ಜ್ವಾಲಾಮುಖಿಯ ಸ್ಫೋಟದಿಂದ ನಿರ್ಮಾಣವಾಯ್ತು ಹೊಸ ದ್ವೀಪ: ನೈಸರ್ಗಿಕ ಪ್ರಕ್ರಿಯೆಯ ವೀಡಿಯೋ ವೈರಲ್
ನೀವು ಜ್ವಾಲಾಮುಖಿ ಬಗ್ಗೆ ತಿಳಿದಿರಬಹುದು. ಸದಾ ಬೆಂಕಿಯುಗುಳುವ ಜ್ವಾಲಾಮುಖಿಯಿಂದ ದ್ವೀಪವೂ ನಿರ್ಮಾಣವಾಗುವುದು ಎಂಬ ವಿಚಾರ ನಿಮಗೆ ಗೊತ್ತಾ? ಜಪಾನ್‌ನಲ್ಲಿ ಸಮುದ್ರದೊಳಗಿನ ಜ್ವಾಲಾಮುಖಿ ಸ್ಫೋಟದಿಂದ ದ್ವೀಪವೊಂದು ನಿರ್ಮಾಣವಾಗಿದ್ದು, ಈ ನೈಸರ್ಗಿಕ ಪ್ರಕ್ರಿಯೆಯ ರೋಚಕ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟೋಕಿಯೋ: ನೀವು ಜ್ವಾಲಾಮುಖಿ ಬಗ್ಗೆ ತಿಳಿದಿರಬಹುದು. ಸದಾ ಬೆಂಕಿಯುಗುಳುವ ಜ್ವಾಲಾಮುಖಿಯಿಂದ ದ್ವೀಪವೂ ನಿರ್ಮಾಣವಾಗುವುದು ಎಂಬ ವಿಚಾರ ನಿಮಗೆ ಗೊತ್ತಾ? ಜಪಾನ್‌ನಲ್ಲಿ ಸಮುದ್ರದೊಳಗಿನ ಜ್ವಾಲಾಮುಖಿ ಸ್ಫೋಟದಿಂದ ದ್ವೀಪವೊಂದು ನಿರ್ಮಾಣವಾಗಿದ್ದು, ಈ ನೈಸರ್ಗಿಕ ಪ್ರಕ್ರಿಯೆಯ ರೋಚಕ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಪಾನ್ ಈಗಾಗಲೇ ಹಲವಾರು ದ್ವೀಪಗಳಿಗೆ ಹೆಸರುವಾಸಿಯಾಗಿದೆ. ಹೀಗಿರುವಾಗ ಈಗ ಮತ್ತೊಮ್ಮೆ ವಿಶೇಷವಾದ ದ್ವೀಪದ ಕಾರಣಕ್ಕೆ ಜಪಾನ್ ಸುದ್ದಿಯಾಗಿದೆ. ವರದಿಗಳ ಪ್ರಕಾರ, ಅಕ್ಟೋಬರ್ ತಿಂಗಳ ಕೊನೆಯಲ್ಲಿ ನೀರೊಳಗಿನ ಜ್ವಾಲಾಮುಖಿಯೊಂದು ಸ್ಫೋಟಗೊಂಡ ಪರಿಣಾಮ ಈಗ ಹೊಸದಾದ ದ್ವೀಪವೊಂದು ನಿರ್ಮಾಣವಾಗಿದೆ. ಜಪಾನ್‌ನ ಒಗಸವಾರ ದ್ವೀಪದ ಬಳಿ ಈ ಹೊಸ ದ್ವೀಪ ನಿರ್ಮಾಣವಾಗಿದೆ.
