ಜಮೀನಿನಲ್ಲಿ ನೀರು ಕುಡಿದ ವಿಚಾರಕ್ಕೆ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ನಡುವೆ ಗಲಾಟೆ ನಡೆದಿದೆ. ಈ ಘರ್ಷಣೆ ವಿಕೋಪಕ್ಕೆ ತಿರುಗಿ ಕಲ್ಲು ತೂರಾಟ ನಡೆದಿದ್ದು, ಎರಡೂ ಕಡೆಯ 15 ಜನರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.

ಜಮೀನಿನಲ್ಲಿ ನೀರು ಕುಡಿದ ವಿಚಾರಕ್ಕೆ ಎರಡು ಸಮುದಾಯಗಳ ಮಧ್ಯೆ ಗಲಾಟೆ

ಗದಗ: 21 ಶತಮಾನದಲ್ಲಿ ನಾವು ವಾಸ ಮಾಡುತ್ತಿದ್ದರು ಜಾತಿಯ ಭೂತ ನಮ್ಮ ಹಳ್ಳಿಗಳನ್ನೂ ಇನ್ನೂ ಬಿಟ್ಟಿಲ್ಲ, ಅಂತರ್ಜಾತಿ ವಿವಾಹವಾದವರನ್ನು ಬೇರೆ ಜಾತಿಯ ಯುವಕ/ಯುವತಿಯನ್ನು ಪ್ರೀತಿ ಮಾಡಿದವರ ಕತೆಯನ್ನೇ ಮುಗಿಸಿದಂತಹ ಹಲವು ಘಟನೆಯಗಳು ನಮ್ಮ ರಾಜ್ಯದಲ್ಲಿ ನಡೆದಿವೆ. ಕಾನೂನುಗಳು ಎಷ್ಟೇ ಮುಂದುವರೆದರೂ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಹಾಗೆಯೇ ಈಗ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಚಿಕ್ಕವಡ್ಡಟ್ಟಿಯಲ್ಲಿ ನೀರು ಕುಡಿದ ವಿಚಾರಕ್ಕೆ ಎರಡು ಸಮುದಾಯಗಳ ಮಧ್ಯೆ ಗಲಾಟೆ ನಡೆದಿದ್ದು, ಈ ಗಲಾಟೆ ವಿಕೋಪಕ್ಕೆ ತಿರುಗಿ ಕಲ್ಲು ತೂರಾಟ ನಡೆದಂತಹ ನಾಚಿಕೆಗೇಡಿನ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎರಡು ಸಮುದಾಯಗಳ ಮಧ್ಯೆ ಹೊಡೆದಾಟ: ಕಲ್ಲು ತೂರಾಟ:

ಹೌದು ಎಸ್‌ಸಿ ಹಾಗೂ ಎಸ್‌ಟಿ ಸಮುದಾಯದ ಮಧ್ಯೆ ಈ ಗಲಾಟೆ ನಡೆದಿದ್ದು, ವಾಲ್ಮೀಕಿ ಸಮುದಾಯದ ರೈತನ ಜಮೀನಲ್ಲಿ ಯುವಕನೋರ್ವ ನೀರು ಕುಡಿದಿದ್ದಾನೆ. ಆತ ಮಾದಿಗ ಸಮುದಾಯಕ್ಕೆ ಸೇರಿದ ವ್ಯಕ್ತಿ ಎಂದು ವಾಲ್ಮೀಕಿ ಸಮುದಾಯದ ರೈತ ಆಕ್ಷೇಪ ವ್ಯಕ್ತಪಡಿಸಿದ್ದು, ಇದೇ ವಿಚಾರ ಊರೆಲ್ಲಾ ಹಬ್ಬಿ ಈ ಎರಡು ಸಮುದಾಯಗಳ ನಡುವೆ ದೊಡ್ಡ ಗಲಾಟೆ ನಡೆದಿದೆ. ಪರಸ್ಪರ ಹೊಡೆದಾಡಿಕೊಂಡ ಎರಡು ಗುಂಪುಗಳ ಜನ ಕಲ್ಲು ತೂರಾಟವನ್ನು ನಡೆಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಘಟನೆಯಲ್ಲಿ ಎರಡೂ ಗುಂಪಿನ 15 ಜನರಿಗೆ ಗಾಯಗಳಾಗಿದ್ದು, ಗಾಯಾಗಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ‌ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಎಸ್‌ಪಿ ರೋಹನ್ ಜಗದೀಶ್ ಅವರು ಭೇಟಿ ನೀಡಿದ್ದು, ಸ್ಥಳದಲ್ಲಿ ಮಾಹಿತಿ ಪೊಲೀಸರನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: ತುತ್ತು ಅನ್ನಕ್ಕಾಗಿ ಸುರಿಯುವ ಮಳೆ ಲೆಕ್ಕಿಸದೇ ಚಳಿಯಲ್ಲೇ ನಡುಗುತ್ತಾ ಸಾಲುಗಟ್ಟಿ ನಿಂತ ಪುಟ್ಟ ಪುಟ್ಟ ಮಕ್ಕಳು

ನೀರನ್ನು ಯಾರಿಂದಲೂ ಸೃಷ್ಟಿಸಲಾಗದು, ಅದು ಪ್ರಕೃತಿಯ ಕೊಡುಗೆ ಇಂದು ಜಮೀನಿನಲ್ಲಿರುವ ನೀರು ನಾಳೆಯೂ ಇರುವುದು ಎಂದು ಹೇಳುವುದಕ್ಕೆ ಸಾಧ್ಯವಿಲ್ಲ, ಇಲ್ಲದೇ ಹೋದರೇ ಮನುಷ್ಯರು ಅದನ್ನೂ ಸೃಷ್ಟಿಸಲಾಗದು ಅದೆಲ್ಲವೂ ಪ್ರಕೃತಿಯ ಆಶೀರ್ವಾದ ಹೀಗಿದ್ದೂ ಮನುಷ್ಯರು ಜಾತಿ ಈ ಜಾತಿ ಎಂದು ಹೊಡೆದಾಡುವುದರ ಜೊತೆಗೆ ಕೇವಲ ನೀರು ಕುಡಿದಿದ್ದಕ್ಕೆ ಇಡೀ ಊರಲ್ಲಿ ಜಾತಿ ದ್ವೇಷದ ಬೆಂಕಿ ಹಚ್ಚಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ. 

ಇದನ್ನೂ ಓದಿ: ಯುಗಾದಿಗೆ ತಂದ ಮಟನ್ ತಲೆಮಾಂಸ ಬೆಂದಿಲ್ಲ ಅಂತ ಪೊಲೀಸ್ ಠಾಣೆ ಮೆಟ್ಟಿಲೇರಿದ ವ್ಯಕ್ತಿ