Giorgia Meloni video : ತಮ್ಮ ಬಗೆಗಿನ ಪಾಸಿಟಿವ್ ವಿಚಾರ ಕೇಳುವುದಕ್ಕೆ ಎಲ್ಲರೂ ಇಷ್ಟಪಡುತ್ತಾರೆ. ಆದರೆ ನೆಗೆಟಿವ್ ವಿಚಾರವನ್ನು ಹೇಳಿದಾಗ ಅನೇಕರು ಅದನ್ನು ಸ್ವೀಕರಿಸುವುದಕ್ಕಿಂತ ಹೇಳಿದವರ ಮೇಲೆ ಮುಗಿಬೀಳೋದೇ ಹೆಚ್ಚು. ಬಹುತೇಕರು ವಾದಕ್ಕಿಳಿಯುತ್ತಾರೆ. ಆದರೆ ಇಟಲಿ ಪ್ರಧಾನಿ ಏನ್ ಮಾಡಿದ್ರು ನೋಡಿ..

ಪಾಸಿಟಿವ್ ಹೇಳಿದರೆ ಉಬ್ಬುತ್ತಾರೆ ನೆಗೆಟಿವ್ ಹೇಳಿದರೆ ಕೋಪಗೊಳ್ಳುವ ಜನ

ಸಾಮಾನ್ಯವಾಗಿ ತಮ್ಮ ಬಗೆಗಿನ ಪಾಸಿಟಿವ್ ವಿಚಾರಗಳನ್ನು ಕೇಳುವುದಕ್ಕೆ ಎಲ್ಲರೂ ಇಷ್ಟಪಡುತ್ತಾರೆ. ಆದರೆ ನೆಗೆಟಿವ್ ವಿಚಾರವನ್ನು ಹೇಳಿದಾಗ ಅನೇಕರು ಅದನ್ನು ಸ್ವೀಕರಿಸುವುದಕ್ಕಿಂತ ಹೇಳಿದವರ ಮೇಲೆ ಮುಗಿಬೀಳೋದೇ ಹೆಚ್ಚು. ಬಹುತೇಕರು ವಾದಕ್ಕಿಳಿಯುತ್ತಾರೆ. ಆದರೆ ಕೆಲವೇ ಕೆಲವು ಮಂದಿ ಮಾತ್ರ ವಾಸ್ತವವನ್ನು ಅರ್ಥಮಾಡಿಕೊಂಡು ಸಮಚಿತ್ತದಿಂದ ಇರುತ್ತಾರೆ. ಅವರು ಹೊಗಳಿದಾಗ ಉಬ್ಬೋದು ಇಲ್ಲ, ತೆಗಳಿದಾಗ ಕೆರಳಿ ಕೆಂಡವಾಗೋದು ಇಲ್ಲ. ಬಹುಶಃ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅಂತವರಲ್ಲಿ ಒಬ್ಬರೆನಿಸುತ್ತಿದೆ. ಏಕೆಂದರೆ ಅವರ ಇತ್ತೀಚಿನ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ವೀಡಿಯೋ ನೋಡಿದ ನೆಟ್ಟಿಗರು ಇಟಲಿ ಪ್ರಧಾನಿ ಮಾತಿಗೆ ಫಿದಾ ಆಗಿದ್ದಾರೆ. ಹಾಗಿದ್ದರೆ ಆಗಿದ್ದೇನು? ವೀಡಿಯೋದಲ್ಲೇನಿದೆ ಇಲ್ಲಿದೆ ನೋಡಿ ಡಿಟೇಲ್ ಸ್ಟೋರಿ...

ಇದನ್ನೂ ಓದಿ: ಅಪ್ಪನಿಗೆ ಅನಾರೋಗ್ಯ ಮನೆಯಲ್ಲಿ ಬಡತನ SSLC ಪರೀಕ್ಷೆ ಬಿಟ್ಟು ಕೂಲಿಗೆ ಹೋದ ಬಾಲಕಿ: ಆಮೇಲಾಗಿದ್ದೇನು?

