ಕಿಸ್, ರೋಮ್ಯಾನ್ಸ್ ಏನೇ ಇದ್ರೂ ಹೆಂಡ್ತಿ ಜೊತೆ ಮಾತ್ರ, ಅದೆಂಥಾ ಸುರಸುಂದರಿ ಬಂದ್ರೂ ಟಚ್ ಮಾಡಲ್ವಂತೆ ಲಿಯೋನೆಲ್ ಮೆಸ್ಸಿ!
ಅರ್ಜೆಂಟೀನಾ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಎಲ್ಲರಂಥಲ್ಲ. ಹಣ, ಪ್ರಖ್ಯಾತಿ ಎರಡೂ ಒಟ್ಟೊಟ್ಟಿಗೆ ಸಿಕ್ಕಾಗ ಮನಸ್ಸು ವಿಚಲಿತವಾಗೋದು ಜಾಸ್ತಿ. ಇದ್ದ ಬದ್ದ ಮಾಡೆಲ್‌ಗಳ ಜೊತೆಯಲ್ಲೆಲ್ಲಾ ಹೆಸರುಗಳು ತಳುಕು ಹಾಕಿಕೊಳ್ಳಲು ಆರಂಭಿಸುತ್ತದೆ. ಫುಟ್‌ಬಾಲ್‌ನಲ್ಲಿ ಇದು ಸಾಮಾನ್ಯ ಕೂಡ. ಆದರೆ, ಈ ಎಲ್ಲದರ ನಡುವೆ ಮೆಸ್ಸಿ ಮಾತ್ರ ವಿಭಿನ್ನ.
ಅರ್ಜೆಂಟೀನಾ ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಯಾರಿಗೆ ಗೊತ್ತಿಲ್ಲ ಹೇಳಿ. ಅರ್ಜೆಂಟೀನಾ ತಂಡವನ್ನು ಕಳೆದ ಬಾರಿ ವಿಶ್ವಕಪ್ ಟ್ರೋಪಿಗೆ ಮುನ್ನಡೆಸಿದ ನಾಯಕ. ಆದರೆ, ಮೆಸ್ಸಿ ಬಗ್ಗೆ ತಾವು ತಿಳಿದುಕೊಳ್ಳದೇ ಇರೋ ಸಾಕಷ್ಟು ಅಂಶಗಳಿವೆ.
ಮೆಸ್ಸಿ ಮದುವೆಯಾಗಿರೋದು ಬಾಲ್ಯದ ಗೆಳತಿ ಅಂಟೋನೆಲ್ಲಾ ರಕ್ಕುಜೋ ಅವರನ್ನು. ಈ ದಂಪತಿಗಳಿಗೆ ಮುದ್ದಾದ ಮೂವರು ಗಂಡುಮಕ್ಕಳಿದ್ದಾರೆ.
ಹಣ, ಪ್ರಖ್ಯಾತಿ ಎರಡೂ ಸಿಕ್ಕ ಬಳಿಕ ಸಾಮಾನ್ಯವಾಗಿ ಎಂಥಾ ವ್ಯಕ್ತಿಯಾದರೂ ಲಾಲಸೆಗೆ ಒಳಗಾಗುತ್ತಾನೆ. ಆದರೆ, ಮೆಸ್ಸಿ ಮಾತ್ರ ಅದರಲ್ಲಿ ಬಹಳ ಭಿನ್ನ. ಸುಖದ ಸುಪ್ಪತ್ತಿಗೆಯಲ್ಲಿದ್ದರೂ, ತಮ್ಮ ಜೀವನದಲ್ಲಿ ಇನ್ನೊಬ್ಬ ಹೆಣ್ಣನ್ನು ಅವರು ಎಂದೂ ಒಪ್ಪಲಿಲ್ಲ.
ಹಾಗಂತ ಮೆಸ್ಸಿಗೆ ಮಹಿಳಾ ಅಭಿಮಾನಿಗಳು ಅವರನ್ನು ಇಷ್ಟಪಡುವ ಹುಡುಗಿಯರು ಇಲ್ಲವೆಂದಲ್ಲ. ಅವರೆಷ್ಟೇ ಸುರಸುಂದರಿಯಾಗಿದ್ದರೂ, ಮೆಸ್ಸಿ ಮಾತ್ರ ತಮ್ಮ ಹತ್ತಿರವೂ ಬಿಟ್ಟುಕೊಳ್ಳೋದಿಲ್ಲ. ಅದಕಕೆ ಕಾರಣ ಪತ್ನಿಯ ಮೇಲಿನ ಪ್ರೀತಿ.
