8 ಕೋಟಿಗೆ ಹರಾಜಾಯ್ತು ಮೆಸ್ಸಿ 25 ವರ್ಷಗಳ ಹಿಂದೆ ಸಹಿ ಮಾಡಿದ ನ್ಯಾಪ್‌ಕಿನ್
ಅರ್ಜೆಂಟೈನಾದ ಪುಟ್ಭಾಲ್ ದಂತಕತೆ ಲಿಯೋನೆಲ್ ಮೆಸ್ಸಿ 23 ವರ್ಷಗಳ ಹಿಂದೆ ಸಹಿ ಮಾಡಿದ ನ್ಯಾಪ್‌ಕಿನ್ ಒಂದು ಬರೋಬರಿ $965,000 ಡಾಲರ್‌ಗಳಿಗೆ ಅಂದರೆ ಭಾರತದ ಸುಮಾರು 8 ಕೋಟಿ ರೂಪಾಯಿಗೆ ಹರಾಜಾಗಿದೆ.
ಲಂಡನ್: ಕೆಲವೊಂದು ಯಾವುದಕ್ಕೂ ಉಪಯೋಗಕ್ಕೆ ಬಾರದ ಆದರೆ ಐತಿಹಾಸಿಕವಾಗಿ ಅಮೂಲ್ಯವೆನಿಸಿದ ಕೆಲ ವಸ್ತುಗಳು ಕೋಟ್ಯಾಂತರ ಬೆಲೆಗೆ ಹರಾಜಾಗುತ್ತವೆ. ಅದೇ ರೀತಿ ಈಗ ಅರ್ಜೆಂಟೈನಾದ ಪುಟ್ಭಾಲ್ ದಂತಕತೆ ಲಿಯೋನೆಲ್ ಮೆಸ್ಸಿ 23 ವರ್ಷಗಳ ಹಿಂದೆ ಸಹಿ ಮಾಡಿದ ನ್ಯಾಪ್‌ಕಿನ್ ಒಂದು ಬರೋಬರಿ $965,000 ಡಾಲರ್‌ಗಳಿಗೆ ಅಂದರೆ ಭಾರತದ ಸುಮಾರು 8 ಕೋಟಿ ರೂಪಾಯಿಗೆ ಹರಾಜಾಗಿದೆ. ಬ್ರಿಟಿಷ್ ಹರಾಜು ಸಂಸ್ಥೆ ಬೊನ್ಹಾಮ್ಸ್ ಈ ವಿಚಾರವನ್ನು ಖಚಿತಪಡಿಸಿದೆ.
25 ವರ್ಷಗಳ ಹಿಂದೆ ಆಗ 13 ವರ್ಷದವರಾಗಿದ್ದ ಪುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ ಅವರು ಬಾರ್ಸಿಲೋನಾ ಟೆನಿಸ್ ಕ್ಲಬ್‌ನಲ್ಲಿ ಈ ನ್ಯಾಪ್‌ಕಿನ್‌ನಲ್ಲಿ (ಕರವಸ್ತ್ರ ಅಥವಾ ಕರ್ಚಿಫ್) ಬರೆಯಲಾದ ಲಿಖಿತ ಒಪ್ಪಂದಕ್ಕೆ ಸಹಿ ಮಾಡಿದ್ದರು. ಇದಾದ ನಂತರ ಕ್ಲಬ್ ಜೊತೆ ವಿವರವಾದ ಒಪ್ಪಂದವನ್ನು ಮಾಡಲಾಗಿತ್ತು.
ಹಣಕಾಸಿನ ಕೊರತೆ, ಲಿಯೋನೆಲ್ ಮೆಸ್ಸಿ ಜೊತೆಗಿನ ಒಪ್ಪಂದ ಕಡಿದುಕೊಂಡ ಬೈಜೂಸ್!
ಅಂದು ಒಪ್ಪಂದದ ಭಾಗವಾಗಿದ್ದ ಮೆಸ್ಸಿಯ ತಾಯ್ನಾಡಾದ ಅರ್ಜೆಂಟೈನಾದ ಏಜೆಂಟ್ ಹೊರಾಸಿಯೋ ಗಗ್ಗಿಯೋಲಿ ಪರವಾಗಿ ಈ ನ್ಯಾಪ್‌ಕಿನ್ ಅನ್ನು ಹರಾಜು ಹಾಕಲಾಯ್ತು ಎಂದು ಬ್ರಿಟಿಷ್ ಹರಾಜು ಸಂಸ್ಥೆ ಬೋನ್‌ಹಾಮ್ಸ್ ಹೇಳಿದೆ. ಇದರ ಮಾರಾಟದ ಬೆಲೆಯ ಶೇಕಡಾ ಮೊತ್ತವನ್ನು ಆನ್‌ಲೈನ್ ಹರಾಜಿನ ಆಡಳಿತಾತ್ಮಕ ಶುಲ್ಕವಾಗಿ ಪಾವತಿ ಮಾಡಲಾಗುತ್ತದೆ.
