ಕೊಸ್ಟಾರಿಕಾದಲ್ಲಿ ಜೈಲಿಗೆ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಬೆಕ್ಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಕ್ಕಿನ ದೇಹಕ್ಕೆ ಮಾದಕವಸ್ತುಗಳನ್ನು ಕಟ್ಟಲಾಗಿತ್ತು. ಕೋಸ್ಟರಿಕಾ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲು ಬೆಕ್ಕುಗಳನ್ನು ಬಳಸುವುದಕ್ಕೆ ಕುಖ್ಯಾತವಾಗಿದೆ.

ಜೈಲಿಗೆ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಬೆಕ್ಕನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದೇನು ಬೆಕ್ಕು ಕೂಡ ಮಾದಕವಸ್ತು ಸೇವನೆ/ಸಾಗಣೆಗೆ ಮುಂದಾಯ್ತ ಎಂದು ಅಚ್ಚರಿ ಪಡಬೇಡಿ. ಇಂತಹ ನಿಜವಾದ ಘಟನೆಯೊಂದು ಕೊಸ್ಟಾರಿಕಾದಲ್ಲಿ ನಡೆದಿದ್ದು, ಬೆಕ್ಕಿನ ಬಳಿ ಇದ್ದ ಮಾದಕವಸ್ತುಗಳನ್ನು ಪೊಲೀಸರು ಹಾಗೂ ಜೈಲಿನ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಜೊತೆಗೆ ಬೆಕ್ಕಿನ ವೀಡಿಯೋವನ್ನು ಕೂಡ ಅವರು ಬಿಡುಗಡೆ ಮಾಡಿದ್ದು, ಈ ಘಟನೆಯನ್ನು ನಂಬದೇ ಇರೋದಕ್ಕೆ ಸಾಧ್ಯವಾಗುತ್ತಿಲ್ಲ.

ಇದು ಹೇಗೆ ಸಾಧ್ಯ ಅಂತ ಯೋಚನೆ ಮಾಡ್ತಿದ್ದೀರಾ? ಅಂದಹಾಗೆ ಇಲ್ಲಿ ಮಾದಕವ್ಯಸನಿಗಳು ಹಾಗೂ ಮಾದಕವಸ್ತುಗಳ ಕಳ್ಳಸಾಗಣೆ ಪೆಡ್ಲರ್‌ಗಳು ಬೆಕ್ಕಿಗೆ ಈ ಬಗ್ಗೆ ತರಬೇತಿ ನೀಡಿದ್ದಾರೆ. ಅದರ ಪರಿಣಾಮವೇ ಇದು. ಸಾಮಾನ್ಯವಾಗಿ ಪುಟ್ಟ ಮರಿಗಳಿದ್ದಾಗಲೇ ಬೆಕ್ಕು ನಾಯಿ ಸೇರಿದಂತೆ ಹಲವು ಪ್ರಾಣಿಗಳಿಗೆ ತರಬೇತಿ ನೀಡಿದರೆ ತರಬೇತಿ ನೀಡಿದಂತೆಯೇ ಅವರ ವರ್ತನೆಗಳಿರುತ್ತವೆ. ನಾವು ಹೇಳುವುದನ್ನು ಅವುಗಳು ಮಾಡುತ್ತವೆ. ಅದೇ ರೀತಿ ಇಲ್ಲಿ ಬೆಕ್ಕಿಗೆ ತರಬೇತಿ ನೀಡಿ ಕಳ್ಳ ಕೆಲಸಕ್ಕೆ ನಿಯೋಜಿಸಿದರೆ ಈ ಖದೀಮರು.

