Asianet Suvarna News Asianet Suvarna News

ಜಿ7 ಮೀಟ್‌ಲ್ಲಿ ಪರಸ್ಪರ ತಬ್ಬಿ ಕಿಸ್ ಮಾಡಿದ ರಿಷಿ ಸುನಕ್ & ಜಾರ್ಜಿಯಾ ಮೆಲೋನಿ : ವೀಡಿಯೋ ವೈರಲ್

 ಇಟಲಿಯಲ್ಲಿ ಜಿ7 ರಾಷ್ಟ್ರಗಳ 50ನೇ ಶೃಂಗ ಸಭೆ ನಡೆಯುತ್ತಿದ್ದು, ವಿವಿಧ ದೇಶಗಳ ಗಣ್ಯರು ಈ ಜಿ7 ಶೃಂಗಕ್ಕೆ ಆಗಮಿಸುತ್ತಿದ್ದಾರೆ.  ಈ ಸಭೆಗೆ ಬಂದ  ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರನ್ನು ಇಟಲಿ ಪ್ರಧಾನಿ ಜಾರ್ಜಿಯಾ ಹಗ್ ಮಾಡಿ ಸ್ವಾಗತಿಸಿರುವ ವೀಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.

British PM Rishi Sunak and Italian PM Giorgia Meloni hug and kiss each other at the G7 meet Video goes viral akb
Author
First Published Jun 14, 2024, 5:20 PM IST

ಇಟಲಿ: ಇಟಲಿಯಲ್ಲಿ ಜಿ7 ರಾಷ್ಟ್ರಗಳ 50ನೇ ಶೃಂಗ ಸಭೆ ನಡೆಯುತ್ತಿದ್ದು, ವಿವಿಧ ದೇಶಗಳ ಗಣ್ಯರು ಈ ಜಿ7 ಶೃಂಗಕ್ಕೆ ಆಗಮಿಸುತ್ತಿದ್ದಾರೆ. ತನ್ನ ದೇಶದಲ್ಲಿ ನಡೆಯುತ್ತಿರುವ ಈ ಜಾಗತಿಕ ಶೃಂಗಕ್ಕೆ ಆಗಮಿಸುತ್ತಿರುವ ಪ್ರತಿಯೊಬ್ಬ ನಾಯಕರನ್ನು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಸ್ವತಃ ತಾವೇ ಖುದ್ದಾಗಿ ಸ್ವಾಗತಿಸುತ್ತಿದ್ದಾರೆ. ಹೀಗಿರುವಾಗ ಜಾರ್ಜಿಯಾ ಮೆಲೋನಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರನ್ನು ಕೂಡ ಸ್ವಾಗತಿಸಿದ್ದಾರೆ. ಆದರೆ ಬೇರೆಯವರಿಗೆ ಹೋಲಿಸಿದರೆ ಯುವ ನಾಯಕರಾದ ಇವರಿಬ್ಬರು ಪರಸ್ಪರ ಹಗ್ ಮಾಡಿ ಆಲಿಂಗನ ಮಾಡಿ ಸ್ವಾಗತ ಕೋರಿರುವ ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. 