ಮಹಿಳಾ ಅಭಿಮಾನಿಗಳ ಜೊತೆ ಮೆಸ್ಸಿ ನಿಂತಿರುವ ಯಾವುದೇ ಫೋಟೋ ಬೇಕಾದರೂ ನೀವು ನೋಡಿ, ಅದರಲ್ಲಿ ಮೆಸ್ಸಿ ಒಂಚೂರು ಅವರನ್ನು ಟಚ್ ಕೂಡ ಮಾಡೋದಿಲ್ಲ. ಹೆಗಲ ಮೇಲೆ ಕೈ ಹಾಕುವ, ಕೈಕೈ ಹಿಡಿದುಕೊಳ್ಳುವ ದೃಶ್ಯವಂತೂ ಕಾಣೋಕೇ ಸಿಗೋದಿಲ್ಲ.
ಹಿಂದೊಮ್ಮೆ ಮೆಸ್ಸಿ ಇದೇ ವಿಚಾರದ ಬಗ್ಗೆ ಮಾತನಾಡಿದ್ದರು. ನನ್ನೆಲ್ಲಾ ಹಿನ್ನಡೆಯನ್ನು ಎದೆಯಲ್ಲಿ ಇಟ್ಟುಕೊಂಡವರು ನನ್ನ ಪತ್ನಿ. ಹಾಗಾಗಿ ನನ್ನ ಜೀವನದಲ್ಲಿ ಅವಳಿಗೆ ಎಲ್ಲಿಕ್ಕಿಂತ ವಿಶೇಷ ಸ್ಥಾನ ಎಂದಿದ್ದರು.
ಬಾಲ್ಯದಿಂದಲೂ ನಾನು ಹಾಗೂ ಅಂಟೋನೆಲ್ಲಾ ಒಟ್ಟಿಗೆ ಬೆಳೆದಿದ್ದೆವು. ಬಹುಶಃ ಅದೇ ಕಾರಣಕ್ಕೆ ನನ್ನ ಜೀವನದಲ್ಲಿ ಮತ್ತೊಂದು ಹುಡುಗಿ ಬರುವ ಅವಕಾಶವೇ ಸಿಗಲಿಲ್ಲ. 'ನನಗಿಂತ ಜಾಸ್ತಿ ನಾನು ಫುಟ್‌ಬಾಲ್ ಆಟಗಾರ ಆಗಬೇಕು ಎಂದು ಬಯಸಿದ್ದು ಅಂಟೋನೆಲ್ಲಾ' ಎಂದು ಮೆಸ್ಸಿ ಸಾಕಷ್ಟು ಬಾರಿ ಹೇಳಿದ್ದಾರೆ.
ಬಾಲ್ಯದಲ್ಲಿ ನನಗೆ ಏನೂ ಗೊತ್ತಾಗುತ್ತಿರಲಿಲ್ಲ. ನನಗೇನಾದರೂ ಅನಿಸಿದಾಗ 'ಹಾಯ್ ಅಂಟೋನೆಲ್ಲಾ..' ಎಂದು ಆರಂಭಿಸಿ ಕಾಗದದ ಮೇಲೆ ಪತ್ರ ಬರೆಯುತ್ತಿದ್ದೆ ಎಂದು ಮೆಸ್ಸಿ ತಮ್ಮ ಲವ್‌ಸ್ಟೋರಿ ಬಗ್ಗೆ ಮಾತನಾಡಿದ್ದಾರೆ.
ಲಿಯೋನೆಲ್ ಮೆಸ್ಸಿ ಮತ್ತು ಆಂಟೋನೆಲ್ಲಾ ರುಕ್ಕುಜೋ ಅವರ ಕಥೆಯು ಅರ್ಜೆಂಟೀನಾದ ರೊಸಾರಿಯೊದಲ್ಲಿ ಅವರ ಬಾಲ್ಯದಿಂದಲೂ ಹುಟ್ಟಿಕೊಂಡಿದೆ. ಅವರು ಮೆಸ್ಸಿಯ ಸಂಬಂಧಿ ಮತ್ತು ರೊಕುಝೊ ಅವರ ಸೋದರಸಂಬಂಧಿ ಲ್ಯೂಕಾಸ್ ಸ್ಕಗ್ಲಿಯಾ ಇಬ್ಬರೂ ಸಂಬಧಿಯಾಗಿದ್ದರು.