ಕೋಸ್ಟರಿಕಾ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲು ನಾರ್ಕೊ ಬೆಕ್ಕುಗಳು ಮತ್ತು ಬೆಕ್ಕಿನ ಮರಿಗಳನ್ನು ಬಳಸುವುದಕ್ಕೆ ಕುಖ್ಯಾತವಾಗಿದೆ. ಹಾಗೆಯೇ ಇತ್ತೀಚಿನ ಪ್ರಕರಣವೊಂದರಲ್ಲಿ, ಅಧಿಕಾರಿಗಳು ತನ್ನ ದೇಹದ ಸುತ್ತಲೂ ಮಾದಕ ವಸ್ತುಗಳನ್ನು ಸುತ್ತಿಕೊಂಡಿದ್ದ ಬೆಕ್ಕಿನ ಮರಿಯನ್ನು ಹಿಡಿದಿದ್ದಾರೆ.

ಕೋಸ್ಟರಿಕಾದ ಪೊಕೊಸಿ ಸೆರೆಮನೆಯ ಕಾವಲುಗಾರರಿಗೆ ಜೈಲಿನ ಸಮೀಪವಿರುವ ಹಸಿರು ಪ್ರದೇಶದ ಮೂಲಕ ಅಸಾಮಾನ್ಯವಾದ ಏನೋ ಚಲಿಸುತ್ತಿರುವುದನ್ನು ಗಮನಿಸಿದರು. ಬಳಿಕ ಹತ್ತಿರ ಹೋಗಿ ನೋಡಿದಾಗ, ಕಪ್ಪುಬಿಳಿ ಬಣ್ಣದ ಸಂಯೋಜನೆ ಹೊಂದಿರುವ ಬೆಕ್ಕಿನ ದೇಹಕ್ಕೆ ಬಿಗಿಯಾಗಿ ಮುಚ್ಚಿದ ಎರಡು ಪೊಟ್ಟಣಗಳನ್ನು ಕಟ್ಟಿರುವುದನ್ನು ಅವರು ಗಮನಿಸಿದರು. ಆ ಬೆಕ್ಕು ಮಾದಕವಸ್ತುಗಳನ್ನು ಸಾಗಿಸುತ್ತಿತ್ತು. ನಂತರ ಬೆಕ್ಕಿನ ದೇಹಕ್ಕೆ ಕಟ್ಟಿದ ಈ ಮಾದಕವಸ್ತುಗಳನ್ನು ಬೇರ್ಪಡಿಸಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಸೇಸ್ಡಾಡಾಟ್‌ಕಾಮ್ ವರದಿಯ ಪ್ರಕಾರ, ಆ ಬೆಕ್ಕಿನ ಮರಿಯ ಬೆನ್ನಿಗೆ 235 ಗ್ರಾಂ ಗಾಂಜಾ ಬಂಡಲ್‌ಗಳು, 68 ಗ್ರಾಂ ಕ್ರ್ಯಾಕ್ ಪೇಸ್ಟ್ ಮತ್ತು ಸ್ವಲ್ಪ ಪ್ರಮಾಣದ ರೋಲಿಂಗ್ ಪೇಪರ್‌ಗಳನ್ನು ಕಟ್ಟಲಾಗಿತ್ತು. ಅಧಿಕಾರಿಗಳು ಕೂಡಲೇ ಈ ವಸ್ತುಗಳನ್ನು ವಶಕ್ಕೆ ಪಡೆದರು. ಪಡೆಯಲಾಯಿತು ಮತ್ತು ನಾರ್ಕೊ ಬೆಕ್ಕನ್ನು ಮೌಲ್ಯಮಾಪನಕ್ಕಾಗಿ ಕೋಸ್ಟರಿಕಾದ ರಾಷ್ಟ್ರೀಯ ಪ್ರಾಣಿ ಆರೋಗ್ಯ ಸೇವಾ ಸಂಸ್ಥೆಗೆ ಹಸ್ತಾಂತರಿಸಲಾಯಿತು. ಬೆಕ್ಕಿನ ಬೆನ್ನಿಗೆ ಮಾದಕದ್ರವ್ಯಗಳು ಏರಿದ್ದು ಹೇಗೆ ಅದನ್ನು ಕಟ್ಟಿದ್ದು ಯಾರು ಎಂಬ ಬಗ್ಗೆ ತನಿಖೆ ನಡೆಸಲು ಈಗ ಅಧಿಕಾರಿಗಳು ಮುಂದಾಗಿದ್ದಾರೆ.

