Asianet Suvarna News Asianet Suvarna News

ಅಫ್ಘಾನ್‌ನ ಹಸಿರು ಕಣ್ಣಿನ ಸುಂದರಿ ಇಟಲಿಗೆ ಸ್ಥಳಾಂತರ

  • ಅಫ್ಘಾನಿಸ್ತಾನದ ಹಸಿರು ಕಣ್ಣಿನ ನಿರಾಶ್ರಿತ ಮಹಿಳೆ ಶರ್ಬತ್‌ ಗುಲಾ(Sharbat Gula) ಇಟಲಿಗೆ(Italy) ಸ್ಥಳಾಂತರ
  • ಕುಟುಂಬ ಸದಸ್ಯರೊಂದಿಗೆ ಪಾಕಿಸ್ತಾನಕ್ಕೆ(Pakistan) ವಲಸೆ ಬಂದು ವಲಸೆ ಶಿಬಿರ ಸೇರಿದ್ದ ನಿರಾಶ್ರಿತ ಸುಂದರಿ
Nat Geo Green Eyed Girl Most Famous Afghanistan Refugee Sharbat Gula now In Italy dpl
Author
Bangalore, First Published Nov 27, 2021, 8:41 AM IST

ರೋಮ್‌(ನ.27): ದಶಕದ ಹಿಂದೆ ನ್ಯಾಷನಲ್‌ ಜಿಯೋಗ್ರಫಿ ನಿಯತಕಾಲಿಕೆಯ ಮುಖಪುಟದಲ್ಲಿ ಕಾಣಿಸಿಕೊಂಡು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದ ಅಷ್ಘಾನಿಸ್ತಾನದ ಹಸಿರು ಕಣ್ಣಿನ ನಿರಾಶ್ರಿತ ಮಹಿಳೆ ಶರ್ಬತ್‌ ಗುಲಾ(Sharbat Gula) ಅವರು ರೋಮ್‌ಗೆ ಬಂದಿದ್ದಾರೆ ಇಟಲಿ (Italy )ಸರ್ಕಾರ ತಿಳಿಸಿದೆ. ‘ಅಫ್ಘಾನ್ ಪ್ರಜೆ ಶರ್ಬತ್‌ ಗುಲಾ ರೋಮ್‌ ನಗರಕ್ಕೆ ಬಂದಿದ್ದಾರೆ’ ಎಂದು ಹೇಳಿಕೆ ಬಿಡುಗಡೆ ಮಾಡಿದೆ. ಆದರೆ ಯಾವಾಗ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. 1980ರ ದಶಕದಲ್ಲಿ ಸೋವಿಯತ್‌ ದಾಳಿಯ ಬಳಿಕ ಆಫ್ಘನ್‌ನ ಗುಲಾ ಕುಟುಂಬ ಸದಸ್ಯರೊಂದಿಗೆ ಪಾಕಿಸ್ತಾನಕ್ಕೆ(Pakistan) ವಲಸೆ ಬಂದು ವಲಸೆ ಶಿಬಿರ ಸೇರಿದ್ದರು.

ಈ ವೇಳೆ ಅಮೆರಿಕ ಛಾಯಾಗ್ರಾಹಕ ಸ್ಟೀವ್‌ ಮೆಕ್‌ಕ್ಯುರಿ ಗುಲಾ ಭಾವಚಿತ್ರವನ್ನು ಸೆರೆಹಿಡಿದಿದ್ದರು. ಆತಂಕ, ನೋವು, ಭವಿಷ್ಯದ ಕಳವಳ ಮೊದಲಾದ ಸಂಗತಿಗಳು ಆಕೆಯ ದಿಟ್ಟನೋಟದಲ್ಲಿ ಸೆರೆಯಾಗಿತ್ತು. ಆ ಫೋಟೋವನ್ನು ನ್ಯಾಷನಲ್ ಜಿಯಾಗ್ರಫಿಕ್‌ ನಿಯತಕಾಲಿಕೆಯ ಮುಖಪುಟದಲ್ಲಿ ಪ್ರಕಟಿಸಲಾಗಿತ್ತು.

Kim Jong Un: ಉ. ಕೊರಿಯಾದಲ್ಲಿ ಲೆದರ್ ಜಾಕೆಟ್ ಬ್ಯಾನ್, ಕಿಮ್ ಫ್ಯಾಷನ್ ಕಾಪಿ ಮಾಡ್ತಾರಂತ ಈ ಆದೇಶ!

