ರನ್ನು 'ರಸ್ತೆ ಬದಿಯ ಗೂಂಡಾ' ಎಂದಿದ್ದ ಕಾಂಗ್ರೆಸ್‌ಗೆ ಮುಷರಫ್ ಶಾಂತಿಧೂತ!
ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗ, ಸೇನೆ ಸೇರಿದಂತೆ ದೇಶದ ಕೆಲವು ಸಂಸ್ಥೆಗಳ ಮೇಲೆ ಖಂಡನೀಯ, ಅತಿರೇಕದ ದಾಳಿಗಳು ಹೆಚ್ಚಾಗುತ್ತಿವೆ ಎಂದು ಸಂಪುಟ ಸಾರಾಂಶದಲ್ಲಿ ತಿಳಿಸಲಾಗಿದೆ.
ಜಾಮೀನು ರಹಿತ ವಾರಂಟ್: ನ್ಯಾಯಾಂಗ, ಸೇನೆ ಅಥವಾ ಅದರ ಯಾವುದೇ ಸದಸ್ಯರನ್ನು ಅಪಹಾಸ್ಯ ಮಾಡುವ ಅಥವಾ ಅವಮಾನಿಸುವ ಉದ್ದೇಶದಿಂದ ಯಾವುದೇ ಹೇಳಿಕೆಯನ್ನು ನೀಡಿದ ಮತ್ತು ಪ್ರಕಟಿಸಿದವರು ಸೀಮಿತ ಅವಧಿಗೆ ಜೈಲು ಶಿಕ್ಷೆಯೊಂದಿಗೆ ಭಾರೀ ಪ್ರಮಾಣದ ದಂಡನೀಯ ಅಪರಾಧ ಎಂದು ಅದು ಹೇಳುತ್ತದೆ. ಈ ಅವಧಿಯಲ್ಲಿ, ಆತನಿಗೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ 10 ಲಕ್ಷ ರೂಪಾಯಿ ದಂಡ ಅಥವಾ ಎರಡನ್ನೂ ವಿಧಿಸುವ ಅವಕಾಶ ನೀಡಲಾಗಿದೆ.
ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ
ಅಂತೆಯೇ, ಪಿಪಿಸಿಯ ಶೆಡ್ಯೂಲ್ II ರಲ್ಲಿ, 500A ಎಂಬ ಹೊಸ ಸೆಕ್ಷನ್‌ಅನ್ನು ಸೆಕ್ಷನ್ 500 ಗೆ ಸೇರಿಸಲಾಗಿದೆ. ಇದರ ಅನ್ವಯ ಅಪರಾಧಿಯನ್ನು ಬಂಧಿಸಲು ವಾರಂಟ್ ಅಗತ್ಯವಿಲ್ಲ. ಈ ಅಪರಾಧವು ಜಾಮೀನು ರಹಿತವಾಗಿದೆ. ಇದನ್ನು ಕೋರ್ಟ್‌ನಲ್ಲಿ ಮಾತ್ರವೇ ಪ್ರಶ್ನೆ ಮಾಡಬೇಕಾಗಿರುತ್ತದೆ. ದೇಶದ ಸರ್ಕಾರಿ ಸಂಸ್ಥೆಗಳು ಮತ್ತು ಅವರ ಅಧಿಕಾರಿಗಳನ್ನು ದೂಷಿಸುವ ಅಥವಾ ದ್ವೇಷವನ್ನು ಹರಡುವ ಉದ್ದೇಶದಿಂದ ಕೆಲವರು ಅಭಿಯಾನವನ್ನು ಪ್ರಾರಂಭಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.