ಕೋಸ್ಟರಿಕಾದ ನ್ಯಾಯ ಮತ್ತು ಶಾಂತಿ ಸಚಿವಾಲಯವೂ ಈ ವಿಚಾರವನ್ನು ತನ್ನ ಫೇಸ್‌ಬುಕ್ ಪೇಜ್ ಮೂಲಕ ಹಂಚಿಕೊಂಡಿದೆ. ಈ ಸುದ್ದಿ ಸ್ವಲ್ಪಹೊತ್ತಿನಲ್ಲೇ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಸೋಶಿಯಲ್ ಮೀಡಿಯಾ ಬಳಕೆದಾರರು ಈ ಪ್ರಾಣಿಯನ್ನು ನಾರ್ಕೊಮಿಚಿ ಎಂದು ಕರೆದಿದ್ದಾರೆ. ಎಂದರೆ ಸ್ಪ್ಯಾನಿಷ್ ಮಾತನಾಡುವ ದೇಶಗಳಲ್ಲಿ ಬೆಕ್ಕಿಗೆ ಜನಪ್ರಿಯ ಆಡುಭಾಷೆಯ ಪದವಾದ ನಾರ್ಕೊ ಎಂಬ ಹೆಸರಿನಿಂದ ಕರೆಯುತ್ತಾರೆ ಮಾದಕದ್ರವ್ಯಕ್ಕೂ ನಾರ್ಕೊ ಎನ್ನುತ್ತಾರೆ ಹೀಗಾಗಿ ಸೋಶಿಯಲ್ ಮೀಡಿಯಾ ಬಳಕೆದಾರರು ಇದಕ್ಕೆ ನಾರ್ಕೋ ಮಿಚಿ ಎಂದು ಕರೆದಿದ್ದಾರೆ. 

ಅಂತಾರಾಷ್ಟ್ರೀಯ ಪ್ರವಾಸಿಗರ ನೆಚ್ಚಿನ ನೆಲೆಯಾಗಿರುವ ಕೋಸ್ಟರಿಕಾವೂ ಮಾದಕವಸ್ತು ಬಳಕೆ ಮತ್ತು ಕಳ್ಳಸಾಗಣೆಯ ಕಾರಣಕ್ಕೆ ಸಾಕಷ್ಟು ಸುದ್ದಿಯಲ್ಲಿದೆ. ಕಳೆದ ವರ್ಷ, ದಿ ನ್ಯೂಯಾರ್ಕ್ ಟೈಮ್ಸ್ ಈ ಬಗ್ಗೆ ವರದಿ ಮಾಡಿತ್ತು. ಪ್ರವಾಸಿ ಸ್ವರ್ಗವು ಮಾದಕವಸ್ತು ಕಳ್ಳಸಾಗಣೆ ತಾಣವಾಗಿ ಮಾರ್ಪಟ್ಟಿದೆ ಎಂದು ವರದಿ ಮಾಡಿತ್ತು. ಅಲ್ಲದೇ 2023 ರಲ್ಲಿ ಕೋಸ್ಟರಿಕಾದಲ್ಲಿ 21 ಟನ್ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿತು. ಬೆಕ್ಕು ಸೇರಿದಂತೆ ಪ್ರಾಣಿಗಳ ಮೂಲಕ ಮಾದಕವಸ್ತುಗಳನ್ನು ಸಾಗಿಸುವುದು ಇಲ್ಲಿ ಸಾಮಾನ್ಯ ಎನಿಸಿದೆ.

View post on Instagram

View post on Instagram