ತನ್ನದೇ ದಾಖಲೆ ಮುರಿದ ನೇಪಾಳಿ ಶೆರ್ಪಾ: 26ನೇ ಬಾರಿ ಎವರೆಸ್ಟ್ ಏರಿದ ಕಾಮಿರಿಟಾ
- 26ನೇ ಬಾರಿ ಮೌಂಟ್ ಎವರೆಸ್ಟ್ ಏರಿದ ಕಾಮಿರಿಟಾ
- ತಮ್ಮದೇ ದಾಖಲೆಯನ್ನು ಮುರಿದ ನೇಪಾಳದ ಶೇರ್ಪಾ ಕಾಮಿರಿಟಾ
- 52 ವರ್ಷದಲ್ಲಿ 26ನೇ ಬಾರಿ ಮೌಂಟ್ ಎವರೆಸ್ಟ್ ಏರಿ ಸಾಧನೆ
ಕಠ್ಮಂಡು: ಪರ್ವತಾರೋಹಣದಲ್ಲಿ ದಾಖಲೆ ಹೊಂದಿರುವ ನೇಪಾಳಿ ಪರ್ವತಾರೋಹಿ ಕಾಮಿ ರೀಟಾ ಶೆರ್ಪಾ ಅವರು 26ನೇ ಬಾರಿಗೆ ಮೌಂಟ್ ಎವರೆಸ್ಟ್ ಏರುವ ಮೂಲಕ ತನ್ನದೇ ಆದ ದಾಖಲೆಯನ್ನು ಮುರಿದಿದ್ದಾರೆ. ನೇಪಾಳಿ ಕ್ಲೈಂಬಿಂಗ್ ಗೈಡ್ ಕಾಮಿ ರೀಟಾ ಶೆರ್ಪಾ ಅವರು ತಮ್ಮ 52ನೇ ವಯಸ್ಸಿನಲ್ಲಿ 26 ನೇ ಬಾರಿ ಮೌಂಟ್ ಎವರೆಸ್ಟ್ ಅನ್ನು ಏರುವ ಮೂಲಕ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. ಕಠ್ಮಂಡು ಪೋಸ್ಟ್ ಪ್ರಕಾರ, ಕಾಮಿರಿಟಾ ಅವರು ಮೌಂಟ್ ಎವರೆಸ್ಟ್ ಏರುವ 11 ಜನರಿದ್ದ ನೇಪಾಳಿ ತಂಡದ ಭಾಗವಾಗಿದ್ದರು. ಶನಿವಾರ ಈ ತಂಡದೊಂದಿಗೆ ಕಾಮಿ ರೀಟಾ ಅವರು 8,848.86 ಮೀಟರ್ ಎತ್ತರದ ಶಿಖರವನ್ನು ತಲುಪಿದರು.
ಈ ಮೂಲಕ ಕಾಮಿ ರೀಟಾ ಪರ್ವತಾರೋಹಣದಲ್ಲಿ ಹೊಸ ವಿಶ್ವ ದಾಖಲೆಯನ್ನು ಸ್ಥಾಪಿಸಿದ್ದಾರೆ ಎಂದು ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಮಹಾನಿರ್ದೇಶಕ ತಾರಾನಾಥ್ ಅಧಿಕಾರಿ (Taranath Adhikari) ಹೇಳಿದರು. ವಿಶ್ವದ ಅತಿ ಎತ್ತರದ ಶಿಖರವನ್ನು ಈ ವರ್ಷ ಏರಿದ ಮೊದಲ ತಂಡ ಇದಾಗಿದೆ. ಕಾಮಿ ರೀಟಾ ಮೊದಲ ಬಾರಿಗೆ ಮೇ 13, 1994 ರಂದು ಎವರೆಸ್ಟ್ ಅನ್ನು ಏರಿದರು.
ಕಾಮಿ ರೀಟಾ ಅವರು ಸೆವೆನ್ ಸಮ್ಮಿಟ್ ಟ್ರೆಕ್ಸ್‌ನಲ್ಲಿ ( Seven Summit Treks) ಹಿರಿಯ ಪರ್ವತಾ ರೋಹಣ ಮಾರ್ಗದರ್ಶಕರಾಗಿದ್ದಾರೆ. 35 ವರ್ಷಗಳಿಗೂ ಹೆಚ್ಚಿನ ಪರ್ವತಾ ರೋಹಣದ ಅನುಭವವನ್ನು ಹೊಂದಿದ್ದಾರೆ. ರೀಟಾ ಅವರು 1994ರಲ್ಲಿ ಮೊದಲ ಬಾರಿಗೆ ಮೌಂಟ್ ಎವರೆಸ್ಟ್ ಏರಿದ್ದರು ಮತ್ತು ಅಂದಿನಿಂದ ವಾರ್ಷಿಕವಾಗಿ ಈ ವಿಶ್ವದ ಅತೀ ಎತ್ತರದ ಶಿಖರಕ್ಕೆ ದಂಡಯಾತ್ರೆಯನ್ನು ಕೈಗೊಳ್ಳುತ್ತಿದ್ದಾರೆ ಎಂದು ಸುದ್ದಿ ಸಂಸ್ಥೆ ಎಪಿ ವರದಿ ಮಾಡಿದೆ.