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ವಿಶ್ವದ ಸುಂದರವಾಗಿರುವ ಪ್ರಭಾವಿ ರಾಜಕಾರಣಿಗಳಲ್ಲಿ ಒಬ್ಬರು.  ಈ ಹಿಂದೆ ಅಂದರೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ವಿಶ್ವಸಂಸ್ಥೆಯ ಜಾಗತಿಕ ತಾಪಮಾನ ಬದಲಾವಣೆ ಕುರಿತ ಸಭೆಯಲ್ಲಿ ಪ್ರಧಾನಿ ಮೋದಿಯವರ ಜೊತೆ ಸೆಲ್ಪಿ ತೆಗೆದುಕೊಂಡಿದ್ದರು. ಆ ಸೆಲ್ಪಿಯನ್ನು ಜಾರ್ಜಿಯಾ ಮೆಲೋನಿ ಅವರು COP28ರ ಒಳ್ಳೆಯ ಸ್ನೇಹಿತರು ಎಂದು ಬರೆದು ಮೆಲೋಡಿ ಎಂಬ ಹ್ಯಾಷ್‌ಟ್ಯಾಗ್ ಜೊತೆ ಶೇರ್ ಮಾಡಿದ್ದರು.  ಈ ಟ್ವಿಟ್‌ ಭಾರತೀಯ ಸಾಮಾಜಿಕ ಜಾಲತಾಣದಲ್ಲಿ ಎಷ್ಟರ ಮಟ್ಟಿಗೆ ವೈರಲ್ ಆಗಿತ್ತೆಂದರೆ ಒಂತರ  ಸುಂಟರಗಾಳಿಯನ್ನೇ ಎಬ್ಬಿಸಿತ್ತು. ಅದಾದ ನಂತರ ಎಲ್ಲಿ ನೋಡಿದರಲ್ಲಿ ಮೋದಿ ಹಾಗೂ ಮೆಲೋನಿ ಅವರ ಎಐ ನಿರ್ಮಿತ ಫೋಟೋಗಳು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹಲವು ದಿನಗಳ ಕಾಲ ಹರಿದಾಡಿದ್ದವು.

ಮೆಲೋನಿ ಮೋದಿ ಸೆಲ್ಫಿಗೆ ಸೋನಿಯಾ ರಿಯಾಕ್ಷನ್ ಹೇಗಿರುತ್ತೆ: ಟ್ರೋಲರ್ಸ್‌ ಕಲ್ಪಿತ ಎಡಿಟೆಡ್ ವಿಡಿಯೋ ಸಖತ್ ವೈರಲ್

ಜಿ7 ರಾಷ್ಟ್ರಗಳ 50ನೇ ಶೃಂಗಕ್ಕೆ ಆಗಮಿಸಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರನ್ನು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹಗ್ ಮಾಡಿ ಆಲಿಂಗಿಸುವ ಮೂಲಕ ಸ್ವಾಗತಿಸಿದ್ದರು.  ಇದರ ವೀಡಿಯೋ ವೈರಲ್ ಆಗುತ್ತಿದ್ದು, ಜನ ಇವರ ಜಾಗತಿಕ ವೇದಿಕೆಯಲ್ಲಿ ಇವರ ಮುಜುಗರ ಉಂಟು ಮಾಡುವ ನಡತೆಗೆ ಸಖತ್ ಕಾಮೆಂಟ್ ಮಾಡುತ್ತಿದ್ದಾರೆ. 

ಸುದ್ದಿ ಸಂಸ್ಥೆ ಎಎನ್‌ಐ ಶೇರ್ ಮಾಡಿದ ವೀಡಿಯೋದಲ್ಲಿ ಕಾಣಿಸುವಂತೆ ಬ್ರಿಟನ್ ಪ್ರಧಾನಿ ಭಾರತ ಮೂಲದ ರಿಷಿ ಸುನಕ್ ಅವರು 
ವೇದಿಕೆ ಮೇಲೆ ಗಣ್ಯರನ್ನು ಸ್ವಾಗತಿಸಲು ನಿಂತಿರುವ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರತ್ತ ನಡೆದು ಹೋಗುತ್ತಿದ್ದು, ಬಳಿಕ ಇಬ್ಬರು ಪರಸ್ಪರ ಹಗ್ ಮಾಡಿ ಕಿಸ್ ಮಾಡುವ ಮೂಲಕ ನಗುತ್ತಾ ಮಾತುಕತೆ ನಡೆಸುತ್ತಾರೆ. ನಂತರ ಇಬ್ಬರು ನಾಯಕರು ಫೋಟೊಗಳಿಗೆ ಫೋಸ್ ನೀಡುತ್ತಾರೆ. ವೀಡಿಯೋದಲ್ಲಿ ಇಷ್ಟೇ ಇರುವುದಾದರೂ ಆ ಕ್ಷಣಗಳು ಎಂದಿಗಿಂತ ಸ್ವಲ್ಪ ವಿಭಿನ್ನವಾಗಿ ಎಲ್ಲರ ಕಣ್ಣಿಗೆ ಕಾಣಿಸುತ್ತಿದ್ದು, ಶೀಘ್ರದಲ್ಲೇ ವೀಡಿಯೋ ವೈರಲ್ ಆಗಿದೆ. 

