ತಲೆಯಲ್ಲಿ ಫ್ರಿಡ್ಜ್ ಹೊತ್ತು ಸೈಕಲ್‌ನಲ್ಲಿ ಪ್ರಯಾಣ: ಯುವಕನ ಬ್ಯಾಲೆನ್ಸ್‌ಗೆ ನೆಟ್ಟಿಗರ ಶಹಭಾಷ್
ವ್ಯಕ್ತಿಯೊಬ್ಬ ತನ್ನ ತಲೆಯ ಮೇಲೆ ಫ್ರಿಡ್ಜ್‌ನ್ನು ನೇರವಾಗಿ ಇರಿಸಿ ಸೈಕಲ್ ತುಳಿದುಕೊಂಡು ಹೋಗುತ್ತಿರುವ ವಿಚಿತ್ರ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅಚ್ಚರಿಯ ಜೊತೆ ಈ ವೀಡಿಯೋದ ಸತ್ಯಾಸತ್ಯತೆ ಬಗ್ಗೆ ಪ್ರಶ್ನೆ ಮಾಡ್ತಿದ್ದಾರೆ.

ನಮ್ಮ ತಲೆಯಲ್ಲಿ ಸಣ್ಣದಾದ ಚೊಂಬು, ಬಿಂದಿಗೆಗಳೇ ನಿಲ್ಲದು, ಕೈ ಬಿಟ್ಟ ಕೂಡಲೇ ಕೆಳಗೆ ಬೀಳುತ್ತವೆ. ಹೀಗಿರುವಾಗ ವ್ಯಕ್ತಿಯೊಬ್ಬ ತನ್ನ ತಲೆಯ ಮೇಲೆ ಫ್ರಿಡ್ಜ್‌ನ್ನು ನೇರವಾಗಿ ಇರಿಸಿ ಸೈಕಲ್ ತುಳಿದುಕೊಂಡು ಹೋಗುತ್ತಿರುವ ವಿಚಿತ್ರ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅಚ್ಚರಿಯ ಜೊತೆ ಈ ವೀಡಿಯೋದ ಸತ್ಯಾಸತ್ಯತೆ ಬಗ್ಗೆ ಪ್ರಶ್ನೆ ಮಾಡ್ತಿದ್ದಾರೆ.
ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿಸೆರೆಯಾದ ವೀಡಿಯಯೋ ಇದಾಗಿದ್ದು, ಯುವಕನೋರ್ವ ತಲೆಯ ಮೇಲೆ ಫ್ರಿಡ್ಜ್‌ನ್ನು ನೇರವಾಗಿ ಇರಿಸಿ ಸೈಕಲ್ ತುಳಿಯುತ್ತಾ ಸಾಗುತ್ತಿದ್ದಾನೆ. ಯುವಕನ ಈ ಸಾಹಸವನ್ನು ಆ ರಸ್ತೆಯಲ್ಲಿ ಸಾಗುತ್ತಿರುವವರೆಲ್ಲಾ ತಮ್ಮ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆ ಹಿಡಿದಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಈ ವೀಡಿಯೋವನ್ನು Barstool Sports (@barstoolsports) ಎಂಬ ಪೇಜ್‌ನಿಂದ ಪೋಸ್ಟ್ ಮಾಡಲಾಗಿದ್ದು, ಲಕ್ಷಾಂತರ ಜನ ವೀಕ್ಷಿಸಿದ್ದಾರೆ.
ಗುರುತ್ವಾಕರ್ಷಣೆಯೇ ಇಲ್ಲದ ಬಾಹ್ಯಾಕಾಶದಲ್ಲಿ ಕಾಫಿ ಕುಡಿಯೋದು ಹೇಗೆ: ಗಗನಯಾತ್ರಿ ತೋರಿಸಿದ್ದಾರೆ ನೋಡಿ?
