ಲಿಸಾ ರೀನಾ ಎಂಬ ಮಾಡೆಲ್‌, ಈಕೆ ರಿಯಲ್‌ ಹೌಸ್‌ವೈವ್ಸ್ ಎಂಬ ಸೀರಿಯಲ್‌ನ ನಟಿ ಕೂಡ, ತನ್ನ ೫೭ನೇ ವರ್ಷದ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಿಂಧ ಆಚರಿಸಿಕೊಂಡಿದ್ದಾಳೆ. ಪ್ಲೇಬಾಯ್‌ ಆನ್‌ಲೈನ್‌ ಮ್ಯಾಗಜೈನ್‌ಗೆ ನಗ್ನವಾಗಿ ಪೋಸ್‌ ನೀಡಿ ತನ್ನ ಬರ್ತ್‌ಡೇ ಆಚರಿಸಿಕೊಂಡಿದ್ದಾಳೆ. ಈಕೆ ಹಿಂದೆಯೂ ಎರಡು ಮೂರು ಬಾರಿ ಪ್ಲೇಬಾಯ್‌ನಲ್ಲಿ ಕಾಣಿಸಿಕೊಂಡಿದ್ದಳು, ಪ್ಲೇಬಾಯ್‌ ಮ್ಯಾಗಜೈನ್‌ ನಗ್ನ ನಟಿಯರ ಫೋಟೋಗಳನ್ನು ಪ್ರಕಟಿಸುವುದರಲ್ಲಿ ಫೇಮಸ್‌ ಎಂಬುದು ನಿಮಗೆ ಗೊತ್ತಿದೆಯಷ್ಟೆ. ಇದರಲ್ಲಿ ಮಾಡೆಲ್‌ಗಳಾಗಿ ನಗ್ನವಾಗಿ ಕಾಣಿಸಿಕೊಂಡ ಹಲವಾರು ನಟಿಯರು ಮುಂದೆ ಹಾಲಿವುಡ್‌ನಲ್ಲೂ ಟಿವಿ ಸೀರಿಯಲ್‌ಗಳಲ್ಲೂ ಕಾಣಿಸಿಕೊಂಡು ಖ್ಯಾತರಾಗಿದ್ದಾರೆ. ಲಿಸಾ ರಿನಾ ಕೂಡ ಹೀಗೇ ಪ್ರಸಿದ್ಧಳಾದವಳು. ತನ್ನ ಫೋಟೋಗೆ' ಬರ್ತ್‌ಡೇ ಸೂಟ್‌' ಎಂದು ಹೆಸರು ಕೊಟ್ಟಿದ್ದಾಳೆ ಆಕೆ. ಅದರಲ್ಲಿ ಆಕೆಯ ಮೈಮೇಲೆ ಒಂದು ನೂಲಿನ ಎಳೆಯೂ ಇಲ್ಲ. ಈಕೆಯ ಈ ನಗ್ನಾವತಾರವನ್ನು ಆಕೆಯ ಗಂಡನೂ ಇಬ್ಬರೂ ಮಕ್ಕಳೂ ಅಚ್ಚರಿಯ ಉದ್ಗಾರಗಳೊಂದಿಗೆ ಸ್ವಾಗತಿಸಿದ್ದಾರೆ. ೫೭ನೇ ವರ್ಷದಲ್ಲೂ ಕಳೆಕಳೆಯಾಗಿ, ಆರೋಗ್ಯವಾಗಿರುವ ರಿನಾ, ಬಳ್ಳಿಯಂತೆ ಬಳುಕುತ್ತಾಳೆ. ಆರೋಗ್ಯಪೂರ್ಣ ಜೀವನಶೈಲಿಯಿಂದಾಗಿ ತಾನು ಹೀಗಿದ್ದೇನೆ ಎಂದು ಹೇಳಿಕೊಳ್ಳುತ್ತಾಳೆ. ಜೀವನವಿಡೀ ಟೆನ್ನಿಸ್‌ ಆಡಿದ್ದು ಹಾಗೂ ವರ್ಕೌಟ್‌ ಮಾಡುವುದರ ಜೊತೆಗೆ, ಆರೋಗ್ಯಪೂರ್ಣ ಕೌಟುಂಬಿಕ ಜೀನ್‌ ಹೊಂದಿದ್ದುದು ಕೂಡ ತನ್ನ ಮೈಮಾಟಕ್ಕೆ ಕಾರಣವಾಗಿದೆ ಎನ್ನುತ್ತಾಳೆ.

 

 
 
 
 
 
 
 
 
 
 
 
 
 

Birthday Suit 🎂

A post shared by L I S A R I N N A (@lisarinna) on Jul 11, 2020 at 4:46pm PDT


ಇತ್ತೀಚೆಗೆ ಪ್ಲೇಬಾಯ್‌ ಇನ್ನೂ ಒಂದು ವಿಚಿತ್ರ ಸಾಹಸ ಮಾಡಿದೆ. ಅದೇನೆಂದರೆ ಪುರುಷ ಮಾಡೆಲ್‌ ಅನ್ನು ಕವರ್‌ ಪೇಜ್‌ನಲ್ಲಿ ಹಾಕಿಕೊಂಡಿರುವುದು. ಬ್ಯಾಡ್‌ ಬನ್ನಿ ಎಂದೇ ಹೆಸರಾಗಿರುವ ಬೆನಿಟೋ ಆಂಟೋನಿಯೋ ಮಾರ್ಟಿನೆಜ್‌ ಒಕಾಸಿಯೋ ಎಂಬ ಕಲಾವಿದನ ವಿಚಿತ್ರ ಪಿಯರ್ಸಿಂಗ್‌ ಮಾಡಿಕೊಂಡ ಹಾಗೂ ಗಾಗಲ್ ಧರಿಸಿದ ಮುಖಪುಟವನ್ನು ಛಾಪಿಸಿದೆ. ಬಾಯಿಗೆ ಬೆರಳು ಹಚ್ಚಿರುವ ಈತ ಉಂಗುರಗಳನ್ನೂ ಪಾಲಿಶ್‌ ಮಾಡಿ ಅವುಗಳಿಗೂ ಉಂಗುರ ಹಚ್ಚಿಕೊಂಡಿದ್ದಾನೆ. ಕಿವಿ ಮೂಗುಗಳನ್ನೂ ರಿಂಗುಗಳಿವೆ. ಲೈಂಗಿಕ ವಿಚಾರದಲ್ಲಿ ಸ್ತ್ರೀಯರನ್ನು ಮಾತ್ರವೇ ಸುಖದ ಸಾಧನಗಳೆಂಬಂತೆ ನೋಡುವುದು ಸಲ್ಲ, ಪುರುಷರನ್ನೂ ಆ ರೀತಿ ಭಾವಿಸಬಾರದೇಕೆ ಎಂಬುದು ಬ್ಯಾಡ್‌ ಬನ್ನಿಯ ಅಭಿಪ್ರಾಯ. ಇದು ಪ್ಲೇಬಾಯ್‌ನ ಅಭಿಪ್ರಾಯವೂ ಹೌದೆಂಬಂತೆ ಹೇಳಲಾಗಿದೆ. ಆದರೆ ಪ್ಲೇಬಾಯ್‌ ದಶಕಗಳಿಂದಲೂ ನಗ್ನ ಸ್ತ್ರೀ ಮಾಡೆಲ್‌ಗಳನ್ನಷ್ಟೇ ಕವರ್‌ ಪೇಜ್‌ನಲ್ಲಿ ಮುದ್ರಿಸುತ್ತ ಬಂದಿದೆ. ಯಾಕೆಂದರೆ ಇದರ ಗಿರಾಕಿಗಳು ಸಂಪೂರ್ಣವಾಗಿ ಪುರುಷರು. 

ತಿಂಗಳ ನಂತರ ಮೌನ ಮುರಿದ ಸುಶಾಂತ್ ಗೆಳತಿ 'ಈ ಪ್ರೀತಿ ಶಾಶ್ವತ' 

ಪ್ಲೇಬಾಯ್‌ ಕಳೆದ ಕೆಲವು ವರ್ಷಗಳ ಹಿಂದೆ ತನ್ನ ಮುದ್ರಣವನ್ನು ನಿಲ್ಲಿಸಿತ್ತು. ಆದರೆ ಆನ್‌ಲೈನ್‌ ಆವೃತ್ತಿ, ಇ- ಪತ್ರಿಕೆಯನ್ನು ಉಳಿಸಿಕೊಂಡಿದೆ. ಇಂಟರ್‌ನೆಟ್‌ನಲ್ಲಿ ಪೋರ್ನ್‌ ಧಾರಾಳವಾಗಿ ಸಿಗುವ ಈ ದಿನಗಳಲ್ಲಿ ಪ್ಲೇಬಾಯ್‌ಗೆ ಹೆಚ್ಚೇನೂ ಬೇಡಿಕೆ ಹುಟ್ಟಲಿಕ್ಕಿಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಅದಕ್ಕೆ ತಕ್ಕಂತೆ ಅದು ಮುದ್ರಣ ನಿಲ್ಲಿಸುವ ಹಿಂದಿನ ಹಲವಾರು ವರ್ಷಗಳಿಂದ ಅದರ ಬೇಡಿಕೆ ಕುಸಿಯುತ್ತ ಬಂದಿತ್ತು. ಇಂಟರ್ನೆಟ್‌ ಪೋರ್ನೋಗ್ರಫಿಯ ನಡುವೆಯೂ ಪ್ಲೇಬಾಯ್‌ ತನ್ನ ಬೇಡಿಕೆಯನ್ನು ಉಳಿಸಿಕೊಂಡಿದೆ. ಅದರ ಬೇಡಿಕೆ ಇರುವುದು ನಗ್ನ ಯುವತಿಯರ ಫೋಟೋಗಳಲ್ಲಿ ಮಾತ್ರವೇ ಅಲ್ಲ. ಅದನ್ನು ಆ ಪತ್ರಿಕೆ ಎಷ್ಟು ಕಲಾತ್ಮಕವಾಗಿ ಪ್ರೆಸೆಂಟ್‌ ಮಾಡುತ್ತದೆ ಎಂಬುದರ ಬಗ್ಗೆ.

ನಾನು ಗರ್ಭಿಣಿಯಾದರೂ ಗರ್ಲ್‌ಫ್ರೆಂಡ್ಸ್‌ ಜೊತೆ ಬ್ಯುಸಿಯಾಗಿದ್ದ

ಹಾಲಿವುಡ್‌ ಫಿಲಂಗಳಲ್ಲಿ ಸಾಕಷ್ಟು ಸೆಕ್ಸ್‌ ಸೀನ್‌ಗಳು ಬರುತ್ತಿದ್ದಾಗಲೂ ಪ್ಲೇಬಾಯ್‌ಗೆ ಬೇಡಿಕೆ ಚೆನ್ನಾಗಿಯೇ ಇತ್ತು. ಅದನ್ನು ಹಸಿಬಿಸಿ ಕಾಮ ಪ್ರಚೋದನೆಗೆ ಬಳಸಿಕೊಳ್ಳುವವರಿಗಿಂತಲೂ ಹೆಚ್ಚಾಗಿ, ಸ್ತ್ರೀ ದೇಹದ ಕಲಾತ್ಮಕ ಏರಿಳಿತಗಳ ಸೌಂದರ್ಯದ ಆರಾಧಕರು ಅದನ್ನು ಖರೀದಿಸಿ ನೋಡುತ್ತಿದ್ದರು. ಪ್ಲೇಬಾಯ್‌ ಅಭಿಮಾನಿಗಳಲ್ಲಿ ದೊಡ್ಡ ದೊಡ್ಡ ಕಲಾವಿದರು, ರಾಜಕಾರಣಿಗಳು, ಸೆಲೆಬ್ರಿಟಿಗಳೂ ಇದ್ದಾರೆ. ಹಾಲಿವುಡ್‌ನ ಬೇಡಿಕೆಯ ನಟಿಯಾಗಿದ್ದ ಮರ್ಲಿನ್‌ ಮನ್ರೋ ಕೂಡ ಒಂದು ಕಾಲದಲ್ಲಿ ಪ್ಲೇಬಾಯ್ ಮಾಡೆಲ್‌ ಆಗಿದ್ದವಳೇ.

ಕೋಟಿ ಕೋಟಿ ಕೊಡ್ತೀನಿ ಅಂದ್ರೂ ಬೆತ್ತಲಾಗೋಕೆ ನೋ ಎಂದ ನಟಿ 
ಈಗಲೂ ನೀವು ಇನ್‌ಸ್ಟಗ್ರಾಂನ ಪ್ಲೇಬಾಯ್‌ ಅಕೌಂಟ್‌ಗೆ ಹೋದರೆ ಅಲ್ಲಿ ಹೊಸ ಮಾಡೆಲ್‌ಗಳ ನಿಬ್ಬೆರಗುಗೊಳಿಸುವ ನೂರಾರು ಚಿತ್ರಗಳನ್ನು ಕಾಣಬಹುದು.