ಮೆಸ್ಸಿ ಅವರ ಈ ಒಪ್ಪಂದ ಪತ್ರವನ್ನು ನೀಲಿ ಇಂಕ್‌ನಲ್ಲಿ ಬರೆಯಲಾಗಿತ್ತು. ಅಲ್ಲದೇ ಇದಕ್ಕೆ ಮೆಸ್ಸಿಯವರ ತಂದೆ ಜಾರ್ಜ್ ಮೆಸ್ಸಿ ಅವರ ಒಪ್ಪಂದವೂ ಮುಂದುವರೆಯುತ್ತದೆ ಎಂಬ ಭರವಸೆ ನೀಡುವ ಉದ್ದೇಶವನ್ನು ಹೊಂದಿತ್ತು. ಬಾರ್ಸಿಲೋನಾ ಜೊತೆಗಿನ ಒಪ್ಪಂದ ಸ್ಥಗಿತಗೊಂಡಿದ್ದರಿಂದ ಜಾರ್ಜ್ ಮೆಸ್ಸಿ ಒಮ್ಮೆ ತನ್ನ ಮಗನನ್ನು ಮತ್ತೆ ಅರ್ಜೆಂಟೈನಾಗೆ ಕರೆದೊಯ್ಯುವ ಬೆದರಿಕೆಯೊಡ್ಡಿದ್ದರು.
ಇನ್ನು ಕರವಸ್ತ್ರ ಅಥವಾ ನ್ಯಾಪ್‌ಕಿನ್‌ನಲ್ಲಿ 2000 ಇಸವಿ ಡಿಸೆಂಬರ್ 14ರ ದಿನಾಂಕವಿದೆ. ಜೊತೆಗೆ ಗಗ್ಗಿಯೋಲಿ, ಮತ್ತೊಬ್ಬ ಏಜೆಂಟ್ ಮರಿಯಾ ಮಿಂಗೆಲ್ಲಾ ಮತ್ತು ಬಾರ್ಸಿಯಾದ ಅಂದಿನ ಕ್ರೀಡಾ ನಿರ್ದೇಶಕ ಕಾರ್ಲೆಸ್ ರೆಕ್ಸಾಚ್ ಅವರ ಸಹಿ ಇದೆ. ಟೆನಿಸ್ ಕ್ಲಬ್‌ನಲ್ಲಿ ನಡೆದ ಈ ಒಪ್ಪಂದದ ವೇಳೆ ಕಾರ್ಲೆಸ್ ರೆಕ್ಸಾಚ್ ಅವರು ವೇಟರ್ ಬಳಿ ಪೇಪರ್ ಕೇಳಿದರೆ ಆತ ಖಾಲಿ ಹಾಳೆಯಂತಿದ್ದ ಬಿಳಿ ಕರವಸ್ತ್ರವನ್ನು ನೀಡಿದ್ದ. ಈ ಐತಿಹಾಸಿಕ ಕರವಸ್ತ್ರದ ಆರಂಭಿಕ ದರವನ್ನು 3,15,70,264 ರೂಗೆ ಕೂಗಲಾಗಿತ್ತು.
ತಮ್ಮ 13ರ ಹರೆಯದಲ್ಲಿ ಕ್ಲಬ್‌ನ ಯುವ ಟೀಮ್‌ನಲ್ಲಿ ಆಡುವುದಕ್ಕಾಗಿ ಅರ್ಜೈಂಟೈನಾದಿಂದ ಬರ್ಸಿಲೋನಾಗೆ ಬಂದ ಮೆಸ್ಸಿ ಅವರು ಹತ್ತಿರ ಹತ್ತಿರ 2 ದಶಕಗಳ ಕಾಲ ಬಾರ್ಸಿಲೋನಾ ಪುಟ್ಬಾಲ್ ತಂಡದ ಭಾಗವಾಗಿದ್ದರು. 2004ರಲ್ಲಿ ತಮ್ಮ ಮೊದಲ ಪ್ರದರ್ಶನ ನೀಡಿದ ಅವರು ನಂತರ ಕ್ಲಬ್‌ನ 17 ಸೀಸನ್‌ಗಳಲ್ಲಿ ಆಟವಾಡಿದ್ದಾರೆ. ಈ ಮೂಲಕ ಪ್ರತಿ ಪ್ರಮುಖ ಟ್ರೋಫಿಯನ್ನು ಗೆಲ್ಲಿಸಿಕೊಡಲು ಬರ್ಸಿಲೋನಾಗೆ ನೆರವಾಗಿದ್ದಾರೆ. ಇದರಲ್ಲಿ 4 ಚಾಂಪಿಯನ್ ಲೀಗ್ ಟ್ರೋಫಿ ಹಾಗೂ 10 ಲಲಿಗಾ ಟೈಟಲ್‌ಗಳು ಸೇರಿವೆ. ಆದರೆ 2021ರಲ್ಲಿ ಮೆಸ್ಸಿ ಬಾರ್ಸಿಲೋನಾ ತಂಡವನ್ನು ತೊರೆದು ಪ್ಯಾರಿಸ್ನ ಸೇಂಟ್ ಜರ್ಮನಿಯಾ ತಂಡವನ್ನು ಸೇರಿದ್ದರು.