ಸ್ತ್ರೀಯರ ಬಗ್ಗೆ ಪತಿ ಚೆಲ್ಲು ಚೆಲ್ಲು ಮಾತು: ಸಂಗಾತಿಯಿಂದ ದೂರವಾದ ಇಟಲಿ ಪ್ರಧಾನಿ

ಪೋಸ್ಟ್ ಆದ ಕೆಲವೇ ಕ್ಷಣಗಳಲ್ಲಿ ಈ ವೀಡಿಯೋವನ್ನು 8 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.  ಜೊತೆಗೆ ನಗೆಯುಕ್ಕಿಸುವ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಒಬ್ಬರು ರಿಷಿಯನ್ನು ಎಳೆಯಬೇಡಿ ಎಂದು ಕಾಮೆಂಟ್ ಮಾಡಿದರೆ ಮತ್ತೊಬ್ಬರು ಜಾಸ್ತಿ ಬಾಗಬೇಡಿ ರಿಷಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಂದೆಡೆ ರಿಷಿ ಭಾರತ ಅಳಿಯನಾಗಿರುವುದರಿಂದ (ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಭಾರತದ ಉದ್ಯಮಿ  ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿಯವರ ಪುತ್ರಿ  ) ಅನೇಕ ನೆಟ್ಟಿಗರು ರಿಲ್ಯಾಕ್ಸ್ ಪ್ಲೀಸ್ ಅವರು ನಮ್ಮ ಬಾವಜೀ ಎಂದು ಕಾಮೆಂಟ್ ಮಾಡಿದ್ದಾರೆ.  ಇಲ್ಲೇಕೋ ಎಲ್ಲವೂ ಸಹಜವಾಗಿದೆ ಎಂದು ಅನಿಸುತ್ತಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.  ಮತ್ತೆ ಕೆಲವರು ನಮ್ಮ ಪ್ರಧಾನಿ ಮೋದಿ ಯಾವಾಗ ಅಲ್ಲಿಗೆ ಹೋಗುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಅಂದಹಾಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ತಮ್ಮ ಪತಿಯಿಂದ ದೂರವಾಗಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಪತಿ ಆಂಡ್ರಿಯಾ ಗಿಂಬ್ರೂನೊರಿಂದ ದೂರವಾಗುತ್ತಿರುವುದಾಗಿ ಜಾರ್ಜಿಯಾ ಘೋಷಿಸಿದ್ದರು. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹಾಗೂ ಆಂಡ್ರಿಯಾ ಗಿಯಾಂಬ್ರುನೊ ದಂಪತಿಗೆ ಒಂದು ಪುಟ್ಟ ಹೆಣ್ಣು ಮಗುವಿದೆ.

 ವೈರಲ್ ಆದ ಇಟಲಿ ಪ್ರಧಾನಿಯ ಮೆಲೋಡಿ ಸೆಲ್ಫಿಗೆ ನರೇಂದ್ರ ಮೋದಿ ಪ್ರತಿಕ್ರಿಯೆ!

ಪ್ರಧಾನಿ ನರೇಂದ್ರ ಮೋದಿ ಕೂಡ ಜಿ7 ಶೃಂಗದಲ್ಲಿ ಭಾಗವಹಿಸುವ ಸಲುವಾಗಿ ನಿನ್ನೆ ಇಟಲಿಗೆ ಹೋಗಿದ್ದಾರೆ. ಮೂರನೇ ಬಾರಿ ಪ್ರಧಾನಿಯಾದ ನಂತರ ಇಟಲಿಗೆ ಮೋದಿಯವರ ಮೊದಲ ಭೇಟಿ ಇದಾಗಿದೆ. 

ಇಲ್ಲಿದೆ ಮೆಲೋನಿ ರಿಷಿ ವೈರಲ್ ವೀಡಿಯೋ


 

Latest Videos
Follow Us:
Download App:
  • android
  • ios