ವೀಡಿಯೋ ನೋಡಿದ ಅನೇಕರು ಹಲವು ರೀತಿಯ ಕಾಮೆಂಟ್ ಮಾಡಿ ಇದು ನಿಜವೇ ಎಂಬಂತೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಜೊತೆಗೆ ಯುವಕನ ಅಷ್ಟೊಂದು ಭಾರವಾದ ಪ್ರಿಡ್ಜ್‌ನ್ನು ಸೈಕಲ್ ಮೇಲೆ ಬೀಳದಂತೆ ಸಮತೋಲನ ಕಾಪಾಡುತ್ತಿರುವ ರೀತಿಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೆಲವರು ಇದು ನಿಜ ಅಲ್ಲವೇ, ನಿಜವಾಗಿದ್ದಲ್ಲಿ ಗ್ರೇಟ್ ಎಂದು ಅನುಮಾನದಿಂದಲೇ ಕಾಮೆಂಟ್ ಮಾಡಿದ್ದಾರೆ. ಈ ಯುವಕನ ಕುತ್ತಿಗೆ ಬಹಳ ಗಟ್ಟಿಯಾಗಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ನನ್ನ ಸಂಬಂಧವೂ ಕೂಡ ಇವನ ಕುತ್ತಿಗೆಯಷ್ಟೇ ಸಧೃಡವಾಗಿರಲಿ ಎಂದು ಕೆಲವರು ಸಧೃಡತೆಗೆ ಈತನ ಕುತ್ತಿಗೆಯನ್ನು ಹೋಲಿಕೆ ಮಾಡಿದ್ದಾರೆ. ಇನ್ನೊಬ್ಬರು ಆಫ್ರಿಕಾದಲ್ಲಿ ಇದೆಲ್ಲಾ ದೊಡ್ಡ ವಿಷಯವಲ್ಲ ಇದೆಲ್ಲಾ ಸಾಮಾನ್ಯ ಎಂಬಂತೆ ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇದು ಎಡಿಟೆಡ್ ವೀಡಿಯೋ ಫೇಕ್ ವೀಡಿಯೋ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ರಾಡ್ ತುಂಡಾಗಿ 29 ಅಡಿ ಎತ್ತರದಿಂದ ಕೆಳಗೆ ಬಿದ್ದ ಸರ್ಕಸ್ ಕಲಾವಿದ: ಆಘಾತಕಾರಿ ವೀಡಿಯೋ
2022ರ ಮಾರ್ಚ್‌ನಲ್ಲೂ ನ್ಯೂಯಾರ್ಕ್‌ನಲ್ಲಿ ಇದೇ ರೀತಿಯ ವೀಡಿಯೋವೊಂದು ವೈರಲ್ ಆಗಿತ್ತು, ಯುವಕನೋರ್ವ ತನ್ನ ಸೂಟ್‌ಕೇಸ್‌ನ್ನು ತಲೆಮೇಲೆ ಹೊತ್ತು ಸೈಕಲ್ ತುಳಿಯುತ್ತಾ ಬ್ಯಾಲೆನ್ಸ್ ಮಾಡುತ್ತಿರುವ ವೀಡಿಯೋ ವೈರಲ್ ಆಗಿತ್ತು. ಇದಕ್ಕೂ ಮೊದಲು ಭಾರತದ ವೀಡಿಯೋವೊಂದು ಕೂಡ ವೈರಲ್ ಆಗಿತ್ತು. ಆ ವೀಡಿಯೋದಲ್ಲಿ ಯುವಕನೋರ್ವ ದೇಶದ ಕಡಿದಾದ ತಿರುವು ಮುರುವುಗಳಿಂದ ಕೂಡಿದ ಸಾದ ರಸ್ತೆಯಲ್ಲಿ ಒಣಹುಲ್ಲಿನ ಬಂಡಲೊಂದನ್ನು ಹಿಡಿದುಕೊಂಡು ಸೈಕಲ್‌ನ್ನು ವೇಗವಾಗಿ ತುಳಿದುಕೊಂಡು ಹೋಗುತ್ತಿದ್ದ ಈ ದೃಶ್ಯವನ್ನು ಅದೇ ದಾರಿಯಲ್ಲಿ ಆತನ ಹಿಂದೆ ಸಾಗಿ ಬರುತ್ತಿದ್ದ ವಾಹನ ಸವಾರರೊಬ್ಬರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು. ಈ ವೀಡಿಯೋವನ್ನು ಸ್ವತಃ ಉದ್ಯಮಿ ಆನಂದ್ ಮಹೀಂದ್ರ ಅವರು ಕೂಡ ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದರು.