ಲಂಡನ್(ಜು.25): ಇದು ಕೊರೋನಾ ಜಮಾನ. ಲಾಕ್‌ಡೌನ್ ಇಲ್ಲದಿದ್ದರೂ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ. ಆದರೆ ಲಂಡನ್‌ನ ಖ್ಯಾತ ಶಾಂಪಿಂಗ್ ಸ್ಟ್ರೀಟ್‌ನಲ್ಲಿದ್ದವರಿಗೆ ಆಶ್ಚರ್ಯ ಕಾದಿತ್ತು. ಕಾರಣ ಯುವಕನೋರ್ವ ಅಳುಕಿಲ್ಲದೆ, ನಾಚಿಕೆಯಿಲ್ಲದೆ ತನ್ನ ಪಾಡಿಗೆ ತಾನು ನಡೆದು ಹೋಗುತ್ತಿದ್ದ. ಇದರೆಲ್ಲೇನು ವಿಶೇಷ ಅಂತೀರಾ? ಈ ಯುವಕನ ಮೈಯಲ್ಲಿ ಕೇವಲ ಒಂದು ಮಾಸ್ಕ್ ಬಿಟ್ಟರೆ ಬೇರೆ ಬಟ್ಟೆ ಇರಲಿಲ್ಲ.

ಐವತ್ತೇಳು ವರ್ಷದ ಮಾಡೆಲ್ ನೀಡಿದ್ಲು ಬೆತ್ತಲೆ ಪೋಸ್!.

ಲಂಡನ್ ಶಾಂಪಿಂಗ್ ಸ್ಟ್ರೀಟ್‌ನಲ್ಲಿ ನಡೆದ ಈ ಘಟನೆ ಇದೀಗ ವೈರಲ್ ಆಗಿದೆ. ಲಂಡನ್ ನಗರದಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಧರಿಸಿದ ಹೊರಬಂದವರಿಗೆ ದುಬಾರಿ ದಂಡ ಹಾಕಲಾಗುತ್ತಿದೆ. ಆದರೆ ಈತ ಬೆತ್ತಲಾಗಿ ಮಾಸ್ಕ್‌ನಿಂದ ಮಾನ ಮುಚ್ಚಿ ತಿರುಗಾಡಿದ್ದು ಯಾಕೆ ಅನ್ನೋದು ಸ್ಪಷ್ಟವಾಗಿಲ್ಲ.

ತಮಾಷೆ ಅಲ್ಲ! ಮಾರುಕಟ್ಟೆಗೆ ಬಂದಿದೆ ಎಲ್‌ಇಡಿ ಮಾಸ್ಕ್..!

ನೀಲಿ ಬಣ್ಣದ ಮಾಸ್ಕ್‌ನಿಂದ ಮಾನ ಮುಚ್ಚಿಕೊಂಡಿದ್ದಾನೆ. ಮಾಸ್ಕ್‌ನ್ನು ಒಳ ಉಡುಪು ರೀತಿಯಲ್ಲಿ ಧರಿಸಿ ಶಾಂಪಿಂಗ್ ಸ್ಟ್ರೀಟ್ ಅಲೆದಾಡಿದ್ದಾನೆ. ಶಾಂಪಿಂಗ್ ಮಾಡಲು ಬಂದಿದ್ದ ಜನ, ಒಂದು ಕ್ಷಣ ಬೆತ್ತಲೆ ಯುವಕನ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.