'ದೇವರ ಸಲಹೆ': 26ನೇ ಎವರೆಸ್ಟ್ ಚಾರಣ ಕೈಬಿಟ್ಟ ಕಮಿ!
ಕಾಮಿ ರೀಟಾ ಶೆರ್ಪಾ 26ನೇ ಬಾರಿಗೆ ಮೌಂಟ್ ಎವರೆಸ್ಟ್ ಏರಿದ್ದಾರೆ ಮತ್ತು ಮತ್ತೊಮ್ಮೆ ಅವರ ದಾಖಲೆಯನ್ನು ಅವರು ಮುರಿದಿದ್ದಾರೆ. ನೇಪಾಳದ ಒಳ್ಳೆಯ ಜನರಿಗೆ ಮತ್ತು ಹಿಮಾಲಯವನ್ನು ಏರುವ ವೀರ ಶೆರ್ಪಾಗಳಿಗೆ ಅಭಿನಂದನೆಗಳು ಎಂದು ಸೆವೆನ್ ಸಮ್ಮಿಟ್ ಟ್ರೆಕ್ಸ್ ಹೇಳಿದೆ. ಕಾಮಿರೀಟಾ ಅವರು ಕಳೆದ ವರ್ಷ ಮೇ ತಿಂಗಳಲ್ಲಿ ತಾವು 26ನೇ ಬಾರಿ ಪರ್ವತ ಏರುವ ನಿರ್ಧಾರವನ್ನು ಅರ್ಧದಲ್ಲಿ ಕೈ ಬಿಟ್ಟಿದ್ದರು. ಈ ವೇಳೆ ಅವರು ಪರ್ವತ ದೇವತೆ ಮತ್ತೊಂದು ಪ್ರಯತ್ನವನ್ನು ಮಾಡದಂತೆ ಎಚ್ಚರಿಕೆ ನೀಡಿತು ಎಂದು ಹೇಳಿದ್ದರು.
ಕೊರೋನಾದಿಂದ ಗುಣವಾದ ತಕ್ಷಣ ಎವರೆಸ್ಟ್‌ಗೆ: ಐಐಟಿ ಪದವೀಧರ ಚೌಧರಿ ಸಾಧನೆ!
ಸೆವೆನ್ ಸಮ್ಮಿಟ್ ಟ್ರೆಕ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಮಿಂಗ್ಮಾ ಶೆರ್ಪಾ (Mingma Sherpa) ಮಾತನಾಡಿ ಕಾಮಿ ರೀಟಾ ಅವರು 8000 ಮೀಟರ್‌ಗಿಂತಲೂ ಹೆಚ್ಚು ಎತ್ತರ ಏರಬಲ್ಲ ದಾಖಲೆಯನ್ನು ಹೊಂದಿದ್ದಾರೆ ಎಂದು ಹೇಳಿದರು. ಕಾಮಿ ರೀಟಾ (Kami Rita) ಎವರೆಸ್ಟ್ ಅನ್ನು 26 ಬಾರಿ ಹಾಗೂ ಜಗತ್ತಿನ ಎರಡನೇ ಅತೀ ಎತ್ತರದ ಶಿಖರವಾಗಿರುವ ಕೆ2 ವನ್ನು ಹಾಗೂ ಜಗತ್ತಿನ ನಾಲ್ಕನೇ ಅತೀ ಎತ್ತರದ ಪರ್ವತವಾದ ಲೋಟ್ಸೆಯನ್ನು ತಲಾ ಒಂದು ಬಾರಿ ಏರಿದ್ದಾರೆ ಎಂದು ಕಠ್ಮಂಡು ಪೋಸ್ಟ್ (Kathmandu Post) ತಿಳಿಸಿದೆ. ಈ ವರ್ಷ ನೇಪಾಳವು ಎವರೆಸ್ಟ್ ಅನ್ನು ಏರಲು 316 ಜನರಿಗೆ ಪರವಾನಗಿಗಳನ್ನು ನೀಡಿದೆ.