ಹುಟ್ಟುತ್ತಲೇ ದಾಖಲೆ ಬರೆದ ಪುಟ್ಟ ಭೀಮ: 6.5 ಕೇಜಿ ತೂಗಿದ ನವಜಾತ ಶಿಶು
ಈ ನೈಸರ್ಗಿಕವಾದ ಪ್ರಕ್ರಿಯೆಯೂ ನಮ್ಮ ಭೂಮಿಯ ಕ್ರಿಯಾತ್ಮಕ ಚಟುವಟಿಕೆ ಹಾಗೂ ನಿರಂತರವಾಗಿ ಬದಲಾಗುತ್ತಿರುವ ಭೌಗೋಳಿಕ ಪ್ರಕ್ರಿಯೆಗಳ ಬಗ್ಗೆ ಯೋಚನೆ ಮಾಡುವಂತೆ ಮಾಡುತ್ತಿದೆ. ಹೊಸದಾಗಿ ಪ್ರಾಕೃತಿಕವಾಗಿ ನಿರ್ಮಾಣವಾದ ಈ ದ್ವೀಪಕ್ಕೆ ಇನ್ನು ಹೆಸರಿಟ್ಟಿಲ್ಲ, ಆದರೆ ಈ ಹೊಸ ದ್ವೀಪದ ಸುತ್ತಳತೆ 100 ಮೀಟರ್ ವ್ಯಾಸವನ್ನು ಹೊಂದಿದೆ ಹಾಗೂ ಇದು ಫ್ರಿಟೊಮ್ಯಾಗ್ಮ್ಯಾಟಿಕ್ ಸ್ಫೋಟಗಳ ಮೂಲಕ ದ್ವೀಪದ ಆಕಾರ ಪಡೆದುಕೊಂಡಿದೆ. ಶಿಲಾಪದರ ಅಥವಾ ಶಿಲಾಪಾಕ ಸಮುದ್ರದ ನೀರಿನೊಂದಿಗೆ ಪ್ರತಿಕ್ರಿಯಿಸಿದಾಗ ಈ ಸ್ಫೋಟಗಳು ಕಾಣಿಸಿಕೊಂಡು ಬೂದಿ ಹಾಗೂ ಹೊಗೆಯನ್ನು ಬಿಡುಗಡೆ ಮಾಡುತ್ತವೆ.
ವರದಿಗಳ ಪ್ರಕಾರ ಅಕ್ಟೋಬರ್ 21ರ 2023 ರಂದು ಇಲ್ಲಿ ನೀರೊಳಗಿದ್ದ ಜ್ವಾಲಾಮುಖಿ ಸ್ಫೋಟಿಸಲು ಪ್ರಾರಂಭವಾಯ್ತು. ಇದು ಸುಮಾರು 10 ದಿನಗಳವರೆಗೆ ಮುಂದುವರೆದವು. ಅಂತಿಮವಾಗಿ ಇದು ಸಮುದ್ರದ ಮೇಲೆ ದ್ವೀಪವೊಂದು ಸೃಷ್ಟಿಯಾಗುವುದಕ್ಕೆ ಕಾರಣವಾಯ್ತು. ಜಪಾನ್‌ನ ಈ ಹಿಂದೆ ಐವೊ ಜಿಮಾ ಎಂದು ಕರೆಯಲ್ಪಡುತ್ತಿದ್ದ ಐವೊಟೊ ದ್ವೀಪದ ಕರಾವಳಿಯಿಂದ ಸುಮಾರು 1 ಕಿಮೀ ದೂರದಲ್ಲಿ ಇದು ಸಂಭವಿಸಿದೆ. 2ನೇ ಮಹಾಯುದ್ಧದ ವೇಳೆ ಈ ಪ್ರದೇಶವೂ ತೀವ್ರವಾದ ಯುದ್ಧಕ್ಕೆ ಸಾಕ್ಷಿಯಾಗಿತ್ತು.
ಇಸ್ರೇಲ್ ಬಳಿಕ ತೈವಾನ್‌ನಿಂದಲೂ ಭಾರತದ ಕಾರ್ಮಿಕರಿಗೆ ಬೇಡಿಕೆ: 1 ಲಕ್ಷ ಕೆಲಸಗಾರರ ನೇಮಕಕ್ಕೆ ನಿರ್ಧಾರ
ಹಾಗಂತ ಸ್ಫೋಟದಿಂದ ದ್ವೀಪ ನಿರ್ಮಾಣವಾಗಿರುವುದು ಇದು ಮೊದಲೇನಲ್ಲ, ಬೋನಿನ್ ದ್ವೀಪಗಳು ಅಥವಾ ಬೊನಿನ್ ಐಲ್ಯಾಂಡ್ (Bonin Islands) ಎಂದು ಕರೆಯಲ್ಪಡುವ ಒಗಸವರ ದ್ವೀಪ ಸರಪಳಿಯೂ ಸುಮಾರು 30 ದ್ವೀಪಗಳನ್ನು ಹೊಂದಿದ್ದು, ಅವುಗಳಲ್ಲಿ ಕೆಲವದರಲ್ಲಿ ಜ್ವಾಲಾಮುಖಿ ಇನ್ನೂ ಜೀವಂತವಾಗಿದ್ದು ಸಕ್ರಿಯವಾಗಿದೆ. ಇದಕ್ಕೂ ಮೊದಲು 2013ರಲ್ಲಿ ಇಲ್ಲಿ ಕೊನೆಯದಾಗಿ ದ್ವೀಪವೊಂದು ಸೃಷ್ಟಿಯಾಗಿತ್ತು, ಇದು ನೀರೊಳಗಿನ ಮತ್ತೊಂದು ಜ್ವಾಲಾಮುಖಿಯ ಸ್ಫೋಟದಿಂದ ನಿರ್ಮಾಣವಾಗಿತ್ತು.
ಈ ಬಗ್ಗೆ ಹೆಚ್ಚಿನ ವಿವರ ನೀಡಿದ ಟೋಕಿಯೋ ವಿವಿಯ (Tokyo University) ಭೂಕಂಪ ಸಂಶೋಧನಾ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಫುಕಾಶಿ ಮೆನೊ (Fukashi Maeno), ಇವೊಟೊ ಬಳಿ ಫ್ರಿಟೊಮ್ಯಾಗ್ಮ್ಯಾಟಿಕ್ ಸ್ಫೋಟಗಳ ಉಪಸ್ಥಿತಿಯನ್ನು ಅಧಿಕೃತವಾಗಿ ಪರಿಶೀಲಿಸಿದ್ದಾರೆ, ಆಕ್ಟೋಬರ್ ಅಂತ್ಯದಲ್ಲಿ ಈ ಪ್ರದೇಶವನ್ನು ಪರಿಶೀಲಿಸಿದಾಗ ಜ್ವಾಲಾಮುಖಿ ಸ್ಫೋಟದ ವೇಳೆ ಹೊಗೆ ಹಾಗೂ ಬೂದಿ 50 ಮೀಟರ್‌ಗಿಂತ ಹೆಚ್ಚು ಎತ್ತರವನ್ನು ತಲುಪಿತ್ತು ಎಂದು ಹೇಳಿದ್ದಾರೆ. ಅವರ ಪ್ರಕಾರ, ಹೊಸ ದ್ವೀಪದ ಇತ್ತೀಚಿನ ರಚನೆಯು ಈ ಪ್ರದೇಶದಲ್ಲಿ ನವೀಕೃತ ಮ್ಯಾಗ್ಮ್ಯಾಟಿಕ್ ಚಟುವಟಿಕೆಯ ಸೂಚನೆಯಾಗಿದ್ದು, ಇಲ್ಲಿ ಸ್ಪೋಟಗಳು ಮುಂದುವರೆದರೆ ಇದರ ಆಕಾರದಲ್ಲಿ ಮತ್ತೆ ಬದಲಾವಣೆಯಾಗುವ ಸಾಧ್ಯತೆ ಇದೆಯಂತೆ.