ತಾಲಿಬಾನ್ (Taliban) ನಿಯಂತ್ರಿತ ಅಫ್ಘಾನಿಸ್ತಾನವನ್ನು(Afghanistan) ತೊರೆಯಲು ಆಕೆಗೆ ಸಹಾಯ ಮಾಡಿದ ಸಹಾಯ ಸಂಸ್ಥೆಗಳು ಕಳುಹಿಸಿದ ಮನವಿಗೆ ಪ್ರತಿಕ್ರಿಯಿಸಲಾಗಿದೆ ಎಂದು ರೋಮ್ ಹೇಳಿದೆ. ಅಫ್ಘಾನ್ ನಾಗರಿಕರ ವ್ಯಾಪಕವಾದ ಸ್ಥಳಾಂತರಿಸುವ ಕಾರ್ಯಕ್ರಮದ ಭಾಗವಾಗಿ ಜನರು ಇಟಲಿಗೆ ಪ್ರಯಾಣಿಸಲು ಮತ್ತು ಅವರ ಸ್ವಾಗತಕ್ಕೆ ಸರ್ಕಾರ ಯೋಜನೆ ಮಾಡಿದೆ ಎಂದು ತಿಳಿಸಲಾಗಿದೆ.

1980 ರ ದಶಕದಲ್ಲಿ US ಛಾಯಾಗ್ರಾಹಕ ಸ್ಟೀವ್ ಮೆಕ್‌ಕ್ಯುರಿ ಪಾಕಿಸ್ತಾನದ ಶಿಬಿರವೊಂದರಲ್ಲಿ ಆಕೆಯ ಭಾವಚಿತ್ರವನ್ನು ಸೆರೆಹಿಡಿದ ನಂತರ ಗುಲಾ ಅಫ್ಘಾನಿಸ್ತಾನದ ಅತ್ಯಂತ ಪ್ರಸಿದ್ಧ ನಿರಾಶ್ರಿತರಾದರು. ಅದನ್ನು ನ್ಯಾಷನಲ್ ಜಿಯಾಗ್ರಫಿಕ್ ನಿಯತಕಾಲಿಕದ ಮುಖಪುಟದಲ್ಲಿ ಪ್ರಕಟಿಸಲಾಯಿತು.

Nat Geo Green Eyed Girl Most Famous Afghanistan Refugee Sharbat Gula now In Italy dpl

1979 ರ ಸೋವಿಯತ್ ಆಕ್ರಮಣದ ಸುಮಾರು ನಾಲ್ಕು ಅಥವಾ ಐದು ವರ್ಷಗಳ ನಂತರ ತಾನು ಮೊದಲು ಅನಾಥಳಾಗಿ ಪಾಕಿಸ್ತಾನಕ್ಕೆ ಬಂದಿದ್ದೇನೆ ಎಂದು ಗುಲಾ ಹೇಳಿದ್ದರು. ಅಂದಿನಿಂದ ಗಡಿಯಲ್ಲಿ ಆಶ್ರಯ ಪಡೆದ ಲಕ್ಷಾಂತರ ಆಫ್ಘನ್ನರಲ್ಲಿ ಆಕೆಯೂ ಒಬ್ಬರು. ಸುಳ್ಳು ಗುರುತಿನ ಚೀಟಿಗಳನ್ನು ಬಳಸಿ ಪಾಕಿಸ್ತಾನದಲ್ಲಿ ಬದುಕಿದ್ದಕ್ಕಾಗಿ ಆಕೆಯನ್ನು ಬಂಧಿಸಿ 2016ರಲ್ಲಿ ಅಫ್ಘಾನಿಸ್ತಾನಕ್ಕೆ ಗಡಿಪಾರು ಮಾಡಲಾಯಿತು.

ಆಗಸ್ಟ್‌ನಲ್ಲಿ ತಾಲೀಬಾನಗ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದ ನಂತರ ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಸುಮಾರು 5,000 ಆಫ್ಘನ್ನರನ್ನು ಸ್ಥಳಾಂತರಿಸಿದೆ ಎಂದು ರೋಮ್ ಹೇಳಿದೆ. ಸೆಪ್ಟೆಂಬರ್ 9 ರಂದು ಯುರೋಪಿಯನ್ ದೇಶಕ್ಕೆ ಬಂದಿಳಿದ ನಂತರ ಅಫ್ಘಾನಿಸ್ತಾನದ ಮೊದಲ ಮಹಿಳಾ ಮುಖ್ಯ ಪ್ರಾಸಿಕ್ಯೂಟರ್ ಮಾರಿಯಾ ಬಶೀರ್ ಅವರಿಗೆ ಪೌರತ್ವವನ್ನು ನೀಡಿರುವುದಾಗಿ ಇಟಲಿ ಈ ತಿಂಗಳ ಆರಂಭದಲ್ಲಿ ಹೇಳಿತ್ತು.

Nat Geo Green Eyed Girl Most Famous Afghanistan Refugee Sharbat Gula now In Italy dpl

ಜರ್ಮನಿ, ಬ್ರಿಟನ್ ಮತ್ತು ಟರ್ಕಿ ಜೊತೆಗೆ ಅಫ್ಘಾನಿಸ್ತಾನದಲ್ಲಿ NATOದ US ನೇತೃತ್ವದ ಕಾರ್ಯಾಚರಣೆಯಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ಐದು ದೇಶಗಳಲ್ಲಿ ಇಟಲಿ ಕೂಡ ಒಂದು.

Follow Us:
Download App:
  • android
  • ios