ನೆಗೆಟಿವ್‌ ಮಾತಿಗೆ ಜಾರ್ಜಿಯಾ ಮೆಲೋನಿ ನೀಡಿದ ಉತ್ತರ ಭಾರಿ ವೈರಲ್

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಜಗತ್ತಿನ ಪ್ರಭಾವಿ ನಾಯಕರು/ಮಹಿಳೆಯರಲ್ಲೊಬ್ಬರು. ತಮ್ಮ ಸೌಂದರ್ಯ ಹಾಗೂ ಬುದ್ಧಿವಂತಿಕೆಯಿಂದಲೇ ಎಲ್ಲರನ್ನು ಸೆಳೆಯುವ ಅವರಿಗೆ ಕೇವಲ ಇಟಲಿ ಮಾತ್ರವಲ್ಲದೇ ಪ್ರಪಂಚದ ಹಲವು ಕಡೆಗಳಲ್ಲಿ ಅವರಿಗೆ ಅಭಿಮಾನಿಗಳಿದ್ದಾರೆ. ಅವರನ್ನೊಮ್ಮೆ ಭೇಟಿ ಮಾಡಬೇಕು ಎಂದು ಅನೇಕರು ಕಾಯ್ತಿರುತ್ತಾರೆ. ಇಂತಹ ಮೆಲೋನಿ ಅವರನ್ನು ಯುವಕನೋರ್ವ ಭೇಟಿ ಮಾಡಿದ್ದು, ಅವರ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾನೆ. ಸೆಲ್ಫಿ ತೆಗೆದುಕೊಂಡ ಬಳಿಕ ಆ ಯುವಕ ನಾನು ನಿಮಗೆ ಎಂದಿಗೂ ಮತ ಹಾಕುವುದಿಲ್ಲ ಎಂದು ನೇರವಾಗಿ ಮೆಲೋನಿ ಮುಖಕ್ಕೆ ಹೊಡೆದಂತೆ ಹೇಳಿದ್ದಾನೆ. ಆದರೆ ಇದಕ್ಕೆ ತಾಳ್ಮೆಗೆಡದೇ ಇದನ್ನ ಬಹಳ ಸಹಜವಾಗಿಯೇ ಸ್ವೀಕರಿಸಿದ ಜಾರ್ಜಿಯಾ ಮೆಲೋನಿ ಬಹಳ ಅದ್ಭುತವಾದ ಉತ್ತರ ನೀಡಿದ್ದಾರೆ.

ಯುವಕನಿಗೆ ಜಾರ್ಜಿಯಾ ಮೆಲೋನಿ ಹೇಳಿದ್ದೇನು?

ಸೆಲ್ಫಿ ಕ್ಲಿಕ್ಕಿಸಿಕೊಂಡು ನಾನು ನಿಮಗೆ ಮತ ಹಾಕುವುದಿಲ್ಲ ಎಂದು ಹೇಳುತ್ತಿದ್ದಂತೆ ಜಾರ್ಜಿಯಾ ಮೆಲೋನಿ ತಕ್ಷಣವೇ ಪ್ರತಿಕ್ರಿಯಿಸಿದ್ದು, ಇದು ಪ್ರಜಾಪ್ರಭುತ್ವದ ಸೌಂದರ್ಯ, ನೀವು ಮತ ಹಾಕದಿರುವುದು ಕೂಡ ಸರಿಯಾಗಿಯೇ ಇದೆ ಎಂದು ಹೇಳಿದ್ದಾರೆ. ಜಾರ್ಜಿಯಾ ಮೆಲೋನಿ ಮಾತಿಗೆ ಈಗ ಭಾರಿ ಮೆಚ್ಚುಗೆ ವ್ಯಕ್ತವಾಗ್ತಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಜಾರ್ಜಿಯಾ ಮೆಲೋನಿಯನ್ನು ಮೆಚ್ಚಿ ಕಾಮೆಂಟ್ ಮಾಡ್ತಿದ್ದಾರೆ. ನಮ್ಮ ದೇಶದಲ್ಲಂತೂ ಹೀಗೆ ಮಾಡೋದು ಸಾಧ್ಯವೇ ಇಲ್ಲ ಎಂದು ಅನೇಕರು ಹೇಳ್ತಿದ್ದಾರೆ. ನಮ್ಮ ರಾಜಕಾರಣಿಗಳ ಜೊತೆ ಫೋಟೋ ಕ್ಲಿಕ್ಕಿಸಿ ನಾನು ನಿಮಗೆ ವೋಟ್ ಹಾಕಲ್ಲ ಎಂದು ಹೇಳಿದರೆ ಆತನನ್ನು ಅಲ್ಲೇ ತದುಕಿ ಹಾಕಿ ಗಲಾಟೆ ಮಾಡುವುದರಲ್ಲಿ ಸಂಶಯವೇ ಇಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಜಮೀನಿನಲ್ಲಿ ನೀರು ಕುಡಿದ ವಿಚಾರಕ್ಕೆ ಎರಡು ಸಮುದಾಯಗಳ ಮಧ್ಯೆ ಗಲಾಟೆ: ಕಲ್ಲು ತೂರಾಟ..

View post on Instagram