ಮೆಸ್ಸಿ ತನ್ನ ಫುಟ್ಬಾಲ್ ವೃತ್ತಿಜೀವನವನ್ನು ಮುಂದುವರಿಸಲು ಬಾರ್ಸಿಲೋನಾಗೆ ಹೋದಾಗಲೂ, ಪತ್ರ ಮುಖೇನ ಮೆಸ್ಸಿ ಹಾಗೂ ರುಕ್ಕುಜೋ ಸಂಪರ್ಕದಲ್ಲಿದ್ದರು.
2005ರಲ್ಲಿ ರುಕ್ಕುಜೋ ಅವರ ಆತ್ಮೀಯ ಸ್ನೇಹಿತೆಯ ಹಠಾತ್ ನಿಧನ ಎಲ್ಲವನ್ನೂ ಬದಲಾಯಿಸಿತ್ತು. ತನ್ನ ಫುಟ್‌ಬಾಲ್ ಜೀವನವನ್ನೇ ಪಣಕಟ್ಟು ಮೆಸ್ಸಿ ಅರ್ಜೆಂಟೀನಾಗೆ ವಾಪಾಸಾಗಿದ್ದರು. ಅಂದು ಮೊದಲ ಬಾರಿ ಆಕೆಯ ಕುರಿತಾಗಿ ಇರೋದು ಪ್ರೀತಿ ಎನ್ನುವುದು ಮೆಸ್ಸಿಗೆ ಗೊತ್ತಾಗಿತ್ತಂತೆ
2009ರಿಂದ ಜೊತೆಯಾಗಿ ಕಾಣಿಸಿಕೊಳ್ಳಲು ಆರಂಭಿಸಿದ ಮೆಸ್ಸಿ ಹಾಗೂ ರುಕ್ಕುಜೋ ತಮ್ಮ ಜೀವನವನ್ನು ಬಹಳ ಖಾಸಗಿಯಾಗಿಯೇ ಇರಿಸಿದ್ದರು.
2017ರಲ್ಲಿ ಮೆಸ್ಸಿ ಹಾಗೂ ರುಕ್ಕುಜೋ ಅವರ ವಿವಾಹ ರೊಸಾರಿಯೋದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆದಿತ್ತು. ಇದನ್ನು ಅರ್ಜೆಂಟೀನಾ ಈಗಲೂ ಶತಮಾನದ ಶ್ರೇಷ್ಠ ಮದುವೆ ಎಂದೇ ಕರೆಯುತ್ತದೆ.
ಮದುವೆಗೆ ಸಾಕಷ್ಟು ಅತಿಥಿಗಳು ಬಂದಿದ್ದರು. ಇದರಲ್ಲಿ ಮಹಿಳಾ ಗಣ್ಯರು ಕೂಡ ಇದ್ದರು. ಆದರೆ, ಯಾರೊಬ್ಬರೊಂದಿಗೆ ಮೆಸ್ಸಿ ಮೈ ತಾಕಿಸಿ ಫೋಟೋ ತೆಗೆಸಿಕೊಂಡಿರಲಿಲ್ಲ.
ಸಾಕಷ್ಟು ಬಾರಿ ಮೆಸ್ಸಿಯ ಮಹಿಳಾ ಅಭಿಮಾನಿಗಳು, ಸ್ವತಃ ಮೆಸ್ಸಿಯನ್ನು ಕೆರಳಿಸುವ ಪ್ರಯತ್ನ ಮಾಡಿದ್ದರು. ಆದರೆ, ಒಮ್ಮೆಯೂ ಅವರು ಯಶಸ್ವಿಯಾಗಲಿಲ್ಲ. ಮೈಮೇಲೆ ಬಿದ್ದು ಫೋಟೋ ತೆಗೆಸಿಕೊಳ್ಳಲು ಬಂದರೂ, ಮೆಸ್ಸಿ ಅದನ್ನು ನಯವಾಗಿ ತಿರಸ್ಕರಿಸುತ್ತಿದ್ದರು.
ಮಹಿಳಾ ಫ್ಯಾನ್ಸ್‌ಗಳೊಂದಿಗೆ ಫೋಟೋ ತೆಗೆಸಿಕೊಳ್ಳುವ ಸಂದರ್ಭ ಬಂದಾಗ ತಮ್ಮ ಎರಡೂ ಕೈಗಳನ್ನು ಪಾಕೆಟ್‌ನಲ್ಲಿ ಇರಿಸಿಕೊಳ್ಳುವ ಮೆಸ್ಸಿ, ಒಮ್ಮೊಮ್ಮೆ ತೀರಾ ದೂರ ಸರಿದು ನಿಂತು ಫೋಟೋ ತೆಗೆಸಿಕೊಳ್ಳುತ್ತಾರೆ.